ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂಡಕ್ಕೆ ಮರಳಿದ ಸುನಿಲ್‌, ವಾಲ್ಮಿಕಿ

ವಿಶ್ವ ಹಾಕಿ ಲೀಗ್‌ ಫೈನಲ್ಸ್‌: ಕರ್ನಾಟಕದ ಐವರಿಗೆ ಅವಕಾಶ
Last Updated 8 ಜನವರಿ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಫಾರ್ವರ್ಡ್ಸ್‌ ಆಟಗಾರರಾದ ಎಸ್‌.ವಿ.ಸುನಿಲ್‌ ಹಾಗೂ ಯುವರಾಜ್‌ ವಾಲ್ಮಿಕಿ ಅವರು ಜನವರಿ 10ರಿಂದ 18ರವರೆಗೆ ಇಲ್ಲಿ ನಡೆಯಲಿರುವ ವಿಶ್ವ ಹಾಕಿ ಲೀಗ್‌ ಫೈನಲ್ಸ್‌ಗೆ ಭಾರತ ತಂಡಕ್ಕೆ ಮರಳಿದ್ದಾರೆ.

ಮೇಜರ್‌ ಧ್ಯಾನ್‌ಚಂದ್‌ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಟೂರ್ನಿಗೆ ಕರ್ನಾಟಕದ ಐವರು ಅವಕಾಶ ಪಡೆದಿದ್ದಾರೆ. ಸುನಿಲ್‌ ಅವರಲ್ಲದೇ, ವಿ.ಆರ್‌. ರಘು ನಾಥ್‌, ಎಸ್‌.ಕೆ.ಉತ್ತಪ್ಪ, ಎಂ.ಬಿ. ಅಯ್ಯಪ್ಪ ಹಾಗೂ ನಿಕಿನ್‌ ತಿಮ್ಮಯ್ಯ ಇದ್ದಾರೆ.

ಆಗಸ್ಟ್‌ನಲ್ಲಿ ನಡೆದ ಏಷ್ಯಾಕಪ್‌ ಟೂರ್ನಿಗೆ ಮುನ್ನ ಸುನಿಲ್‌ ಅವರು ಮೊಣಕೈ ಗಾಯಕ್ಕೆ ಒಳಗಾಗಿದ್ದರು. ಮಹಾರಾಷ್ಟ್ರದ ವಾಲ್ಮಿಕಿ 2012ರಲ್ಲಿ ನಡೆದ ಎಫ್‌ಐಎಚ್‌ ಚಾಂಪಿಯನ್ಸ್‌ ಟ್ರೋಫಿ ನಂತರ ಇದೇ ಮೊದಲ ಬಾರಿಗೆ ತಂಡಕ್ಕೆ ಮರಳಿದ್ದಾರೆ.

ಗೋಲ್‌ಕೀಪರ್‌ ಹರ್ಜೋತ್‌ ಸಿಂಗ್‌, ಮಿಡ್‌ಫೀಲ್ಡರ್‌ ಅಯ್ಯಪ್ಪ ಹಾಗೂ ಸ್ಟ್ರೈಕರ್‌ ಅಫಾನ್‌ ಯೂಸುಫ್‌ ಇದೇ ಮೊದಲ ಬಾರಿ ಸೀನಿಯರ್‌ ತಂಡದಲ್ಲಿ ಅವಕಾಶ ಪಡೆದಿದ್ದಾರೆ.
ಎಂಟು ರಾಷ್ಟ್ರಗಳು ಈ ಟೂರ್ನಿಯಲ್ಲಿ ಪೈಪೋಟಿ ನಡೆಸಲಿವೆ. ಭಾರತ ಇರುವ ‘ಎ’ ಗುಂಪಿನಲ್ಲಿ ಬಲಿಷ್ಠ ಜರ್ಮನಿ, ಇಂಗ್ಲೆಂಡ್‌ ಹಾಗೂ ನ್ಯೂಜಿಲೆಂಡ್‌ ತಂಡಗಳಿವೆ. ಮುಖ್ಯ ಕೋಚ್‌ ಟೆರ್ರಿ ವಾಲ್ಶ್‌ ಮಾರ್ಗದರ್ಶನದ ಭಾರತ ಸದ್ಯ 10ನೇ ರ್‍ಯಾಂಕ್‌ನಲ್ಲಿದೆ. ಆತಿಥೇಯ ತಂಡ ತನ್ನ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್‌ ಎದುರು ಪೈಪೋಟಿ  ನಡೆಸಲಿದೆ. ಜ.11ರಂದು ನ್ಯೂಜಿಲೆಂಡ್‌ ಎದುರು ಹಾಗೂ 13ರಂದು ಜರ್ಮನಿ ಎದುರು ಆಡಲಿದೆ.

ತಂಡ ಇಂತಿದೆ:
ಗೋಲ್‌ ಕೀಪರ್ಸ್‌:
ಪಿ.ಆರ್‌.ಶ್ರೀಜೇಶ್‌ (ಉಪನಾಯಕ), ಹರ್ಜೋತ್‌ ಸಿಂಗ್‌.
ಡಿಫೆಂಡರ್ಸ್‌: ಬೀರೇಂದ್ರ ಲಾಕ್ರಾ, ರೂಪಿಂದರ್‌ ಪಾಲ್‌ ಸಿಂಗ್‌, ವಿ.ಆರ್‌.ರಘುನಾಥ್‌, ಕೊತಾಜಿತ್‌ ಸಿಂಗ್‌, ಅಮಿತ್‌ ರೋಹಿದಾಸ್‌.
ಮಿಡ್‌ಫೀಲ್ಡರ್ಸ್‌: ಸರ್ದಾರ್‌ ಸಿಂಗ್‌ (ನಾಯಕ), ಎಸ್‌.ಕೆ.ಉತ್ತಪ್ಪ, ಧರ್ಮವೀರ್‌ ಸಿಂಗ್‌, ಮನ್‌ಪ್ರೀತ್‌ ಸಿಂಗ್‌, ಚಿಂಗ್ಲೆನ್‌ಸನಾ ಸಿಂಗ್‌, ಎಂ.ಬಿ.ಅಯ್ಯಪ್ಪ.
ಫಾರ್ವರ್ಡ್ಸ್‌: ನಿಕಿನ್‌ ತಿಮ್ಮಯ್ಯ, ಎಸ್‌.ವಿ.ಸುನಿಲ್‌, ಮನ್‌ದೀಪ್‌ ಸಿಂಗ್‌, ಅಫಾನ್‌ ಯೂಸುಪ್‌, ಯುವರಾಜ್‌ ವಾಲ್ಮಿಕಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT