ಕಳೆದ ವರ್ಷವಷ್ಟೆ ಆರಂಭವಾದ ಸಮೋನ್ ಏರ್‌ಲೈನ್ಸ್ ಪ್ರಯಾಣಿಕರಿಗಾಗಿ ಈ ವಿನೂತನ ಯೋಜನೆಯೊಂದನ್ನು ಜಾರಿಗೆ ತಂದಿದ್ದು, ಆ ಯೋಜನೆಗೆ ಪ್ರಯಾಣಿಕರ ತೂಕವನ್ನು ಮಾನದಂಡವನ್ನಾಗಿ ಮಾಡಿಕೊಂಡಿದೆ. ಪ್ರಯಾಣಿಕರು ಮುಂಗಡ ಟಿಕೆಟ್ ಕಾಯ್ದಿರಿಸುವ ವೇಳೆ ತಮ್ಮ ತೂಕವನ್ನು ನಮೂದಿಸಬೇಕು. ನಮೂದಿಸಿದ ತೂಕವನ್ನು ವಿಮಾನ ಏರುವ ಮುನ್ನ ಮತ್ತೆ ಪರೀಕ್ಷಿಸಲಾಗುತ್ತದೆ.
`ಪ್ರಪಂಚದ ಎಲ್ಲಾ ಜನರ ತೂಕದ ಪ್ರಮಾಣ ಒಂದೇ ಆಗಿರುತ್ತದೆ ಎಂಬ ಏರ್‌ಲೈನ್ಸ್ ನಂಬಿದೆ' ಎಂದು ಸಮೋನ್ ವಿಮಾನಯಾನ ಸಂಸ್ಥೆ ಮುಖ್ಯಸ್ಥ ಕ್ರಿಸ್ ಲ್ಯಾಂಗ್‌ಟನ್ ತಿಳಿಸಿದ್ದಾರೆ. `ಯಾವುದೇ ವಿಮಾನವು ಒಟ್ಟು ಭಾರದ ಮೇಲೆ ಹಾರುತ್ತದೆಯೇ ಹೊರತು ಸೀಟುಗಳ ಪ್ರಮಾಣದಲ್ಲಲ್ಲ. ಇದು ಭವಿಷ್ಯದ ವಿಮಾನ ಹಾರಾಟದ ಹೊಸ ತತ್ವವಾಗಲಿದ್ದು ಕುಟುಂಬ ಸದಸ್ಯರೊಂದಿಗೆ ಸಂಚರಿಸುವ ವೇಳೆ ಇದು ಅನುಕೂಲಕರವಾಗಲಿದೆ' ಎಂದು ಅವರು ಹೇಳಿದ್ದಾರೆ.