ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ಯಾಂಕರ್‌ ನೀರು ಸರಬರಾಜು ಹಣ ಪಾವತಿಗೆ ಸೂಚನೆ

Last Updated 21 ಸೆಪ್ಟೆಂಬರ್ 2013, 8:53 IST
ಅಕ್ಷರ ಗಾತ್ರ

ಮಾಲೂರು: ಖಾಸಗಿ ಕೊಳವೆಬಾವಿ ಹಾಗೂ ಟ್ಯಾಂಕರ್‌ ಮೂಲಕ ಕುಡಿ­ಯುವ ನೀರನ್ನು ಗ್ರಾಮಗಳಿಗೆ ಸರಬ­ರಾಜು ಮಾಡಿರುವವರಿಗೆ ಬಾಕಿಯಿರುವ `1.40 ಕೋಟಿ ರೂಪಾಯಿಯನ್ನು ವಾರ­ದೊಳಗೆ ಪಾವತಿಸಲಾಗುವುದು ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಪುಟ್ಟಸ್ವಾಮಿ ತಿಳಿಸಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಸಾಮಾನ್ಯ ಸಭೆ ಅಧ್ಯಕ್ಷತೆ ವಹಿಸಿದ್ದ ಅವರು, ತಾಲ್ಲೂಕಿನ 28 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಖಾಸಗಿ ಕೊಳವೆಬಾವಿ­ಗಳು, ಟ್ಯಾಂಕರ್‌ಗಳ ಮೂಲಕ  ನೀರು ಸರಬರಾಜು ಮಾಡಿರುವವರಿಗೆ ಬಾಕಿ ಇರುವ ಹಣದ ಬಗ್ಗೆ ಸದಸ್ಯ ಗೋಪಾಲ್‌­ಗೌಡ ಪ್ರಶ್ನೆಗೆ ಅವರು ಉತ್ತರಿಸಿದರು.

ಪಟ್ಟಣದ ಮುಖ್ಯರಸ್ತೆಯ ಮಾರುತಿ ಬಡಾವಣೆಯಲ್ಲಿರುವ ತಾಲ್ಲೂಕು ಪಂಚಾಯಿತಿಗೆ ಸೇರಿದ ವಸತಿ ಗೃಹಗಳು ಶಿಥಿಲವಾಗಿದ್ದು, ಕುಸಿಯುವ ಸಂಭವ­ವಿದೆ. ಕೂಡಲೇ ಕುಟುಂಬಗಳನ್ನು ತೆರವು­ಗೊಳಿಸಲು ಸೂಚಿಸಲಾಗಿದೆ ಎಂದರು.

ಶಾಸಕರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ತಾಲ್ಲೂಕು ಪಂಚಾ­ಯಿತಿಗೆ ಸೇರಿದ ವಾಣಿಜ್ಯ ಮಳಿಗೆಗಳಿಗೆ ಪರಿಷ್ಕೃತ ಬಾಡಿಗೆಗಳನ್ನು ನಿಗದಿ ಪಡಿಸ­ಲಾಗಿತ್ತು. ಆದರೆ ಬಾಡಿಗೆದಾರರು ಇಲ್ಲಿಯ ತನಕ ಬಾಡಿಗೆ ಪಾವತಿಸಿಲ್ಲ. ಒಂದು ವಾರದ ಗಡವು ನೀಡಲು ತೀರ್ಮಾನಿಸಲಾಗಿದೆ ಎಂದು ಅಧ್ಯಕ್ಷರು ತಿಳಿಸಿದರು.

ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಆರೋಗ್ಯ ಸಹಾಯಕಿಯರ ಕೊರತೆಯಿದ್ದು, ಕೆಲವು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಬೀಗ ಹಾಕ­ಲಾಗಿದೆ. ಸದ್ಯ ಕಾರ್ಯ ನಿರ್ವಹಣೆ ಹೇಗೆ ಎಂದು ಪುಟ್ಟಸ್ವಾಮಿ ಪ್ರಶ್ನಿಸಿ­ದರು.

ಅದಕ್ಕೆ ಉತ್ತರಿಸಿದ ಆರೋಗ್ಯಾಧಿಕಾರಿ ಅನುರಾಧಾ, ತಾಲ್ಲೂಕಿನಾದ್ಯಂತ 45 ಮಹಿಳಾ ಆರೋಗ್ಯ ಸಹಾಯಕಿಯರ ಅವಶ್ಯಕತೆ ಇದೆ. ಪ್ರಸ್ತುತ ಇರುವ 16 ಸಹಾಯಕಿಯರನ್ನೇ ಅವಶ್ಯಕತೆ ಇರುವ ಕಡೆ ಕಾರ್ಯ ನಿರ್ವಹಿಸಲು ಸೂಚಿಸ­ಲಾಗಿದೆ. ಪಟ್ಟಣದ ಸಾರ್ವಜನಿಕ ಆಸ್ಪತ್ರೆ­ಯಲ್ಲಿ ‘ಡಿ’ ದರ್ಜೆ ನೌಕರರು ಸೇರಿದಂತೆ 33 ಮಂದಿ ಸಿಬ್ಬಂದಿ ಅಗತ್ಯವಿದ್ದು, ಕೇವಲ 5 ಮಂದಿ ಕಾರ್ಯ ನಿರ್ವಹಿಸು­ತ್ತಿದ್ದಾರೆ.

ಸ್ವಚ್ಛತೆಗೆ ತೊಂದರೆಯಾಗಿದೆ. ತಾಲ್ಲೂಕು ಪಂಚಾಯಿತಿಯಿಂದ ಗುತ್ತಿಗೆ ಆಧಾರದಲ್ಲಿ ಸಿಬ್ಬಂದಿಯನ್ನು ನೇಮಕ ಮಾಡುವಂತೆ ಮನವಿ ಮಾಡಿದರು.

ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ರಾಜಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಕೃಷ್ಣಪ್ಪ, ಕಾರ್ಯನಿರ್ವಹಣಾಧಿಕಾರಿ ಬದರೀನಾಥ್‌, ಯೋಜನಾಧಿಕಾರಿ ಫಣೀಂದ್ರ ಸೇರಿದಂತೆ ಎಲ್ಲಾ ಇಲಾಖಾ­ಧಿಕಾರಿಗಳು ಸಭೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT