ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಟ್ ಏರ್‌ವೇಸ್: ಸಿಬ್ಬಂದಿ ತಪ್ಪು ಗ್ರಹಿಕೆ

Last Updated 25 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ, (ಪಿಟಿಐ): ಕಳೆದ ತಿಂಗಳು ನಡೆದ ಘಟನೆಯೊಂದರಲ್ಲಿ ಜೆಟ್ ಏರ್‌ವೇಸ್‌ಗೆ ಸೇರಿದ ವಿಮಾನದ ಎಂಜಿನ್‌ನಲ್ಲಿ ಕಾಣಿಸಿಕೊಂಡ ಕೆಂಪು ಬೆಳಕನ್ನು ಸಿಬ್ಬಂದಿ ವರ್ಗದವರು ಬೆಂಕಿ ಎಂದು ತಪ್ಪಾಗಿ ಅರ್ಥೈಸಿಕೊಂಡ ಪರಿಣಾಮ ವಿಮಾನವನ್ನು ತುರ್ತಾಗಿ ಇಳಿಸಿದ್ದರಿಂದ ಸುಮಾರು 25 ಪ್ರಯಾಣಿಕರು ಗಾಯಗೊಂಡಿದ್ದರು  ಎಂದು ತನಿಖಾ ವರದಿ ತಿಳಿಸಿದೆ.

ಮುಂಬೈ-ಚೆನ್ನೈ 9ಡಬ್ಲ್ಯೂ-2302 ವಿಮಾನ ಕ್ಯಾಬಿನ್‌ನಲ್ಲಿ ಬೆಂಕಿಯಾಗಲಿ ಹೊಗೆಯಾಗಲಿ ಕಾಣಿಸಿಕೊಂಡಿರಲಿಲ್ಲ ಎಂದು ನಾಗರಿಕ ವಿಮಾನಯಾನ ವಿಭಾಗದ ಮಹಾ ನಿರ್ದೇಶನಾಲಯ (ಡಿಜಿಸಿಎ) ತಿಳಿಸಿದೆ. ಇದೇ ವೇಳೆ ಬೆಂಕಿಯ ಕುರಿತು ವಿಮಾನದ ಕಾಕ್‌ಪಿಟ್‌ನೊಳಗಿನ ಇಂಡಿಕೇಟರ್‌ಗಳು ಯಾವುದೇ ಸೂಚನೆ ನೀಡದಿದ್ದರೂ ಕೂಡ ಪರಿಸ್ಥಿತಿಯನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ಪೈಲಟ್ ಅಜಾಗರೂಕತೆಯಿಂದ ವರ್ತಿಸ್ದ್ದಿದರು ಎಂದು ಡಿಜಿಸಿಎ ಆರೋಪಿಸಿದೆ.

ವಿಮಾನದಲ್ಲಿ ಒಟ್ಟು 139 ಪ್ರಯಾಣಿಕರಿದ್ದರು. ಇವರನ್ನು ತುರ್ತಾಗಿ ತೆರವುಗೊಳಿಸುವ ವೇಳೆ 21 ಮಂದಿ ಗಾಯಗೊಂಡ್ದ್ದಿದರಲ್ಲದೆ ನಾಲ್ಕು ಮಂದಿಯ ಪರಿಸ್ಥಿತಿ ಗಂಭೀರವಾಗಿತ್ತು ಎಂದು 35 ಪುಟಗಳ ವರದಿ ತಿಳಿಸಿದೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT