ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೋಣಿ ನದಿಗೆ ಪ್ರವಾಹ: ಸಂಚಾರ ಬಂದ್

Last Updated 20 ಸೆಪ್ಟೆಂಬರ್ 2013, 6:34 IST
ಅಕ್ಷರ ಗಾತ್ರ

ತಾಳಿಕೋಟೆ: ದೋಣಿ ನದಿ ಪಾತ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆ­ಯಿಂದಾಗಿ ಪಟ್ಟಣದ ಬಳಿಯ ರಾಜ್ಯ ಹೆದ್ದಾರಿಯಲ್ಲಿರುವ ಬ್ರಿಟಿಷ್‌ ಕಾಲದ ಸೇತುವೆಯೂ ಪ್ರವಾಹದ ನೀರಲ್ಲಿ ಮುಳುಗಿದ ಪರಿಣಾಮ ಬುಧವಾರ ಬೆಳಿಗ್ಗೆ ವಿಜಾಪುರ, ಮುದ್ದೇಬಿಹಾಳ ಹುಬ್ಬಳ್ಳಿ ಮೊದಲಾದ ನಗರಗಳಿಂದ ಪಟ್ಟಣಕ್ಕೆ ಬರುವ ಮತ್ತು ಗುಲ್ಬರ್ಗ ರಾಯಚೂರು ಜಿಲ್ಲೆಗಳತ್ತ ಹೋಗುವ ಸಂಪರ್ಕ ಸ್ಥಗಿತವಾಗಿತ್ತು.

ವಿಜಾಪುರಕ್ಕೆ ಹೋಗುವವರು ದೇವರ ಹಿಪ್ಪರಗಿ ಮಾರ್ಗ ಅನುಸರಿಸಬೇಕಾ ಯಿತು. ಪ್ರವಾಹದಿಂದಾಗಿ ವಾಹನಗಳ ಸಂಚಾರ ನಿಂತು ಹೋಗಿ ತಾಳಿಕೋಟೆ ಪಟ್ಟಣಕ್ಕೆ ಬರಬೇಕಾದ ಪ್ರಯಾಣಿಕರು ಕೆಲಕಾಲ ಪರದಾಡುವಂತಾಯಿತು. ಮಧ್ಯಾಹ್ನದ ವೇಳೆಗೆ ಪ್ರವಾಹ ಇಳಿ ಮುಖವಾಗಿ ಸಂಚಾರ ಪುನರಾರಂಭ ಗೊಂಡಿತು.

ಪಟ್ಟಣದಿಂದ ಗುಲ್ಬರ್ಗ ಜಿಲ್ಲೆ, ರಾಯಚೂರು ಜಿಲ್ಲೆಗಳಿಗೆ ಹಾಗೂ ವಿಜಾಪುರ ಸೇರಿದಂತೆ ಪ್ರಮುಖ ಪಟ್ಟಣ ಗಳಿಗಳಿಗೆ ಸಂಪರ್ಕ ಕಲ್ಪಿಸಲು ಮೂರು ಸೇತುವೆಗಳಿದ್ದು ಅವುಗಳಲ್ಲಿ ಹಡಗಿನಾ ಳದ ನೆಲಮಟ್ಟದ ಸೇತುವೆ ಮಂಗಳ ವಾರದಿಂದಲೇ ಪ್ರವಾಹದಿಂದ ಮುಚ್ಚಿ ಹೋಗಿದೆ.

ಬ್ರಹತ್‌ ಸೇತುವೆ ದುರಸ್ತಿ್ತ ಕಾರ್ಯ ನಡೆದಿದೆ. ಈ ಮಧ್ಯೆ ಉಳಿದಿದ್ದ ಏಕೈಕ ಸೇತುವೆ ಬ್ರಿಟಿಷ್‌ ಕಾಲದ್ದು ಕಳೆದ ನಾಲ್ಕೈದು ತಿಂಗಳಿಂದ ಬಳಕೆಯಾಗು ತ್ತಿದೆ. ಕಳೆದೆರಡು ದಿನಗಳಿಂದ ಸುರಿ ಯುತ್ತಿರುವ ಮಳೆಯಿಂದಾಗಿ ಡೋಣಿ ನದಿಗೆ ಪ್ರವಾಹ ಬಂದಿದೆ. ಬುಧವಾರ ಈ ಸೇತುವೆ ಮೇಲೂ ಪ್ರವಾಹ ಬಂದು ಪಟ್ಟಣಕ್ಕೆ ಡೋಣಿ ಆಚೆಯ ಪ್ರಮುಖ ಹಾಗೂ ಇತರ ಪಟ್ಟಣಗಳ ಸಂಪರ್ಕ ಕಳಚಿಹೋಗಿತ್ತು.

ಬ್ರಹತ್‌ ಸೇತುವೆ ದುರಸ್ತಿ ಕಾರ್ಯ ಮುಕ್ತಾಯಗೊಂಡಿದ್ದು ನೀರುಣಿಸುವ ಕೆಲಸ ನಡೆದಿದೆ. ಅಕ್ಟೋಬರ್‌ ಮೊದಲ ವಾರದಲ್ಲಿ ಸಂಚಾರಕ್ಕೆ ಮುಕ್ತವಾಗು ತ್ತದೆ. ಸೇತುವೆ ಮೆಲೆ ಪ್ರವಾಹದ ನೀರು ಇರುವಾಗ ಯಾವುದೇ ವಾಹನ ಸವಾರರು ದಾಟುವ ದುಸ್ಸಾಹಸವನ್ನು ಮಾಡದಿರುವಂತೆ  ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್‌ ಪಾಟೀಲ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT