ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಸರಾ ಅಥ್ಲೆಟಿಕ್ಸ್: ಮತ್ತೆ ಮೂರು ವಿಕ್ರಮ

Last Updated 2 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಮೈಸೂರು: ದಸರಾ ಮಹೋತ್ಸವದ ಗುಂಗಿನಲ್ಲಿ ಮೈಮರೆತಿರುವ `ಮಲ್ಲಿಗೆ ನಗರಿ~ಯ ಚಾಮುಂಡಿ ವಿಹಾರ ಮೈದಾನದಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ದಸರಾ ಅಥ್ಲೆಟಿಕ್ಸ್‌ನಲ್ಲಿ ಮತ್ತೆ ಮೂರು ನೂತನ ದಾಖಲೆಗಳು ಅರಳಿದವು.

ಪುರುಷರ 110 ಮೀಟರ್   ಹರ್ಡಲ್ಸ್‌ನಲ್ಲಿ ಬೆಂಗಳೂರು ಗ್ರಾಮೀಣ ವಿಭಾಗದ ಎಂ.ಕೆ. ಸುಮಂತ್, ಡಿಸ್ಕಸ್ ಥ್ರೋನಲ್ಲಿ ಮೈಸೂರಿನ ಧರ್ಮವೀರ್ ಸಿಂಗ್ ಮತ್ತು ಮಹಿಳೆಯರ 800 ಮೀ. ಓಟದಲ್ಲಿ ಬೆಂಗಳೂರು ನಗರ ವಿಭಾಗದ ಕೆ.ಸಿ. ಶ್ರುತಿ ಹೊಸ ದಾಖಲೆ ಬರೆದರು.

2008ರ ಕೂಟದಲ್ಲಿ ಪುರುಷರ ಹರ್ಡಲ್ಸ್‌ನಲ್ಲಿ ಬೆಳಗಾವಿ ವಿಭಾಗದ ರೋಹಿತ್ ಹಾವಳ್ ( 15.3ಸೆಕೆಂಡು) ನಿರ್ಮಿಸಿದ್ದ ದಾಖಲೆಯನ್ನು ಸುಮಂತ್ (ನೂತನ ದಾಖಲೆ: 15.1ಸೆಕೆಂಡು) ಅಳಿಸಿ ಹಾಕಿದರು.

ಇತ್ತ ಡಿಸ್ಕಸ್ ಥ್ರೋನಲ್ಲಿ ಗಮನ ಸೆಳೆದ  ಮೈಸೂರು ವಿಭಾಗದ ಧರ್ಮವೀರ ಸಿಂಗ್ (ನೂತನ ದಾಖಲೆ: 47.76ಮೀ) ಅವರು 1998ರಲ್ಲಿ ಬೆಂಗಳೂರು ಗ್ರಾಮಾಂತರ ವಿಭಾಗದ ಡಿ.ಸಿ. ರಾಜೀವ್ (ಹಳೆಯದು: 46.92ಮೀ) ನಿರ್ಮಿಸಿದ್ದ ದಾಖಲೆಯನ್ನು ಮೀರಿ ನಿಂತರು.

ಮಹಿಳೆಯರ 800 ಮೀಟರ್ ಓಟದಲ್ಲಿ ಇಪ್ಪತ್ತು ವರ್ಷಗಳ ಹಿಂದೆ ಮೈಸೂರಿನ ಎಚ್.ಎಂ. ಸುನಂದ (ಕಾಲ:2ನಿ;19.1ಸೆ) ಬರೆದಿದ್ದ ದಾಖಲೆಯನ್ನು ಬೆಂಗಳೂರು ನಗರ ವಿಭಾಗದ ಕೆ.ಸಿ. ಶ್ರುತಿ (ನೂತನ: 2ನಿ,15.6ಸೆ) ಅಳಿಸಿ ಹಾಕಿದರು.

ಶನಿವಾರ ಮಹಿಳೆಯರ ಲಾಂಗ್‌ಜಂಪ್‌ನಲ್ಲಿ ನೂತನ ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದಿದ್ದ ಬೆಂಗಳೂರು ನಗರ ವಿಭಾಗದ ಜಿ.ಎಂ. ಐಶ್ವರ್ಯ ಭಾನುವಾರ 100 ಮೀಟರ್    ಹರ್ಡಲ್ಸ್‌ನಲ್ಲಿ ಸ್ವರ್ಣ ಸಾಧನೆ ಮಾಡಿದರು.

ಫಲಿತಾಂಶಗಳು: ಪುರುಷರ ವಿಭಾಗ: 800 ಮೀ ಓಟ: ಕೆ.ಎ. ಭರತ್ (ಬೆಂಗಳೂರು ನಗರ)-1, ಡಿ. ರಘು (ಬೆಂಗಳೂರು ನಗರ)-2, ಶಾನಭಾಜ್ ತಾರ‌್ಸೆ (ಬೆಳಗಾವಿ)-3; ಕಾಲ: 1ನಿ,59.32ಸೆ; 110ಮೀ ಹರ್ಡಲ್ಸ್: ಎಂ.ಕೆ. ಸುಮಂತ್ (ಬೆಂಗಳೂರು ಗ್ರಾಮೀಣ)-1, ಬಿ. ಚೇತನ್ (ಬೆಂಗಳೂರು ನಗರ)-2, ಸಮರ್ಥ ಸದಾಶಿವ (ಮೈಸೂರು)-3 ನೂತನ ದಾಖಲೆ ಕಾಲ: 15.1ಸೆ; (ಹಳೆಯದು: 15.3ಸೆ); ಡಿಸ್ಕಸ್ ಥ್ರೋ: ಧರ್ಮವೀರ್ ಸಿಂಗ್ (ಮೈಸೂರು)-1, ಶೀತಲಕುಮಾರ್ (ಬೆಂಗಳೂರು ನಗರ)-2, ಎಂ.ಆರ್. ನಂದೀಶ್ (ಮೈಸೂರು)-3 ನೂತನ ದಾಖಲೆ ದೂರ: 47.76ಮೀ (ಹಳೆಯದು: 46.92ಮೀ).

ಮಹಿಳೆಯರ ವಿಭಾಗ: 800ಮೀ ಓಟ: ಕೆ.ಸಿ. ಶ್ರುತಿ (ಬೆಂಗಳೂರು ನಗರ)-1, ಬಿ.ಇ. ಇಂದಿರಾ (ಬೆಂಗಳೂರು ನಗರ)-2, ಸಿ. ಸ್ಮಿತಾ (ಮೈಸೂರು)-3, ನೂತನ ಕೂಟ ದಾಖಲೆ: 2ನಿ,15.6ಸೆ (ಹಳೆಯದು; 2ನಿ;19.1ಸೆ) 100ಮೀ. ಹರ್ಡಲ್ಸ್: ಜಿ.ಎಂ. ಐಶ್ವರ್ಯ (ಬೆಂಗಳೂರು ನಗರ)-1, ಶಿಲ್ಪಾ ಸುಂದರ್ (ಬೆಂಗಳೂರು ಗ್ರಾಮಾಂತರ)-2, ಟ್ರಿಪಲ್ ಜಂಪ್: ಸಹನಕುಮಾರಿ (ಬೆಂಗಳೂರು ನಗರ)-1, ಬಿ.ಬಿ. ಶುಭಾ (ಬೆಂಗಳೂರು ನಗರ)-2, ಎಸ್. ಚಂದ್ರವ್ವ (ಬೆಳಗಾವಿ)-3; ದೂರ: 11.74ಮೀ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT