ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆರಿಗೆ ಭೀತಿ:ಸೂಚ್ಯಂಕ ತೀವ್ರ ಕುಸಿತ

Last Updated 20 ಜೂನ್ 2011, 19:30 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಮುಂಬೈ ಷೇರು ಪೇಟೆ ಸಂವೇದಿ ಸೂಚ್ಯಂಕವು ಸೋಮವಾರದ ವಹಿವಾಟಿನಲ್ಲಿ 364 ಅಂಶಗಳಷ್ಟು ಕುಸಿತ ಕಂಡು ಕಳೆದ ನಾಲ್ಕು ತಿಂಗಳಲ್ಲೇ ಕನಿಷ್ಠ ಮಟ್ಟ 17,507 ಅಂಶಗಳಿಗೆ ಇಳಿಕೆ ಕಂಡಿತು.

ಮಾರಿಷಸ್ ಮೂಲಕ ಭಾರತದ ಷೇರುಪೇಟೆಗೆ ಹರಿದು ಬರುವ ಹೂಡಿಕೆಗಳ ಮೇಲೆ ಸರ್ಕಾರ ತೆರಿಗೆ ವಿಧಿಸಲಿದೆ ಎನ್ನುವ ಸುದ್ದಿ ಸೂಚ್ಯಂಕ ಕುಸಿಯುವಲ್ಲಿ ಪ್ರಮುಖ ಪಾತ್ರ ವಹಿಸಿತು. ಜಾಗತಿಕ ಒತ್ತಡಗಳ ಜತೆಗೆ, ಈ ಹೊಸ ಭೀತಿಯಿಂದ ಮಧ್ಯಾಹ್ನದ ವೇಳೆಗೆ  ಸೂಚ್ಯಂಕ 556 ಅಂಶಗಳಷ್ಟು ಇಳಿಕೆ ಪ್ರದರ್ಶಿಸಿತು.

 ತೆರಿಗೆ ಲಾಭಕ್ಕಾಗಿ ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್‌ಡಿಐ) ಮತ್ತು ಷೇರುಪೇಟೆ ಹೂಡಿಕೆಯ ದೊಡ್ಡ ಪಾಲು ಮಾರಿಷಸ್ ಮೂಲಕ ಭಾರತದ ಮಾರುಕಟ್ಟೆಗೆ  ಬರುತ್ತಿದೆ. `ಸರ್ಕಾರ ಮಾರಿಷಸ್ ಮೂಲಕ ಬರುವ ಹೂಡಿಕೆಗಳ ಮೇಲೆ ಮನ ಬಂದಂತೆ ತರಿಗೆ ವಿಧಿಸುವುದಿಲ್ಲ, ಹೂಡಿಕೆದಾರರು ಆತಂಕಗೊಳ್ಳುವ ಪರಿಸ್ಥಿತಿ ಬೇಡ~ ಎಂದು ಹಣಕಾಸು ಕಾರ್ಯದರ್ಶಿ ಸುನಿಲ್ ಮಿತ್ರಾ ಹೇಳಿಕೆ ನೀಡಿದ ನಂತರ ವಹಿವಾಟು ಸಹಜ ಸ್ಥಿತಿಗೆ ಮರಳಿತು.

ರಾಷ್ಟ್ರೀಯ ಷೇರು ಸೂಚ್ಯಂಕ `ನಿಫ್ಟಿ~ ಕೂಡ ಸೋಮವಾರ 108 ಅಂಶಗಳಷ್ಟು ಕುಸಿತ ಕಂಡು 5,257 ಅಂಶಗಳಿಗೆ ವಹಿವಾಟು ಕೊನೆಗೊಳಿಸಿತು. ಇದು ಕೂಡ   ಕಳೆದ ನಾಲ್ಕು ತಿಂಗಳಲ್ಲಿ ಗರಿಷ್ಠ ಇಳಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT