ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೆವಿಲ್ಸ್ ಸೆಮಿ ಕನಸು ಜೀವಂತ

Last Updated 21 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಕೇಪ್ ಟೌನ್ (ಪಿಟಿಐ): ಸ್ಪೋಟಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ (52, 44ಎಸೆತ, 4ಬೌಂಡರಿ, 1 ಸಿಕ್ಸರ್) ಅಬ್ಬರದ ಮುಂದೆ ಪರ್ತ್ ಸ್ಕಾರ್ಚರ್ಸ್ ತಂಡದ ಬೌಲರ್‌ಗಳು ತಬ್ಬಿಬ್ಬುಗೊಂಡರು. ಈ ಪರಿಣಾಮ ಡೆಲ್ಲಿ ಡೇರ್‌ಡೆವಿಲ್ಸ್ ತಂಡ ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸುವ ಕನಸನ್ನು ಜೀವಂತವಾಗಿರಿಸಿಕೊಂಡಿತು.

ನ್ಯೂ ವಾಂಡರರ್ಸ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪರ್ತ್ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 121 ರನ್ ಗಳಿಸಿತು. ಇದು ಸಾಧಾರಣ ಗುರಿಯಾದರೂ, ಮಾಹೇಲ ಜಯವರ್ಧನೆ ನೇತೃತ್ವದ ಡೆವಿಲ್ಸ್ ಪಡೆಗೆ ತುಂಬಾ ಕಷ್ಟವೆನಿಸಿತು. ಆದರೂ ಸೆಹ್ವಾಗ್ ಅವರ ಜವಾಬ್ದಾರಿಯುತ ಬ್ಯಾಟಿಂಗ್ ಬಲದಿಂದ ಗೆಲುವು ಸಾಧ್ಯವಾಯಿತು. 19.3 ಓವರ್‌ಗಳಲ್ಲಿ ಏಳು ವಿಕೆಟ್ ಕಳೆದುಕೊಂಡು ಡೆವಿಲ್ಸ್ ಗೆಲುವಿನ ದಡ ಸೇರಿತು.

`ಎ~ ಗುಂಪಿನ ಪಂದ್ಯದಲ್ಲಿ ಡೆವಿಲ್ಸ್ ಒಟ್ಟು 10 ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನಕ್ಕೇರಿತು. ಇದರಿಂದ ಈ ತಂಡದ ಸೆಮಿಫೈನಲ್ ಕನಸಿಗೆ ಈ ಗೆಲುವು ಬಲ ತಂದುಕೊಟ್ಟಿತು. ಮಂಗಳವಾರ ಟೈಟಾನ್ಸ್ ಎದುರು ಡೆವಿಲ್ಸ್ ಗೆಲುವು ಪಡೆದರೆ, ಮಾಹೇಲ ಪಡೆ ಸೆಮಿಫೈನಲ್ ಪ್ರವೇಶಿಸಲಿದೆ.

ಮಿಂಚಿದ ಅಗರ್‌ಕರ್: ಡೆವಿಲ್ಸ್ ತಂಡದ ಗೆಲುವಿಗೆ ಕೊನೆಯ ಓವರ್‌ನಲ್ಲಿ ಎಂಟು ರನ್‌ಗಳ ಅಗತ್ಯವಿತ್ತು. 20ನೇ ಓವರ್‌ನ ಮೊದಲ ಎಸೆತವನ್ನು ಅಜಿತ್ ಅಗರ್‌ಕರ್ (11) ಬೌಂಡರಿಗೆ ಅಟ್ಟಿದರು. ಎರಡನೇ ಎಸೆತದಲ್ಲಿ ಒಂದು ರನ್ ತೆಗೆದುಕೊಟ್ಟರು. ಬೌಲಿಂಗ್‌ನಲ್ಲೂ ಮಿಂಚಿದ ಅವರು (14ಕ್ಕೆ2)  `ಪಂದ್ಯ ಶ್ರೇಷ್ಠ~ ಗೌರವ ಪಡೆದರು.

ಕೊನೆಯ ನಾಲ್ಕು ರನ್ ಅಗತ್ಯವಿದ್ದಾಗ ಸ್ಟ್ರೈಕ್‌ನಲ್ಲಿದ್ದ ಬಲಗೈ ಬ್ಯಾಟ್ಸ್‌ಮನ್ ಪವನ್ ನೇಗಿ ಮೇಲೆ ಡೆವಿಲ್ಸ್ ತಂಡದ ಸೆಮಿಫೈನಲ್ ಕನಸು ಜೀವಂತವಾಗಿರಿಸುವ ಜವಾಬ್ದಾರಿಯಿತ್ತು. ಈ ಜವಾಬ್ದಾರಿಯನ್ನು ಅವರು ಸಮರ್ಥವಾಗಿ ನಿಭಾಯಿಸಿದರು. 20ನೇ ಓವರ್‌ನ ಮೂರನೇ ಎಸೆತವನ್ನು ಪವನ್ ಬೌಂಡರಿಗೆ ತಳ್ಳಿದರು. ಆಗ ಡೆವಿಲ್ಸ್ ತಂಡದ ಆಟಗಾರರ ಸಂಭ್ರಮಕ್ಕೆ ಪಾರವೇ ಇರಲಿಲ್ಲ.

ಸ್ಕೋರ್ ವಿವರ
ಪರ್ತ್ ಸ್ಕಾರ್ಚರ್ಸ್ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 121

ಹರ್ಷೆಲ್ ಗಿಬ್ಸ್ ಬಿ ಮಾರ್ನೆ ಮಾರ್ಕೆಲ್  06

ಶಾನ್ ಮಾರ್ಷ್ ಸಿ ಸೆಹ್ವಾಗ್ ಬಿ ಅಗರ್‌ಕರ್  39

ಸೈಮನ್ ಕ್ಯಾಟಿಚ್ ಸಿ ಜಯವರ್ಧನೆ ಬಿ ಅಗರ್‌ಕರ್  34

ಮಿಷೆಲ್ ಮಾರ್ಷ್ ಸಿ ಪೀಟರ್ಸನ್ ಬಿ ಮಾರ್ನೆ ಮಾರ್ಕೆಲ್  20

ಲೂಕ್ ರೋಂಚಿ ಸಿ ಅಗರ್‌ಕರ್ ಬಿ ಮಾರ್ನೆ ಮಾರ್ಕೆಲ್  02

ಮಾರ್ಕಸ್ ನಾರ್ಥ್ ಔಟಾಗದೆ  08

ನಥಾನ್ ನೀಲ್ ಔಟಾಗದೆ  02

ಇತರೆ: (ಲೆಗ್ ಬೈ-6, ವೈಡ್-4)  10

ವಿಕೆಟ್ ಪತನ: 1-11 (ಗಿಬ್ಸ್; 1.5), 2-84 (ಶಾನ್ ಮಾರ್ಷ್; 12.6), 3-87 (ಕ್ಯಾಟಿಚ್; 14.1), 4-99 (ರೋಂಚಿ; 16.1), 5-112 (ಮಿಷೆಲ್ ಮಾರ್ಷ್; 18.1).ಬೌಲಿಂಗ್: ಇರ್ಫಾನ್ ಪಠಾಣ್ 3-0-20-0, ಮಾರ್ನ್ ಮಾರ್ಕೆಲ್ 4-0-19-3, ಉಮೇಶ್ ಯಾದವ್ 4-0-24-0, ಅಜಿತ್ ಅಗರ್‌ಕರ್ 4-0-14-2, ಕೆವಿನ್ ಪೀಟರ್ಸನ್ 3-0-26-0, ಪವನ್ ನೇಗಿ 2-0-12-0.

ಡೆಲ್ಲಿ ಡೇರ್‌ಡೆವಿಲ್ಸ್ 19.3 ಓವರ್‌ಗಳಲ್ಲಿ  7 ವಿಕೆಟ್‌ಗೆ 123

ಮಾಹೇಲ ಜಯವರ್ಧನೆ ಸಿ ಬೀರ್ ಬಿ ಜೋ ಮೆನ್ನೀ  04

ವೀರೇಂದ್ರ ಸೆಹ್ವಾಗ್ ಸಿ ಮೆನ್ನೀ ಬಿ ರಿಮಿಂಗ್ಟನ್  52

ಉನ್ಮುಕ್ತ್ ಚಾಂದ್ ಸಿ ರೋಂಚಿ ಬಿ ಜೋ ಮೆನ್ನೀ  03

ಕೆವಿನ್ ಪೀಟರ್ಸನ್ ಸಿ ಮಿಷೆಲ್ ಮಾರ್ಷ್ ಬಿ ಬೀರ್  09

ರಾಸ್ ಟೇಲರ್ ಎಲ್‌ಬಿಡಬ್ಲ್ಯು ಬೀರ್  05

ಇರ್ಫಾನ್ ಪಠಾಣ್ ಸಿ ಕ್ಯಾಟಿಚ್ ಬಿ ರಿಮಿಂಗ್ಟನ್  14

ನಮನ್ ಓಜಾ ಸಿ ರೋಂಚಿ ಬಿ ನಥಾನ್ ನೀಲ್  06

ಪವನ್ ನೇಗಿ ಔಟಾಗದೆ  07

ಅಜಿತ್ ಅಗರ್‌ಕರ್ ಔಟಾಗದೆ  11

ಇತರೆ: (ಬೈ-1, ಲೆಗ್ ಬೈ-2, ವೈಡ್-9)  12

ವಿಕೆಟ್ ಪತನ: 1-10 (ಜಯವರ್ಧನೆ; 1.4), 2-22 (ಚಾಂದ್; 3.6), 3-45 (ಪೀಟರ್ಸನ್; 7.4), 4-60

(ಟೇಲರ್; 9.5), 5-94 (ಪಠಾಣ್; 15.1), 6-96 (ಸೆಹ್ವಾಗ್; 15.4), 7-104 (ಓಜಾ; 17.4).

ಬೌಲಿಂಗ್: ನಥಾನ್ ರಿಮಿಂಗ್ಟನ್ 3.3-0-29-2, ಜೋ ಮೆನ್ನೀ 4-0-21-2, ನಥಾನ್ ನೀಲ್ 4-0-25-1,

ಬ್ರಾಡ್ ಹಾಗ್ 4-0-27-0, ಮಿಷೆಲ್ ಬೀರ್ 4-0-18-2.

ಫಲಿತಾಂಶ: ಡೆಲ್ಲಿ ಡೇರ್‌ಡೆವಿಲ್ಸ್‌ಗೆ 3 ವಿಕೆಟ್ ಜಯ. ನಾಲ್ಕು ಪಾಯಿಂಟ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT