ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೂರದೃಷ್ಟಿ ಇಲ್ಲದ ನಾಯಕರು

ಅಕ್ಷರ ಗಾತ್ರ

ಪಶ್ಚಿಮ ಘಟ್ಟ ಪ್ರದೇಶದ 10 ಪ್ರಮುಖ ತಾಣಗಳನ್ನು ಯುನೆಸ್ಕೊ ವಿಶ್ವ ಪರಂಪರೆಯ ಪಟ್ಟಿಗೆ ಸೇರಿಸುವ ಪ್ರಸ್ತಾವಕ್ಕೆ ತಥಾಕಥಿತ ಕೆಲವು ಜನಪ್ರತಿನಿಧಿಗಳು ವ್ಯಕ್ತಪಡಿಸಿರುವ ವಿರೋಧವನ್ನು ಗಮನಿಸಿದಾಗ ಇವರಿಗೆ ದೇಶ ಮತ್ತು ರಾಜ್ಯದ ಬಗೆಗೆ ಯಾವುದೇ ದೂರದೃಷ್ಟಿಯಿಲ್ಲದವರು ಎನ್ನುವುದು ಸಾಬೀತಾಗಿದೆ.

ಹಾಗೆ ನೋಡಿದರೆ, ಈ ಮಂದಿ ಸದರಿ ಪ್ರಸ್ತಾವವನ್ನು ವಿರೋಧಿಸಿರುವುದರಲ್ಲಿ ಅಂತಹ ಅಚ್ಚರಿಯೇನೂ ಇಲ್ಲ. ಯಾಕೆಂದರೆ, ಇವರಲ್ಲಿ ಬಹುತೇಕ ಮಂದಿ ಒಂದಿಲ್ಲೊಂದು ಉದ್ಯಮ ವ್ಯವಹಾರಗಳಲ್ಲಿ ಬಿಡುವಿಲ್ಲದೆ ತೊಡಗಿಕೊಂಡಿರುವವರು.

ತಮ್ಮ ಹಿತಾಸಕ್ತಿಯ ಬಗ್ಗೆ ಅವರು ಮೊದಲ ಆದ್ಯತೆ ನೀಡುವುದು ಸಹಜವೇ ಆಗಿದೆ. ಪಶ್ಚಿಮ ಘಟ್ಟದಲ್ಲಿ  `ಅಭಿವೃದ್ಧಿ~ ಮಾಡಲು ತೊಡಕಾಗುತ್ತದೆ ಎಂದು ಇವರು ಎಬ್ಬಿಸುತ್ತಿರುವ ಹುಯಿಲು ಈ ವ್ಯಾಪಾರ ವ್ಯವಹಾರ ಹಿತಾಸಕ್ತಿಯ ಮುಂದುವರಿದ ಭಾಗ ಎಂಬುದು ಯಾರಿಗೇ ಆದರೂ ಅರ್ಥವಾಗುವಂಥದ್ದೇ.

ಕೇವಲ ಚುನಾವಣೆಗಳನ್ನು ಗೆಲ್ಲುವುದು, ಅಭಿವೃದ್ಧಿಯ ಹೆಸರಿನಲ್ಲಿ ದುಡ್ಡು ಹೊಡೆಯುವುದನ್ನೇ ಜನಸೇವೆ ಎಂದು ಪರಿಗಣಿಸಿ ಆ ಹಾದಿಯಲ್ಲಿ ನಿಷ್ಠೆಯಿಂದ ನಡೆಯುತ್ತಿರುವ, ಕಿಂಚಿತ್ತಾದರೂ ಪ್ರಬುದ್ಧ ಚಿಂತನೆಯನ್ನಾಗಲಿ ದೂರದೃಷ್ಟಿಯನ್ನಾಗಲಿ ಹೊಂದಿರದ ಇಂತಹ ರಾಜಕಾರಣಿಗಳು ಪಶ್ಚಿಮಘಟ್ಟಗಳ ಮಹತ್ವವನ್ನು ಅರಿಯಬೇಕು ಅವುಗಳನ್ನು ರಕ್ಷಿಸಲು ಮುಂದಾಗಬೇಕು ಎಂದು ನಿರೀಕ್ಷಿಸುವ ನಾವೇ ಮೂರ್ಖರು.

 ನಮ್ಮ ಜುಟ್ಟನ್ನು ಯುನೆಸ್ಕೋದ ಕೈಗೆ ಏಕೆ ಕೊಡಬೇಕು ಎಂದು ಈ ಮಂದಿ ಪ್ರಶ್ನಿಸುತ್ತಾರೆ. ವಾಸ್ತವದಲ್ಲಿ ಅಭಿವೃದ್ಧಿಯ ನಿಜ ಅರ್ಥವನ್ನಾಗಲಿ, ಪರಿಸರದ ಮಹತ್ವವನ್ನಾಗಲಿ ಅರಿಯದ ಈ ಮಂದಿಯ ಕೈಗೆ ನಮ್ಮ ಜುಟ್ಟನ್ನು ಕೊಟ್ಟು ಈಗ ಬಾಯಿ ಬಾಯಿ ಬಡಿದುಕೊಳ್ಳುವಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT