ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಧ್ರುವದ ಅಂಟಾರ್ಟಿಕ್‌ ಮಂಜುಗಡ್ಡೆ ಅಡಿ ಅಳಿವೆ ಪತ್ತೆ!

Last Updated 22 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ನ್ಯೂಯಾರ್ಕ್‌ (ಪಿಟಿಐ): ದಕ್ಷಿಣ ಧ್ರುವ ದ ಅಂಟಾರ್ಟಿಕ್‌ ಸಾಗರದ ಮಂಜು ಗಡ್ಡೆ  ಅಡಿ ಇದೇ ಮೊದಲ ಬಾರಿಗೆ ಅಳಿವೆ ಯೊಂದು (ನದಿಮುಖ) ಪತ್ತೆಯಾಗಿದೆ.

ಪಶ್ಚಿಮ ಅಂಟಾರ್ಕ್‌ಟಿಕ್‌ ಮಂಜು ಗಡ್ಡೆಯ ದಪ್ಪ ಪದರಿನ ಅಡಿ ಈ ಅಳಿವೆಯನ್ನು  ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ.
ನದಿಯ ಸಿಹಿ ನೀರು ಮತ್ತು ಸಾಗರದ ಉಪ್ಪು ನೀರು ಸೇರುವ ಈ ನದಿಮುಖಜ ಪ್ರದೇಶಲ್ಲಿಯ ಪರಿಸರದಲ್ಲಿ ಒಂದೇ ಪ್ರಭೇದಕ್ಕೆ ಸೇರಿದ ವಿಚಿತ್ರ ಜಲಚರಗಳೂ ಇರುವ ಸಾಧ್ಯತೆ ಇದೆ ಎಂದು ವಿಜ್ಞಾನಿ ಗಳು ಶಂಕಿಸಿದ್ದಾರೆ. 

ಒಂದು ಕಿ.ಮೀ ಅಗಲ ಮತ್ತು ಏಳು ಮೀಟರ್‌ ಆಳದ ಈ ನದಿ ಗಳು ಸಾಗರವನ್ನು ಸೇರುವಲ್ಲಿ ಮಾತ್ರ ಸ್ವಲ್ಪ ಮಟ್ಟಿಗೆ ತೆರೆದುಕೊಂಡಿದ್ದು, ಗುಪ್ತ ಗಾಮಿನಿಯಂತೆ ಹರಿಯುತ್ತವೆ. 

ನ್ಯೂಜಿಲೆಂಡ್‌ನ ವಿಕ್ಟೋರಿಯಾ ವಿ.ವಿ ಯ ಹೌ ಹೊರ್ಗಾನ್‌ ನೇತೃತ್ವದ ವಿಜ್ಞಾನಿಗಳ ತಂಡ ಈ ಅಳಿವೆಯನ್ನು ಪತ್ತೆ ಹಚ್ಚಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT