ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಂತ್ರಿಕ ವಿಭಾಗದಿಂದ ಅವ್ಯವಹಾರ

Last Updated 3 ಸೆಪ್ಟೆಂಬರ್ 2011, 5:40 IST
ಅಕ್ಷರ ಗಾತ್ರ

ಹಾವೇರಿ: ಕೇಂದ್ರ ಸರ್ಕಾರದ ಮಹತ್ವಾ ಕಾಂಕ್ಷಿ ಯೋಜನೆಯಾದ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ನಡೆಯುವ ಅವ್ಯವಹಾರಗಳಿಗೆ ಯೋಜನೆ ರೂಪಿಸುವ ತಾ.ಪಂ.ನ ತಾಂತ್ರಿಕ ವಿಭಾಗವೇ ಕಾರಣ~ ಎಂದು ಜಿಲ್ಲೆಯ ಓಂಬಡ್ಸಮನ್ ಎಸ್.ಸಿ.ಮತ್ತಿಹಳ್ಳಿ ಆರೋಪಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಂತ್ರಿಕ ವಿಭಾಗವು ಕಾಮಗಾರಿಯ ಅಂದಾಜು ಪತ್ರಿಕೆ ಹಾಗೂ ಅಳತೆ ಪತ್ರಿಕೆ ತಯಾ ರಿಸುವುದನ್ನು ಸರಿಯಾಗಿ ಮಾಡಿದರೆ, ಯೋಜನೆಯಲ್ಲಿ ನಡೆಯುವ ಅವ್ಯ ವಹಾರದಲ್ಲಿ ಶೇ 90 ರಷ್ಟು ತಡೆಯಲು ಸಾಧ್ಯವಿದೆ ಎಂದರು.

ಆದರೆ, ತಾಂತ್ರಿಕ ವಿಭಾಗವೂ ಈ ಎರಡು ಕಾರ್ಯವನ್ನು ಸರಿಯಾಗಿ ನಿರ್ವಹಿಸದೇ ಅವ್ಯವಹಾರಕ್ಕೆ ದಾರಿ ಮಾಡಿ ಕೊಡುತ್ತಿದೆ. ಸ್ಥಳ ಪರಿಶೀಲನೆ ಮಾಡಿ ಅಳತೆ ವರದಿ ನೀಡುವಂತೆ ಆ ಇಲಾಖೆಗೆ ತಿಳಿಸಿದರೆ, ಸಿಬ್ಬಂದಿ ಕೊರ ತೆಯ ನೆಪ ಹೇಳಿ ಜಾರಿಕೊಳ್ಳುತ್ತದೆ ಎಂದು ಆಪಾದಿಸಿದರು.

22 ದೂರು ದಾಖಲು: ಜಿಲ್ಲೆಯಲ್ಲಿ ತಾವು ಓಂಬಡ್ಸಮನ್ ಆಗಿ ಅಧಿಕಾರ ವಹಿಸಿಕೊಂಡ ಏಳು ತಿಂಗಳಲ್ಲಿ ದೂರ ವಾಣಿ, ಅರ್ಜಿ ಸೇರಿದಂತೆ ಇತರ ಮೂಲಗಳಿಂದ ಬಂದ 22 ದೂರು ದಾಖಲಿಸಿಕೊಳ್ಳಲಾಗಿದೆ. ಅವುಗಳಲ್ಲಿ ಈವರೆಗೆ 16 ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದೆ. ಇನ್ನೂ ಆರು ಪ್ರಕರಣ ಗಳ ತನಿಖೆ ಪ್ರಗತಿಯಲ್ಲಿದೆ ಎಂದು ಹೇಳಿದರು.

ಇತ್ಯರ್ಥಗೊಂಡ ಪ್ರಕರಣಗಳಲ್ಲಿ ಅವ್ಯವಹಾರ ಸಾಬೀತಾದ ಕೆಲವು ಪ್ರಕರಣಗಳಿಂದ 1.19 ಲಕ್ಷ ರೂ.ಗಳ ವಾಪಸ್ಸಾತಿಗೆ ಸೂಚಿಸಲಾಗಿದೆ. ಹಾನಗಲ್ಲ ಅರಣ್ಯ ಸಂರಕ್ಷಣಾಧಿಕಾರಿಗೆ ಸ್ವಂತ ಕರ್ಚಿನಿಂದ 200 ಸಸಿಗಳನ್ನು ನೆಡಲು ಆದೇಶಿಸಲಾಗಿದೆ. ತಡಸ ಗ್ರಾ.ಪಂ.ನಲ್ಲಿ ತಾತ್ಕಾಲಿಕ ವ್ಯವಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಗುಮಾಸ್ತನನ್ನು ಕೆಲಸದಿಂದ ತೆಗೆದು ಹಾಕಲು ತಿಳಿಸಲಾ ಗಿದೆ. ಇನ್ನೂ ಒಂದು ಪ್ರಕರಣದಲ್ಲಿ ಗ್ರಾ.ಪಂ.ಅಧ್ಯಕ್ಷರು ಹಣ ದುರಪ ಯೋಗದಲ್ಲಿ ಭಾಗಿಯಾಗಿದ್ದು, ಅವರ ಮೇಲೆ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ವರದಿ ಕಳುಹಿಸಲಾಗಿದೆ ಎಂದರು.

ಉದ್ಯೋಗ ಖಾತ್ರಿ ಯೋಜನೆಯಡಿ ಅರಣ್ಯ ಇಲಾಖೆ ನೆಡುವ ಸಸಿಗಳ ನಿರ್ವ ಹಣೆ ಸರಿಯಾಗಿಲ್ಲ. ಸಸಿ ನೆಟ್ಟ ಕೆಲವೇ ದಿನಗಳಲ್ಲಿ ಶೇ 50 ರಷ್ಟು ಹಾನಿ ಯಾಗಿದೆ.

ಅರಣ್ಯ ಸಂರಕ್ಷಣೆಗೆ ಗ್ರಾಮ ಪಂಚಾಯಿತಿಯಲ್ಲಿ ಶೇ 20 ರಷ್ಟು ಹಣ ಮೀಸ ಲಿದ್ದರೂ ಅದನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳದಿರುವುದು ಹಾನಿಗೆ ಕಾರಣವಾಗಿದೆ ಎಂದು ಹೇಳಿದರು.

ಉದ್ಯೋಗ ಖಾತ್ರಿ ಯೋಜನೆಯಲ್ಲಿ ನಡೆಯುತ್ತಿರುವ ಅವ್ಯವಹಾರವನ್ನು ಗಮನಿಸಿರುವ ಕೆಲವೊಂದು ಗ್ರಾ.ಪಂ. ಗಳು, ಅದರಿಂದ ಊರಿನ ವಾತಾ ವರಣ ಹದಗೆಡಲಿದೆ ಎಂಬ ಹೆದರಿಕೆ ಯಿಂದ ಉದ್ಯೋಗ ಖಾತ್ರಿ ಯೋಜನೆ ಕಾಮಗಾರಿಗಳು ಕೈಗೆತ್ತಿಕೊಳ್ಳಲು ಮುಂದಾಗಿಲ್ಲ ಎಂದು ತಿಳಿಸಿದರು.

ಸರ್ಕಾರದಿಂದ ಮಂಜೂರಾದ ಕೆಲಸಗಳನ್ನು ಕೈ ಬಿಟ್ಟು ಕುಳಿತು ಕೊಳ್ಳು ವುದರಿಂದ ಅವ್ಯವಹಾರ ತಡೆಯಲು ಸಾಧ್ಯವಿಲ್ಲ. ಊರಿನ ಜನರೆಲ್ಲರೂ ಸೇರಿ ಕೊಂಡು ಉತ್ತಮ ಕೆಲಸ ಮಾಡಿಸ ಬೇಕು. ಆಗ ಅವ್ಯವ ಹಾರ ನಡೆಯ ದಂತೆ ತಡೆಯಬಹು ದಲ್ಲದೇ, ಗ್ರಾಮವೂ ಅಭಿವೃದ್ಧಿಯಾ ಗಲಿದೆ ಎಂದು ಸಲಹೆ ನೀಡಿದರು.

ತಾವು ಓಂಬಡ್ಸಮನ್ ಆದ ಮೇಲೆ ತಮಗೂ ಕೂಡಾ ಕೆಲವು ಕಡೆಗಳಲ್ಲಿ ಆಸೆ, ಆಮಿಷೆ ತೋರಿಸಲು ಮುಂದಾ ಗಿದ್ದರು. ಆದರೆ, ಅದಕ್ಕೆ ಮನ್ನಣೆ ನೀಡದೇ ದಿಟ್ಟತನದಿಂದ ಕೆಲಸ ನಿರ್ವ ಹಿಸಿದ ಸಂತೃಪ್ತಿ ತಮಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT