ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ ಹೈಕೋರ್ಟ್ ಸ್ಫೋಟ ಪ್ರಕರಣ: ರೇಖಾಚಿತ್ರ ಹೋಲುವ ಇಬ್ಬರ ಬಂಧನ

Last Updated 10 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಅಲ್ವಾರ್ (ಪಿಟಿಐ): ದೆಹಲಿ ಹೈಕೋರ್ಟ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತರ ರೇಖಾಚಿತ್ರವನ್ನು ಹೋಲುವ ಕಾಶ್ಮೀರ ಮೂಲದ ಇಬ್ಬರು ವ್ಯಕ್ತಿಗಳನ್ನು ರಾಜಸ್ತಾನದ ಅಲ್ವಾರ್ ಜಿಲ್ಲೆಯಲ್ಲಿ ವಶಕ್ಕೆ ತೆಗೆದುಕೊಳ್ಳಲಾಗಿದೆ. ಬಂಧಿತರನ್ನು ಅಬ್ದುಲ್ ಗನಿ ಮತ್ತು ಮಿಯಾನ್ ಅಹಮದ್ ಎಂದು ಗುರುತಿಸಲಾಗಿದೆ.

`ಇವರು ಅನಂತನಾಗ್ ಜಿಲ್ಲೆಯ ಗ್ರಾಮವೊಂದರ ನಿವಾಸಿಗಳಾಗಿದ್ದು, ಇವರ ಮುಖಚರ್ಯೆಯು ದೆಹಲಿ ಪೊಲೀಸರು ಬಿಡುಗಡೆ ಮಾಡಿದ್ದ ಶಂಕಿತರ ರೇಖಾಚಿತ್ರಗಳಿಗೆ ಹೋಲುತ್ತಿರುವುದನ್ನು ಕೆಲವು ಜನರು ಗುರುತಿಸಿದ್ದರು. ಈ ಹಿನ್ನೆಲೆಯಲ್ಲಿ ಇಬ್ಬರನ್ನೂ ಶುಕ್ರವಾರ ಸಂಜೆ ಕಿಶನ್‌ಗಡ ಬಾಸ್ ಪ್ರದೇಶದಲ್ಲಿ ಬಂಧಿಸಲಾಯಿತು~ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಹೇಂದ್ರ ತಿಳಿಸಿದ್ದಾರೆ.

`ಶುಕ್ರವಾರ ರಾತ್ರಿ ಪೂರ್ತಿ ಇಬ್ಬರ ವಿಚಾರಣೆ ನಡೆಸಲಾಗಿದೆ. ಅವರು ಯಾವುದೇ ಸಂಶಯಾಸ್ಪದ ಚಟುವಟಿಕೆಗಳಲ್ಲಿ ತೊಡಗಿಕೊಂಡಿರಲಿಲ್ಲ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ~ ಎಂದು ಅವರು ಹೇಳಿದ್ದಾರೆ.

ಸ್ವಿಚ್ ಪತ್ತೆ: ಈ ಮಧ್ಯೆ ಪೊಲೀಸರಿಗೆ ಸ್ಫೋಟ ಸ್ಥಳದಲ್ಲಿ ಸ್ವಿಚ್ ಒಂದು ದೊರಕಿದ್ದು, ಹೈಕೋರ್ಟ್ ಹೊರಭಾಗದಲ್ಲಿ ಸೂಟ್‌ಕೇಸ್‌ನಲ್ಲಿದ್ದ ಬಾಂಬ್‌ನ್ನು ಸ್ಫೋಟಿಸಲು ಈ ಸ್ವಿಚ್ ಬಳಸಿರಬಹುದು ಎಂದು ಶಂಕಿಸಲಾಗಿದೆ. ಇಷ್ಟಾದರೂ ಸ್ಫೋಟಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಗಳಿಗೆ ಇದುವರೆಗೆ ಖಚಿತವಾದ ಸುಳಿವು ಸಿಕ್ಕಿಲ್ಲ. ಸ್ಫೋಟಕ್ಕೆ ಬಳಸಿರಬಹುದಾದ ಟೈಮರ್‌ಗಾಗಿ ಶೋಧ ನಡೆದಿದೆ.

ಮುಂಬೈನಲ್ಲಿ ವಿಚಾರಣೆ: ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈನಲ್ಲಿ ಶನಿವಾರ ಇಬ್ಬರನ್ನು ವಶಕ್ಕೆ ತೆಗೆದುಕೊಂಡು, ವಿಚಾರಣೆ ನಡೆಸಿದ ಬಳಿಕ ಬಿಡುಗಡೆ ಮಾಡಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
`ಸ್ಫೋಟಕ್ಕೂ ಅವರಿಗೂ ಯಾವುದೇ ಸಂಬಂಧವಿಲ್ಲ ಎಂದು ತಿಳಿದು ಬಂದ ಬಳಿಕ ಬಿಡುಗಡೆ ಮಾಡಲಾಗಿದೆ.
 
ದೆಹಲಿ ಪೊಲೀಸರು ಬಿಡುಗಡೆ ಮಾಡಿದ್ದ ಶಂಕಿತರ ಛಾಯಾಚಿತ್ರ ಹಾಗೂ ಇವರ ನಡುವೆ ಹೋಲಿಕೆ ಇದ್ದಿದ್ದರಿಂದ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿತ್ತು~ ಎಂದು ಮಹಾರಾಷ್ಟ್ರ ಎಟಿಎಸ್ ಮುಖ್ಯಸ್ಥ ರಾಕೇಶ್ ಮರಿಯಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT