ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ಯಾಜ್ಯ ಸಂಗ್ರಹಕ್ಕೆ ಲಾರಿ ವ್ಯವಸ್ಥೆ

Last Updated 18 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಬಟ್ಟೆಗೆ ಬಣ್ಣ ಹಾಕುವ ಸಣ್ಣ ಪ್ರಮಾಣದ ಕೈಗಾರಿಕೆಗಳಿಂದ ಆಗುವ ಮಾಲಿನ್ಯವನ್ನು ಸಂಗ್ರಹಿಸಲು ಲಾರಿ ವ್ಯವಸ್ಥೆ ಮಾಡಲಾಗುವುದು~ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಎ.ಎಸ್.ಸದಾಶಿವಯ್ಯ ಹೇಳಿದರು.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಬುಧವಾರ ಪರಿಸರ ಭವನದಲ್ಲಿ ಏರ್ಪಡಿಸಿದ್ದ ಬಟ್ಟೆಗೆ ಬಣ್ಣ ಹಾಕುವ ಸಣ್ಣ ಪ್ರಮಾಣದ ಕೈಗಾರಿಕೆಗಳಿಂದ ಆಗುವ ಮಾಲಿನ್ಯ ಕುರಿತ ಕಾರ್ಯಾಗಾರದಲ್ಲಿ  ಮಾತನಾಡಿದರು.

`ಕಾಟನ್ ಪೇಟೆ, ರಾಜಾಜಿನಗರ, ಕಾಮಾಕ್ಷಿಪಾಳ್ಯ, ಸಂಪಂಗಿರಾಮನಗರ ಮುಂತಾದೆಡೆ ಬಟ್ಟೆಗೆ ಬಣ್ಣ ಹಾಕುವ ಸುಮಾರು 500 ಸಣ್ಣ ಪ್ರಮಾಣದ ಕೈಗಾರಿಕೆಗಳಿದ್ದು, ಪ್ರತಿ ನಿತ್ಯ ಏಳು ಲಕ್ಷ ಲೀಟರ್‌ನಷ್ಟು ಬಣ್ಣದ ಕಲುಷಿತ ತ್ಯಾಜ್ಯವನ್ನು ಇವು ಹೊರಬಿಡುತ್ತಿವೆ~ ಎಂದರು.

`ಬಣ್ಣ ಹಚ್ಚುವ ಕೈಗಾರಿಕೆಗಳಿಂದ ಉಂಟಾಗುತ್ತಿರುವ ಮಾಲಿನ್ಯದ ಬಗ್ಗೆ ಮಂಡಳಿ ಮುಂದಿನ ದಿನಗಳಲ್ಲಿ ಕಾನೂನು ಕ್ರಮ ತೆಗೆದುಕೊಳ್ಳುವಲ್ಲಿ ಹಿಂದೆ ನೋಡುವುದಿಲ್ಲ~ ಎಂದರು.

ಕೇಂದ್ರೀಯ ರೇಷ್ಮೆ ತಾಂತ್ರಿಕ ಸಂಶೋಧನ ಸಂಸ್ಥೆಯ ಎಸ್.ಎ.ಹಿಪ್ಪರಗಿ ಮಾತನಾಡಿ, `ಬಣ್ಣ ಹಾಕುವ ಸಂದರ್ಭದಲ್ಲಿ ಸರಿಯಾದ ಪದ್ಧತಿ ಅನುಸರಿಸಿದರೆ ನೋಟಿಸ್ ಭಯ ತಪ್ಪುತ್ತದೆ~ ಎಂದರು.

ನಂತರ ನಡೆದ ಸಂವಾದದಲ್ಲಿ ಒಂದು ಮೋಟಾರು ವಾಹನ ಹೋಗಲು ಆಸ್ಪದವಿಲ್ಲದ ಸ್ಥಳದಲ್ಲಿ ದೊಡ್ಡ ಲಾರಿ ತಂದು ತ್ಯಾಜ್ಯ ಸಂಗ್ರಹ ಮಾಡುವುದಕ್ಕಿಂತ, ಪೈಪ್‌ಲೈನ್ ಹಾಕಿಸಿ ಒಂದೆಡೆ ನೀರು ಶೇಖರಿಸಿದರೆ ಅನುಕೂಲ ಆಗುತ್ತದೆ~ ಎಂದು ಸುವರ್ಣ ಕರ್ನಾಟಕ ರೇಷ್ಮೆ ಗುಡಿ ಕೈಗಾರಿಕೆ ಮಾಲೀಕರ ಸಂಘದ ಅಧ್ಯಕ್ಷ ಪ್ರಸನ್ನ ಕುಮಾರ್  ಕೋರಿದರು.

ಸುವರ್ಣ ಕರ್ನಾಟಕ ರೇಷ್ಮೆ ಗುಡಿ ಕೈಗಾರಿಕೆ ಮಾಲೀಕರ ಸಂಘದ ಪದಾಧಿಕಾರಿ ರಾಜಗೋಪಾಲ್ `ಇಲ್ಲಿ ಕೆಲಸ ಮಾಡುವ ಜನರಿಗೆ ಶಿಕ್ಷಣವಿಲ್ಲ. ಅದಕ್ಕಾಗಿ ಅವರಿಗೆಲ್ಲ ತರಬೇತಿ ಕಾರ್ಯಕ್ರಮಗಳನ್ನು ನಡೆಸಬೇಕು~ ಎಂಬ ಮನವಿಗೆ ಸ್ಪಂದಿಸಿದ ಮಂಡಳಿಯ ಅಧ್ಯಕ್ಷರು ಕೈಗಾರಿಕೆಗಳ ಪ್ರದೇಶ ಅಥವಾ ಮಂಡಳಿಯಲ್ಲಿಯೇ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳ ಲಾಗುವುದು~ ಎಂದರು.

ಮಂಡಳಿಯ ತಾಂತ್ರಿಕ ಸಲಹಾ ಸಮಿತಿಯ ಸದಸ್ಯ ಡಾ. ಜಯಪ್ರಕಾಶ್,  ಹಿರಿಯ ಪರಿಸರ ಅಧಿಕಾರಿ ಕೆ.ಎಂ. ನಾಗರಾಜು, ರಾಷ್ಟ್ರೀಯ ಟೆಕ್ಸ್‌ಟೈಲ್ ನಿಗಮದ  ಜಿ. ಮಹದೇವ್ ಮತ್ತಿತರರು ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT