ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಸಿಎಲ್ ಸ್ವಾಧೀನಕ್ಕೆ ಬ್ರಿಟಿಷ್ ಸಾಲ್ಟ್

Last Updated 21 ಡಿಸೆಂಬರ್ 2010, 10:55 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಇಂಗ್ಲೆಂಡ್‌ನ  ಪ್ರಮುಖ ಉಪ್ಪು ತಯಾರಿಕಾ ಸಂಸ್ಥೆ ಬ್ರಿಟಿಷ್ ಸಾಲ್ಟ್ ಲಿಮಿಟೆಡ್ ಅನ್ನು ಟಾಟಾ ಕೆಮಿಕಲ್ಸ್‌ನ ಅಂಗಸಂಸ್ಥೆ ಬ್ರನ್‌ರ್ ಮೊಂಡ್ ಸ್ವಾಧೀನಪಡಿಸಿಕೊಂಡಿದೆ.

ಬ್ರಿಟಿಷ್ ಸಾಲ್ಟ್ ಲಿಮಿಟೆಡ್ ಇಂಗ್ಲೆಂಡ್‌ನ ಉಪ್ಪು ಮಾರುಕಟ್ಟೆಯಲ್ಲಿ ಶೇ 50ರಷ್ಟು ಪಾಲು ಹೊಂದಿದೆ. ಅದನ್ನು ಭಾರತದ ಟಾಟಾ ಕೆಮಿಕಲ್ಸ್‌ನ ಅಂಗಸಂಸ್ಥೆ ವಶಪಡಿಸಿಕೊಂಡಿರುವುದರಿಂದ ಇನ್ನು ಮುಂದೆ ಬ್ರಿಟನ್ನಿನ ಅರ್ಧದಷ್ಟು ಜನರು ಟಾಟಾ ಉಪ್ಪು ಸೇವಿಸಲಿದ್ದಾರೆ. ಈ ಸ್ವಾಧೀನ ಪ್ರಕ್ರಿಯೆಯು (ಅಂದಾಜು ರೂ 700 ಕೋಟಿ) 14.46 ಕೋಟಿ ಡಾಲರ್‌ಗಳಷ್ಟಿದೆ.  ‘ಟಿಸಿಎಲ್’ನ ಸಂಪೂರ್ಣ ಸ್ವಾಮ್ಯಕ್ಕೆ ಒಳಪಟ್ಟಿರುವ ಬ್ರನ್ನರ್ ಮೊಂಡ್, ಬ್ರಿಟಿಷ್ ಸಾಲ್ಟ್ ಲಿಮಿಟೆಡ್‌ನಲ್ಲಿ ಶೇ 100ರಷ್ಟು ಪಾಲು ಬಂಡವಾಳ ಹೊಂದಲಿದೆ. ಈ ಸ್ವಾಧೀನ ಪ್ರಕ್ರಿಯೆಗೆ ಬೇಕಾದ ಮೊತ್ತವನ್ನು ಸಾಲದ ಮೂಲಕ ಭರಿಸಲಾಗುತ್ತಿದೆ.

ಆಹಾರ ಮತ್ತು ಕೃಷಿ ಉತ್ಪನ್ನಗಳ ವಹಿವಾಟಿನಲ್ಲಿ ‘ಟಿಸಿಎಲ್’ನ ಮಾರುಕಟ್ಟೆ ಪಾಲು ಹೆಚ್ಚಿಸಲು ಈ ಸಂಸ್ಥೆ ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ಟಾಟಾ ಕೆಮಿಕಲ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಆರ್. ಮುಕುಂದನ್ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT