ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಮ್ಮಿ ಅಭ್ಯರ್ಥಿ ವಿರುದ್ಧ ಪ್ರಕರಣಕ್ಕೆ ಅವಕಾಶ

Last Updated 24 ಮಾರ್ಚ್ 2014, 9:14 IST
ಅಕ್ಷರ ಗಾತ್ರ

ಗುಲ್ಬರ್ಗ: ಲೋಕಸಭಾ ಸಾರ್ವತ್ರಿಕ ಚುನಾ­ವಣೆಯಲ್ಲಿ ಯಾವುದೇ ಅಭ್ಯರ್ಥಿಯು ಮತ್ತೊಬ್ಬ ಅಭ್ಯರ್ಥಿಯ ಡಮ್ಮಿ ಅಭ್ಯರ್ಥಿಯಾದರೆ ಅಂಥವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಕಲಂ ೧೭೧ ಎಚ್ ಅನ್ವಯ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಅವಕಾಶವಿರುತ್ತದೆ ಎಂದು ಜಿಲ್ಲಾ ಚುನಾವ­ಣಾಧಿಕಾರಿ ಡಾ.ಎನ್.ವಿ.ಪ್ರಸಾದ್ ಅವರು ತಿಳಿಸಿದ್ದಾರೆ.

ಈ ರೀತಿ ಒಬ್ಬ ಡಮ್ಮಿ ಅಭ್ಯರ್ಥಿಯು ಮತ್ತೊಬ್ಬ ಅಭ್ಯ­ರ್ಥಿಯ ಪರವಾಗಿ ಪ್ರತ್ಯಕ್ಷವಾಗಿ ಅಥವಾ ಪರೋಕ್ಷ­ವಾಗಿ ಚುನಾವಣಾ ಸಮಯದಲ್ಲಿ ಮತ ಯಾಚಿಸಿ­ದರೆ ಅಂತಹ ಡಮ್ಮಿ ಅಭ್ಯರ್ಥಿಯ ಖರ್ಚು ವೆಚ್ಚವನ್ನು ಮೂಲ ಅಭ್ಯರ್ಥಿಯ ಖರ್ಚು ವೆಚ್ಚಕ್ಕೆ ಸೇರಿಸ­ಲಾಗುವುದು ಎಂದು ಅವರು ತಿಳಿಸಿದ್ದಾರೆ.

ಸಾರ್ವಜನಿಕರು ಇಂತಹ ಚುನಾವಣಾ ಅಕ್ರಮ ಕಂಡು ಬಂದಲ್ಲಿ ಹತ್ತಿರದ ಸಹಾಯಕ ಚುನಾವ­ಣಾಧಿಕಾರಿ, ತಹಶೀಲ್ದಾರ್, ಪೋಲಿಸ್ ಅಧಿಕಾರಿ, ಕಂಟ್ರೋಲ್ ರೂಂ ಅಥವಾ ಚುನಾವಣೆಗೆ ಸಂಬಂಧಿಸಿದ ಯಾವುದೇ ಅಧಿಕಾರಿಗೆ ಮಾಹಿತಿ ನೀಡಲು­ ಕೋರಿದ್ದಾರೆ.
ಇಂತಹ ಡಮ್ಮಿ ಅಭ್ಯರ್ಥಿಗಳ ಎಲ್ಲಾ ಚುನಾವಣಾ ಸಂಬಂ­ಧಿತ ಚಟುವಟಿಕೆಗಳ ಬಗ್ಗೆ ತೀವ್ರ ನಿಗಾ ಇಡಲಾಗುವುದು ಮತ್ತು ವಿಡಿಯೋಗ್ರಾಫಿ ಕೂಡ ಮಾಡ­ಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

ಅಂಚೆ ಮತಪತ್ರ  ವಿತರಣೆ
ಗುಲ್ಬರ್ಗ: ಗುಲ್ಬರ್ಗಲೋಕಸಭಾ ಕ್ಷೇತ್ರಕ್ಕೆ ಏಪ್ರಿಲ್ ೧೭ರಂದು ನಡೆಯುವ ಚುನಾವಣೆಯ ಮತದಾನ ಕರ್ತವ್ಯದಲ್ಲಿ ನಿರತರಾಗಿರುವ ಅಧಿಕಾರಿ/ಸಿಬ್ಬಂದಿ ತಮ್ಮ ಮತ ಚಲಾಯಿಸಲು ಅನುಕೂಲ ಕಲ್ಪಿಸುವ ನಿಟ್ಟನಲ್ಲಿ ಚುನಾವಣಾ ಕೆಲಸ ನಿರ್ವಹಿಸುವ ಕ್ಷೇತ್ರದ ಆಧಾರದ ಮೇಲೆ ಅಂಚೆ ಮತಪತ್ರ ನಿಮಿತ್ತ ನಮೂನೆ-೧೨, ಇಡಿಸಿ(ನಮೂನೆ-೧೨ಎ)ಗಳನ್ನು ಕರ್ತವ್ಯ ನಿಯೋ­ಜನೆ ಆದೇಶದೊಂದಿಗೆ ನೀಡಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ಎನ್.­ವಿ.ಪ್ರಸಾದ್ ಅವರು ತಿಳಿಸಿದ್ದಾರೆ.ಎಲ್ಲಾ ಸರ್ಕಾರಿ ನೌಕರರು ಮತದಾರರ ಯಾದಿ­ಯಲ್ಲಿ ತಮ್ಮ ಹೆಸರು,  ಭಾಗಸಂಖ್ಯೆ ಹಾಗೂ ಕ್ರಮ­ಸಂಖ್ಯೆಯನ್ನು ಕಡ್ಡಾ-­ಯವಾಗಿ ಕೂಡಲೇ ಪರಿಶೀಲಿ­ಸಿಟ್ಟುಕೊಂಡು ಪ್ರಥಮ ತರಬೇತಿಯ ದಿನಾಂಕ­ದೊಳಗೆ ಸಂಬಂಧಿಸಿದ ವಿಧಾ­ನಸಭಾ ಕ್ಷೇತ್ರದ ವ್ಯಾಪ್ತಿ­ಯ ತಹಸೀಲ್ದಾರ್ ಕಚೇರಿಯ ಚುನಾವಣಾ ಶಾಖೆ­ಯಲ್ಲಿ ಸಲ್ಲಿಸಬೇಕು. ಅನಂತರ ಬರುವ ಅರ್ಜಿಗಳನ್ನು ಮಾನ್ಯ ಮಾಡುವುದಿಲ್ಲವೆಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT