ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟರ್ಕಿ: ಮುಂದುವರಿದ ರಕ್ಷಣಾ ಕಾರ್ಯ

Last Updated 26 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಅಂಕಾರ (ಐಎಎನ್‌ಎಸ್): ಟರ್ಕಿಯಲ್ಲಿ ಭಾನುವಾರ ಸಂಭವಿಸಿದ ಭೂಕಂಪದಲ್ಲಿ ಸಾವನ್ನಪ್ಪಿದವರ ಸಂಖ್ಯೆ 459ಕ್ಕೆ ತಲುಪಿದ್ದು, ಕನಿಷ್ಠ 1,352 ಮಂದಿ ಗಾಯಗೊಂಡಿದ್ದಾರೆ ಎಂದು  ವಿಪತ್ತು ಮತ್ತು ತುರ್ತು ನಿರ್ವಹಣಾ ಸಂಸ್ಥೆ ತಿಳಿಸಿದೆ.

ಭೂಕಂಪದಲ್ಲಿ 75,000 ಜನಸಂಖ್ಯೆ ಹೊಂದಿರುವ ಎರ್ಕಿಸ್ ಪಟ್ಟಣದಲ್ಲಿ ಸುಮಾರು 80ಕ್ಕೂ ಹೆಚ್ಚು ಬಹುಮಾಳಿಗೆ ಕಟ್ಟಡಗಳು ನೆಲಸಮಗೊಂಡಿವೆ. 

 ಸುಮಾರು 3,346 ರಕ್ಷಣಾ ಕಾರ್ಯಕರ್ತರನ್ನು ದುರಂತ ಸಂಭವಿಸಿದ ಸ್ಥಳಕ್ಕೆ ಕಳುಹಿಸಲಾಗಿದೆ ಎಂದು ಕ್ಸಿನುವಾ ಸುದ್ದಿಸಂಸ್ಥೆ ವರದಿ ಮಾಡಿದೆ.  ಇದೇ ವೇಳೆ ವ್ಯಾನ್ ಪ್ರಾಂತ್ಯದ ಎರ್ಕಿಸ್‌ನಲ್ಲಿ ಅವಶೇಷಗಳಡಿಯಿಂದ ಮಂಗಳವಾರ 2 ವಾರದ ಮಗುವನ್ನು ರಕ್ಷಿಸಲಾಗಿದೆ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ.

66 ಗಂಟೆಗಳ ಬಳಿಕ ಮಹಿಳೆಯ ರಕ್ಷಣೆ
ಎರ್ಕಿಸ್ (ಟರ್ಕಿ), (ಎಎಫ್‌ಪಿ):
ಪೂರ್ವ ಟರ್ಕಿಯಲ್ಲಿ ಪ್ರಬಲ ಭೂಕಂಪ ಸಂಭವಿಸದ 66 ಗಂಟೆಗಳ ಬಳಿಕ ಅವಶೇಷಗಳಡಿಯಿಂದ 27 ರ ಹರೆಯದ ಗೋಜ್ದೆ ಬಹಾರ್ ಎಂಬ ಮಹಿಳೆಯೊಬ್ಬರನ್ನು ರಕ್ಷಣಾ ಕಾರ್ಯಕರ್ತರು ಹೊರಕ್ಕೆ ತೆಗೆದಿದ್ದಾರೆ.
 
ಬಹಾರ್ ಅವರು ಭೂಕಂಪ ಪೀಡಿತ ವ್ಯಾನ್ ಪ್ರಾಂತ್ಯದ ಎರ್ಕಿಸ್ ಪಟ್ಟಣದಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಅವಶೇಷಗಳಡಿಯಿಂದ ಹೊರಗೆಳೆದ ತಕ್ಷಣವೇ ಅವರನ್ನು ಎರ್ಕಿಸ್‌ನ ಆಸ್ಪತ್ರೆಗೆ ದಾಖಲಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT