ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾರೆಯ ವಿರುದ್ಧ ದಿಕ್ಕಿನಲ್ಲಿ ಗ್ರಹ ಪರಿಭ್ರಮಣ!

Last Updated 8 ಜೂನ್ 2011, 19:30 IST
ಅಕ್ಷರ ಗಾತ್ರ

ಮೆಲ್ಬರ್ನ್ (ಪಿಟಿಐ): ದೂರದ ಗ್ರಹವೊಂದು ತನ್ನ ಯಜಮಾನ ನಕ್ಷತ್ರ ಪರಿಭ್ರಮಿಸುತ್ತಿರುವ ವಿರುದ್ಧ ದಿಕ್ಕಿನಲ್ಲಿ ತಿರುಗುತ್ತಿರುವ ವಿದ್ಯಮಾನ ಇದೇ ಮೊದಲ ಬಾರಿಗೆ ಬೆಳಕಿಗೆ ಬಂದಿದೆ. ಗ್ರಹವ್ಯೂಹದ ಹುಟ್ಟಿನ ಬಗ್ಗೆ ಇದುವರೆಗೆ ಪ್ರಚಲಿತದಲ್ಲಿರುವ ಸಿದ್ಧಾಂತದ ಬಗ್ಗೆಯೇ ಈ ವಿದ್ಯಮಾನ ಶಂಕೆಗಳನ್ನು ಹುಟ್ಟುಹಾಕಿದೆ ಎಂದು ವಿಜ್ಞಾನಿಗಳು ಪ್ರತಿಪಾದಿಸಿದ್ದಾರೆ.

ಡಬ್ಲ್ಯುಎಎಸ್‌ಪಿ- 17ಬಿ ಹೆಸರಿನ  ದೂರದ ಗ್ರಹವೇ ಹಲವು ಪ್ರಶ್ನೆಗಳನ್ನು ಎಬ್ಬಿಸಿರುವ ಆಕಾಶಕಾಯ ಎಂದು ಸಂಶೋಧನೆಯ ನೇತೃತ್ವ ವಹಿಸಿದ್ದ ಆಸ್ಟ್ರೇಲಿಯಾ ರಾಷ್ಟ್ರೀಯ ವಿಶ್ವವಿದ್ಯಾಲಯದ ಡೇನಿಯಲ್ ಬೇಲಿಸ್ ತಿಳಿಸಿದ್ದಾರೆ.

ನಕ್ಷತ್ರ ಮತ್ತು ಗ್ರಹಗಳೆರಡೂ ಸುರುಳಿ ಸುತ್ತುವ ಒಂದೇ ದೂಳಿನ ರಾಶಿಯಿಂದ ಜನ್ಮ ತಳೆಯುತ್ತವೆ. ಹೀಗಾಗಿ ನಕ್ಷತ್ರದ ಪರಿಭ್ರಮಣದ ದಿಕ್ಕು ಯಾವುದಿರುತ್ತದೋ ಅದರ ಸುತ್ತ ಗ್ರಹಗಳ ಅದೇ ದಿಕ್ಕಿನಲ್ಲಿ ತಿರುಗುತ್ತವೆ ಎಂದು ಈಗಿನ ಸಿದ್ಧಾಂತಗಳು ಪ್ರತಿಪಾದಿಸುತ್ತಿವೆ.
 
ನಮ್ಮ ಸೌರವ್ಯೂಹದ ಮಟ್ಟಿಗೆ ಹೇಳುವುದಾದರೆ ಈ ಸಿದ್ಧಾಂತ ಸರಿಯಾಗಿಯೇ ಇದೆ. ಆದರೆ ಈ ಪರಿಕಲ್ಪನೆಗೆ ಸವಾಲು ಎಸೆದಿರುವ ಡಬ್ಲ್ಯುಎಎಸ್‌ಪಿ- 17ಬಿ ಗ್ರಹದ ಪರಿಭ್ರಮಣೆ ವಿಜ್ಞಾನಿಗಳನ್ನು ಒಗಟಾಗಿ ಕಾಡಲಾರಂಭಿಸಿದೆ.

`ಶತಕೋಟಿ ವರ್ಷಗಳ ಹಿಂದೆ ಈ ಗ್ರಹಕ್ಕೆ ಬೇರ‌್ಯಾವುದೋ ದೈತ್ಯ ಕಾಯ ಡಿಕ್ಕಿ ಹೊಡೆದಾಗ ಅದರ ಪರಿಭ್ರಮಣದ ದಿಕ್ಕು ಹಿಂದುಮುಂದಾಗಿರಬಹುದು ಎಂಬುದು ತಜ್ಞರ ಸದ್ಯದ ಊಹೆ~ ಎಂದಿದ್ದಾರೆ ಡೇನಿಯಲ್.
ಸದ್ಯಕ್ಕೆ ನಮ್ಮ ಬ್ರಹ್ಮಾಂಡದಲ್ಲಿ ಶೇಕಡಾವಾರು ಎಷ್ಟು ಗ್ರಹಗಳು ಹೀಗೆ ಹಿಂದುಮುಂದಾಗಿ ಬುಗುರಿ ಆಡುತ್ತಿರಬಹುದು ಎಂಬುದು ತರ್ಕಕ್ಕೆ ನಿಲುಕಿಲ್ಲ.
 
ಒಂದು ವೇಳೆ, ಇದರ ಸಾಧ್ಯತೆ ಹೆಚ್ಚಾಗಿದ್ದಿದ್ದೇ ಆದರೆ, ದೂರದ ತಾರೆಗಳ ಗ್ರಹಕೂಟದಲ್ಲಿ ಜೀವಿಗಳಿರಬಹುದಾದ ಸಾಧ್ಯತೆ ಕ್ಷೀಣ ಎಂದು ಅವರು ವಿವರಿಸಿದ್ದಾರೆ. ದಕ್ಷಿಣ ಅಮೆರಿಕಾದ ಚಿಲಿ ರಾಷ್ಟ್ರದಲ್ಲಿರುವ ಪ್ರಪಂಚದ ಅತ್ಯಂತ ದೊಡ್ಡ ದೂರದರ್ಶಕವೊಂದು ಈ ಅಚ್ಚರಿಯ ಗ್ರಹವನ್ನು ಪತ್ತೆಹಚ್ಚಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT