ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಆರ್‌ಎಸ್‌: ತಂಡಗಳಿಗೆ ಹೆಚ್ಚುವರಿ ಅವಕಾಶ

Last Updated 18 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ದುಬೈ (ಪಿಟಿಐ): ಅಂಪೈರ್‌ ತೀರ್ಪು ಮರುಪರಿಶೀಲನಾ ವ್ಯವಸ್ಥೆ (ಡಿಆರ್‌ಎಸ್‌) ನಿಯಮ ಬಳಸುವ ಟೆಸ್ಟ್‌ ಪಂದ್ಯಗಳಲ್ಲಿ ತಂಡಗಳಿಗೆ ಹೆಚ್ಚುವರಿಯಾಗಿ ಎರಡು ಬಾರಿ ತೀರ್ಪು ಮರುಪರಿಶೀಲನೆಗೆ ಅವಕಾಶ ನೀಡಲು ಅಂತರರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) ನಿರ್ಧರಿಸಿದೆ.

ಈಗ ಇರುವ ನಿಯಮದಂತೆ ತಂಡಕ್ಕೆ ಒಂದು ಇನಿಂಗ್ಸ್‌ನಲ್ಲಿ ಎರಡು ಸಲ ಮಾತ್ರ ಅಂಪೈರ್‌ ತೀರ್ಪಿನ ಮರುಪರಿಶೀಲನೆಗೆ ಅವಕಾಶವಿದೆ. ಇವೆರಡೂ ಯಶಸ್ವಿಯಾಗದಿದ್ದರೆ, ಮತ್ತೆ ಅವಕಾಶ ದೊರೆಯುವುದಿಲ್ಲ. ಆದರೆ ಇನ್ನು ಮುಂದೆ ಪ್ರತಿ ಇನಿಂಗ್ಸ್‌ನ 80 ಓವರ್‌ಗಳ ಬಳಿಕ ಹೆಚ್ಚುವರಿಯಾಗಿ ಮತ್ತೆರಡು ಅವಕಾಶಗಳು ಲಭಿಸಲಿವೆ.

ಹೊಸ ನಿಯಮ ಅಕ್ಟೋಬರ್‌ 1ರಿಂದ ಜಾರಿಗೆ ಬರಲಿದೆ ಎಂದು ಐಸಿಸಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT