ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೆಂಗೆ ಜ್ವರಕ್ಕೆ ಚಿಕ್ಕೋಡಿಯ ಯುವತಿ ಬಲಿ

Last Updated 2 ಜೂನ್ 2013, 19:59 IST
ಅಕ್ಷರ ಗಾತ್ರ

ಬೆಳಗಾವಿ: ಚಿಕ್ಕೋಡಿ ತಾಲ್ಲೂಕಿನ ಕಾರದಗಾ ಗ್ರಾಮದ ಯುವತಿಯೊಬ್ಬಳು ಡೆಂಗೆ ಜ್ವರದಿಂದ ಬಳಲಿ ಸಾವನ್ನಪ್ಪಿದ ಘಟನೆ ಇಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ ಸಂಭವಿಸಿದೆ.

ಮೃತಳನ್ನು ಅರ್ಚನಾ ಶಶಿಕಾಂತ ಕಾಂಬಳೆ (19) ಎಂದು ಗುರುತಿಸಲಾಗಿದೆ. `ಅರ್ಚನಾ ಕಳೆದ ಏ. 14ರಿಂದ  ಜ್ವರದಿಂದ ಬಳಲುತ್ತಿದ್ದರು. ತಮ್ಮ ತಾಯಿಯ ತವರೂರಾದ ಮಹಾರಾಷ್ಟ್ರದ ಇಚಲಕರಂಜಿ ತಾಲ್ಲೂಕಿನ ಪೇಠ ವಡಗಾಂವ್ ಗ್ರಾಮದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಗುಣಮುಖರಾಗಲಿಲ್ಲ. ಇವರ ಸಂಬಂಧಿ ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿದ್ದು, ಅವರು ಮೇ 30ರಂದು ಬಿಮ್ಸಗೆ ದಾಖಲಿಸಿದ್ದರು.

ಆದರೆ ಶನಿವಾರ ಯುವತಿ ಮೃತಪಟ್ಟಿದ್ದಾಳೆ. ರಕ್ತ ತಪಾಸಣೆ ಮಾಡಲಾಗಿದ್ದು, ಡೆಂಗೆ ಎಂದು ಶಂಕಿಸಲಾಗಿದೆ' ಎಂದು ಹೆಚ್ಚುವರಿ ಆರೋಗ್ಯಾಧಿಕಾರಿ ಡಾ.ವಿ.ಬಿ. ಕುಲಕರ್ಣಿ ಭಾನುವಾರ `ಪ್ರಜಾವಾಣಿ' ಗೆ ತಿಳಿಸಿದರು. ಕಾರದಗಾ ಗ್ರಾಮದ ರೋಹಿದಾಸ ಚಂಬಾರ (21) ಅವರನ್ನು ಇಲ್ಲಿಯ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದು, ಡೆಂಗೆ ಜ್ವರ ಇರಬಹುದು ಎಂದು ಶಂಕಿಸಲಾಗಿದೆ. ಆದರೆ, ರಕ್ತ ತಪಾಸಣೆಗೆ ಕಳುಹಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT