ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೂರ್‌ ಆಫ್ ನೀಲಗಿರಿ: ನೀಲ್, ವಿಕಿ ಶುಭಾರಂಭ

Last Updated 16 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಮೈಸೂರು: ಡೆನ್ಮಾರ್ಕಿನ ನೀಲ್ ಇ ಬ್ರಾಡ್‌ಬರ್ಗ್ ಮತ್ತು ಬೆಂಗಳೂರಿನ ವಿಕಿ ನಿಕೋಲ್ಸನ್ ಸೋಮವಾರ ಆರಂಭ ವಾದ ಟೂರ್ ಆಫ್ ನೀಲಗಿರಿಸ್ ಸೈಕ್ಲಿಂಗ್‌ನ ಮೊದಲ ಲೀಗ್‌ನ 16 ಕಿ.ಮೀ. ರೇಸ್‌ನಲ್ಲಿ ಕ್ರಮವಾಗಿ ಪುರುಷ ಮತ್ತು ಮಹಿಳೆಯರ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.

ಬೆಂಗಳೂರಿನಿಂದ ಬೆಳಿಗ್ಗೆ ಆರಂಭ ವಾದ ಈ ರೇಸ್‌ನಲ್ಲಿ 103 ಸ್ಪರ್ಧಿಗಳು ಭಾಗವಹಿಸಿದ್ದು, ಮೈಸೂರಿಗೆ ಸಂಜೆ ಬಂದು ತಲುಪಿದ್ದಾರೆ. ಮಾರ್ಗಮಧ್ಯ ದಲ್ಲಿ ಗುರುತಿಸಲಾದ 16 ಕಿ.ಮೀ ಅಂತರದಲ್ಲಿ ಸ್ಪರ್ಧೆ ನಡೆಯಿತು. ಮಂಗಳವಾರ ಬೆಳಿಗ್ಗೆ ಸ್ಪರ್ಧಿಗಳು ಇಲ್ಲಿಂದ ಊಟಿಗೆ ತೆರಳುವರು. ಒಟ್ಟು ಎಂಟು ದಿನಗಳ ಟೂರ್ ಇದಾಗಿದ್ದು, 23ರಂದು ಮೈಸೂರಿನಲ್ಲಿಯೇ ಪ್ರಶಸ್ತಿ ಪ್ರದಾನ ನಡೆಯಲಿದೆ.

ಫಲಿತಾಂಶಗಳು: ಪ್ರಥಮ ಲೀಗ್: 16 ಕಿ.ಮೀ:  ಪುರುಷರ ವಿಭಾಗ: ನೀಲ್ ಇ. ಬ್ರಾಡ್‌ಬರ್ಗ್ (ಡೆನ್ಮಾರ್ಕ್)–1, ಮಾರ್ಕ್ ಬ್ರೂಸ್
(ಯುನೈಟೆಡ್ ಕಿಂಗ್‌ಡಮ್‌)–2, ಕ್ರಿಸ್ಟಿಯನ್ ಜಿ. ಲಾರ್ಸನ್ (ಡೆನ್ಮಾರ್ಕ್)–3 ಕಾಲ: 21ನಿ.3.85ಸೆ; ಮಾಸ್ಟರ್ಸ್‌ (35 ವರ್ಷ ಮೇಲ್ಪಟ್ಟವರು): ಜೋವಾ ಸುಟೆನ್ಸ್ (ಯುನೈಟೆಡ್ ಕಿಂಗ್‌ಡಮ್)–1, ಕ್ರಿಸ್ಟೋಫರ್ ಹೇ (ಯುಕೆ)–2, ಗೌತಮ್ ರಾಜಾ (ಬೆಂಗಳೂರು)–3, ಕಾಲ: 24ನಿ, 12.4ಸೆ;
ಮಹಿಳೆಯರು: ವಿಕಿ ನಿಕೋಲ್ಸ್ನ್ (ಬೆಂಗಳೂರು)–1, ಲಿಂಡಾ ಇವಾನ್ಸ್‌ (ಯುಕೆ)–2, ಸೌಮ್ಯ ಅರಸ್ (ಮೈಸೂರು)–3 ಕಾಲ: 24ನಿ, 35.5ಸೆ;

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT