ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೀನಂಶ್ರೀ ಭವನ ಕಳಪೆ ಕಾಮಗಾರಿ: ಆರೋಪ

Last Updated 21 ಜನವರಿ 2011, 9:10 IST
ಅಕ್ಷರ ಗಾತ್ರ

ಚಿಕ್ಕನಾಯಕನಹಳ್ಳಿ:  ನಗರದಲ್ಲಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ತೀನಂಶ್ರೀ ಭವನದ ಕಾಮಗಾರಿ ಕಳಪೆ ಎಂದು ಪುರಸಭಾ ಸದಸ್ಯ ಸಿ.ಡಿ. ಚಂದ್ರಶೇಖರ್ ಆರೋಪಿಸಿದರು.ಈಚೆಗೆ ನಡೆದ ಪುರಸಭಾ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಪುರಸಭೆಗೆ ಸೇರಿದ ಸಂತೆ ಜಾಗವನ್ನು ಭವನ ನಿರ್ಮಿಸಲು ಬಿಟ್ಟುಕೊಡ ಲಾಗಿದೆ.

ಭವನಕ್ಕಾಗಿ ರೂ. 4 ಕೋಟಿ ಅನುದಾನ ನೀಡಲಾಗಿದೆ. ಆದರೆ ಕಾಮಗಾರಿಯಲ್ಲಿ ಕಳಪೆ ಮಟ್ಟದ ಮರಳು ಮತ್ತು ವಸ್ತುಗಳನ್ನು ಬಳಸಲಾಗು ತ್ತಿದೆ. ಪ್ರಮಾಣ ಬದ್ಧವಾದ ಸಿಮೆಂಟ್ ಹಾಕದ ಕಾರಣ ಪಿಲ್ಲರ್ ಬೆಳ್ಳಗಾಗಿವೆ. ಎಂಜಿನಿಯರ್ ಈವರೆಗೂ ಪರಿಶೀಲನೆ ನಡೆಸಿಲ್ಲ ಎಂದು ಆರೋಪಿಸಿದರು. ನಗರದ ವಿವಿಧೆಡೆ ಪುರಸಭಾ ಆಸ್ತಿಗಳನ್ನು ಈವರೆಗೂ ಖಾತೆ ಮಾಡಿಸದೆ ನಿರ್ಲ್ಯಕ್ಷಿಸಲಾಗಿದೆ. ರೂ. 20 ಲಕ್ಷದ ಕೆರೆ ಭಾಗಕ್ಕೆ ತಡೆಗೋಡೆ ನಿರ್ಮಾಣದ ಕೆಲಸ ಆಗಿಲ್ಲವೆಂದು ಸಿ.ಪಿ. ಮಹೇಶ್ ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT