ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು ಜನತೆಯ ತಕರಾರಿಲ್ಲ

Last Updated 5 ಏಪ್ರಿಲ್ 2011, 19:30 IST
ಅಕ್ಷರ ಗಾತ್ರ

ಪೀಣ್ಯ ದಾಸರಹಳ್ಳಿ: ಹೇಮಾವತಿ ಜಲಾಶಯದ ನೀರನ್ನು ಬೆಂಗಳೂರು ನಗರಕ್ಕೆ ತರುವುದಾದರೆ ತುಮಕೂರಿನ ಜನತೆಯು ಯಾವುದೇ ರೀತಿಯ ತಕರಾರು ಮಾಡುವುದಿಲ್ಲ ಎಂದು ಮಾಜಿ ಶಾಸಕ ಮುದ್ದಹನುಮೇಗೌಡ ಹೇಳಿದರು. ದಾಸರಹಳ್ಳಿ ವಿಧಾನಸಭಾ ಕ್ಷೇತ್ರ ಕನ್ನಡ ಸಾಹಿತ್ಯ ಪರಿಷತ್ತು ನಗರದ ಹೆಗ್ಗನಹಳ್ಳಿ ಆರ್.ಇ.ಎಸ್. ತಾಂತ್ರಿಕ ವಿದ್ಯಾಸಂಸ್ಥೆಯಲ್ಲಿ ಏರ್ಪಡಿಸಿದ ವೈ.ಕೆ. ರಾಮಯ್ಯನವರ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಹೇಮಾವತಿಯ ನೀರು  ಬರಲು ವೈ.ಕೆ.ರಾಮಯ್ಯನವರ ಪಾತ್ರ ಮಹತ್ತರವಾದದ್ದು. ಸಾಹಿತ್ಯ ಕ್ಷೇತ್ರದಲ್ಲೂ ಒಲವು ಹೊಂದಿದ್ದ ರಾಮಯ್ಯನವರು ಕುವೆಂಪು ವಿಚಾರಧಾರೆಗಳಿಗೆ ಮನಸೋತು ಅವರ ಆದರ್ಶ ತತ್ವಗಳನ್ನು ಮೈಗೂಡಿಸಿಗೊಂಡಿದ್ದರು. ಸಮಸ್ಯೆ ಬಂದಾಗ ಜನರ ಪರ ಧ್ವನಿ ಎತ್ತಿ ಹೋರಾಟ ಮಾಡಿದವರು’ ಎಂದು ತಿಳಿಸಿದರು. ಮಾಜಿ ಶಾಸಕ ಎಚ್. ನಿಂಗಪ್ಪ, ರಾಮಯ್ಯ, ಪಾಲಿಕೆ ಸದಸ್ಯರಾದ ಎಂ.ಬಿ.ಗೋವಿಂದೇಗೌಡ, ಎಚ್. ಎನ್.ಗಂಗಾಧರ್, ಕಸಾಪ ನಗರ ಜಿಲ್ಲಾ ಅಧ್ಯಕ್ಷ ಸಿ.ಕೆ. ರಾಮೇಗೌಡ, ವಿದ್ಯಾಸಂಸ್ಥೆ ಅಧ್ಯಕ್ಷ ಡಾ. ರಾಜೇಂದರ್, ಕ್ಷೇತ್ರ ಅಧ್ಯಕ್ಷ ಕೆ.ಜಿ. ಕುಮಾರ್, ಕೋಶಾಧ್ಯಕ್ಷ ಕೆ.ವೇಣುಗೋಪಾಲ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT