ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವಾಲಯ ಜೀರ್ಣೋದ್ಧಾರಕ್ಕೆ 7 ಲ್ಷ

Last Updated 7 ಅಕ್ಟೋಬರ್ 2012, 8:35 IST
ಅಕ್ಷರ ಗಾತ್ರ

ಕಡೂರು: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿನ ದೇವಾಲಯಗಳ ನಿರ್ಮಾಣ ಮತ್ತು ಜೀರ್ಣೋದ್ದಾರಕ್ಕೆ ಸೆಪ್ಟೆಂಬರ್ ತಿಂಗಳಲ್ಲಿ 7 ಲಕ್ಷ ರೂ. ಹಣವನ್ನು ನೀಡಿರುವುದಾಗಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯ ತಾಲ್ಲೂಕು ಯೋಜನಾಧಿಕಾರಿ ದಿನೇಶ್ ತಿಳಿಸಿದರು.

ಪಟ್ಟಣದ ಶ್ರೀಕ್ಷೇತ್ರ ಯೋಜನೆಯ ಕಚೇರಿಯಲ್ಲಿ ಗುರುವಾರ ಅವರು ಮಾತನಾಡಿದರು.
ಆಸಂದಿಯ ಕೊತ್ತಲದಮ್ಮ ದೇವಾಲಯಕ್ಕೆ 25 ಸಾವಿರ, ಅಣ್ಣೀಗೆರೆ ಕರಿಯಮ್ಮ, ಚೌಡೇಶ್ವರಿ ಅಮ್ಮನ ದೇವಾಲಯ 50 ಸಾವಿರ, ಚೌಳಹಿರಿಯೂರು ಸೋಮೇಶ್ವರ ಸ್ವಾಮಿ ಸಾರ್ವಜನಿಕ ಸಮುದಾಯ ಭವನಕ್ಕೆ 1ಲಕ್ಷ, ಯಗಟಿಯ ಸೂರಾಪುರದ ಕಲ್ಲೇಶ್ವರ ಸ್ವಾಮಿ ದೇವಾಲಯದ ಕಟ್ಟಡ ನಿರ್ಮಾಣ 1ಲಕ್ಷ, ವೈ.ಮಲ್ಲಾಪುರ ಚೌಡೇಶ್ವರಿ ದೇವಿ 25 ಸಾವಿರ, ಮಲ್ಲೇಶ್ವರ ಭಗೀರಥ ಉಪ್ಪಾರ ಸಂಘ, ಎಂ.ಕೋಡಿಹಳ್ಳಿಗೆ ಡ್ರಮ್ ಸೆಟ್ ಖರೀದಿಗೆ, ಗರ್ಜೆ ಕಲ್ಲೇಶ್ವರ ಸ್ವಾಮಿ 20 ಸಾವಿರ, ಕಡೂರು ಮೈಲಾರಲಿಂಗೇಶ್ವರ ಸ್ವಾಮಿ 1ಲಕ್ಷ, ತುರುವನಹಳ್ಳಿ ರಂಗನಾಥಸ್ವಾಮಿ 25 ಸಾವಿರ, ಆಸಂದಿ ಮರುಳಸಿದ್ದೇಶ್ವರ ಸಮುದಾಯ ಭವನ 25 ಸಾವಿರ, ಎಸ್.ಬಿದರೆ ಬೀರಲಿಂಗೇಶ್ವರ ಸ್ವಾಮಿ 1 ಲಕ್ಷ, ದೊಡ್ಡಪಟ್ಟಣಗೆರೆ ಆಂಜನೇಯಸ್ವಾಮಿ 30 ಸಾವಿರ, ಕುರುಬಗೆರೆ ಮೈಲಾರಲಿಂಗೇಶ್ವರ 25 ಸಾವಿರ, ಬಾಣೂರಿನ ಏಳುಕೋಟಿ ಮೈಲಾರಲಿಂಗೇಶ್ವರ 15 ಸಾವಿರ, ವೈ.ಮಲ್ಲಾಪುರಕ್ಕೆ 25 ಸಾವಿರ, ಚೀಲನಹಳ್ಳಿ ಆಂಜನೇಯ ಸ್ವಾಮಿ 25 ಸಾವಿರ ರೂಗಳನ್ನು ನೀಡಿದ್ದಾರೆ.

ಅನೇಕ ಸಮುದಾಯ ಭವನ, ದೇವಾಲಯ ವಿವಿಧ ಸಂಘ ಸಂಸ್ಥೆಗಳಿಗೆ ಉಪಕರಣಗಳನ್ನು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ನೀಡಿರುವುದಾಗಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT