ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿವಿ ಸೆಟ್ ಒಡೆದ ಪ್ರಕರಣ; ಕ್ಷಮೆ ಕೋರಿದ ರಿಕಿ ಪಾಂಟಿಂಗ್!

Last Updated 22 ಫೆಬ್ರುವರಿ 2011, 17:30 IST
ಅಕ್ಷರ ಗಾತ್ರ

ಅಹಮದಾಬಾದ್ (ಪಿಟಿಐ): ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕ ರಿಕಿ ಪಾಂಟಿಂಗ್ ಅವರು ತಮ್ಮ ತಂಡದ ಡ್ರೆಸ್ಸಿಂಗ್ ಕೊಠಡಿಯಲ್ಲಿದ್ದ ಎಲ್‌ಸಿಡಿ ಟಿವಿ ಸೆಟ್‌ನ್ನು ಒಡೆದು ಹಾಕಿರುವ ಘಟನೆ ಸೋಮವಾರ ನಡೆದಿದೆ.

‘ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ರನ್ ಔಟಾದ ಪಾಂಟಿಂಗ್ ಡ್ರೆಸ್ಸಿಂಗ್ ಕೊಠಡಿಗೆ ಆಗಮಿಸಿದವರೇ ಎಲ್‌ಸಿಡಿ ಟಿವಿ ಸೆಟ್‌ನ್ನು ಒಡೆದು ಹಾಕಿದ್ದಾರೆ’ ಎಂದು ಗುಜರಾತ್ ಕ್ರಿಕೆಟ್ ಸಂಸ್ಥೆ (ಜಿಸಿಎ)’ ತಿಳಿಸಿದೆ. ಅವರು ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಕೇವಲ 28 ರನ್‌ಗಳಿಗೆ ಔಟ್ ಆಗಿದ್ದರು. ಈ ಘಟನೆಯನ್ನು ಆಸ್ಟ್ರೇಲಿಯಾ ಕ್ರಿಕೆಟ್ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಜಿಸಿಎ ಹೇಳಿದೆ.

ಕ್ಷಮೆ ಕೋರಿದ ಪಾಂಟಿಂಗ್: ಈ ಘಟನೆಗೆ ಸಂಬಂಧಿಸಿದಂತೆ ರಿಕಿ ಪಾಂಟಿಂಗ್ ಮಂಗಳವಾರ ಗುಜರಾತ್ ಕ್ರಿಕೆಟ್ ಸಂಸ್ಥೆಯ ಕ್ಷಮೆ ಕೋರಿದ್ದಾರೆ. ‘ಈ ಘಟನೆ ನಡೆಯಬಾರದಿತ್ತು. ಅನಿರೀಕ್ಷಿತವಾಗಿ ಕೈ ಮೀರಿ ನಡೆದು ಹೋಯಿತು’ ಎಂದು ಪಾಂಟಿಂಗ್ ಕ್ಷಮೆ ಕೋರಿದ್ದಾಗಿ ಆಸೀಸ್ ಮಾಧ್ಯಮ ಮುಖ್ಯಸ್ಥರು ತಿಳಿಸಿದ್ದಾರೆ.

ಪಾಂಟಿಂಗ್ ವರ್ತನೆ ಕುರಿತು ಪ್ರತಿಕ್ರಿಯಿಸಿರುವ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಬೆರ್ರಿ ರಿಚರ್ಡ್ಸ್, ‘ಡ್ರೆಸ್ಸಿಂಗ್ ಕೊಠಡಿಯಲ್ಲಿ ಈ ತರಹದ ಘಟನೆ ನಡೆಯಬಾರದಿತ್ತು. ಔಟಾದಾಗ ನಾವು ಅನೇಕ ಸಲ ಬೇಸರಗೊಂಡಿದ್ದೇವೆ.ಹಾಗಂತ ಕೆಟ್ಟ ವರ್ತನೆ ತೋರಬಾರದು. ಅದರಲ್ಲೂ ವಿಶ್ವಕಪ್ ಪಂದ್ಯಗಳಲ್ಲಿ’ ಎಂದು ಸೂಚ್ಯವಾಗಿ ಹೇಳಿದ್ದಾರೆ.

ಈ ಘಟನೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಭಾರತ ತಂಡದ ಮಾಜಿ ಆಟಗಾರ ಅರುಣ್ ಲಾಲ್ ‘ಪಾಂಟಿಂಗ್ ವರ್ತನೆ ಸರಿಯಾದುದ್ದಲ್ಲ. ಅವರು ತಪ್ಪು ಎಸಗಿದ್ದಾರೆ. ಔಟಾದಾಗ ಪ್ರತಿಯೊಬ್ಬರು ಬೇಸರಗೊಂಡಿರುತ್ತಾರೆ. ಆದರೆ ಅಸಭ್ಯವಾಗಿ ವರ್ತಿಸುವುದಿಲ್ಲ’ ಎಂದಿದ್ದಾರೆ. ವಿಶ್ವಕಪ್ ಪಂದ್ಯಗಳಲ್ಲಿ ಆಟಗಾರರು ಕೆಟ್ಟದ್ದಾಗಿ ವರ್ತಿಸಿದರೆ ಮುಂದಿನ ಜನಾಂಗಕ್ಕೆ ಯಾವ ಸಂದೇಶ ನೀಡಿದಂತಾಗುತ್ತದೆ’ ಎಂದು ಪ್ರಶ್ನಿಸಿದ್ದಾರೆ.

ಬಿಸಿಸಿಐಗೆ ದೂರು ನೀಡಲು ಜಿಸಿಎ ನಿರ್ಧಾರ: ‘ಪಾಂಟಿಂಗ್ ಕ್ಷಮೆ ಕೋರಿದರೂ, ಗುಜರಾತ್ ಕ್ರಿಕೆಟ್ ಸಂಸ್ಥೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಗೆ ದೂರು ನೀಡಲು ಮಂಗಳವಾರ ನಿರ್ಧರಿಸಿದೆ’ ಎಂದು ಜಿಸಿಎ ಕಾರ್ಯದರ್ಶಿ ರಾಜೇಶ್ ಪಟೇಲ್ ತಿಳಿಸಿದ್ದಾರೆ. ‘ಬಿಸಿಸಿಐ ದೂರು ನೀಡಲಾಗುವುದು. ಈ ಕುರಿತು ಬಿಸಿಸಿಐ ಅಂತಿಮ ತೀರ್ಮಾನ ತಗೆದುಕೊಂಡು ಐಸಿಸಿಗೆ ದೂರು ಕಳುಹಿಸಿಕೊಡುತ್ತದೆ’ ಎಂದು ರಾಜೇಶ್ ಹೇಳಿದ್ದಾರೆ. ಟಿವಿ ಸೆಟ್ 35,000 ರೂಪಾಯಿ ಮೌಲ್ಯವನ್ನು ಹೊಂದಿತ್ತು ಎಂದು ಜಿಸಿಎ ತಿಳಿಸಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT