ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ವಿಭಾಷಿ ಹಿಟ್‌ಲಿಸ್ಟ್

Last Updated 4 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

`ಪ್ರಿಯಾಮಣಿ ನನ್ನ ಬಾಯ್‌ಫ್ರೆಂಡ್ ಇದ್ದಂತೆ...~- ಹೀಗೆ ಹೇಳಿ ಮೆಲ್ಲಗೆ ನಕ್ಕರು ನಿರ್ದೇಶಕ, ನಟ ಬಾಲ. ಮಲಯಾಳಂ ಮತ್ತು ತಮಿಳು ಚಿತ್ರಗಳಲ್ಲಿ ನಿರ್ದೇಶಕ ಮತ್ತು ನಟರಾಗಿ ಹೆಸರು ಮಾಡಿರುವ ಬಾಲ ಕನ್ನಡಕ್ಕೂ ಕಾಲಿರಿಸಿದ್ದಾರೆ. ಅವರ `ಹಿಟ್ ಲಿಸ್ಟ್~ ಕನ್ನಡ ಮತ್ತು ಮಲಯಾಳಂ ಎರಡೂ ಭಾಷೆಗಳಲ್ಲಿ ಸಿದ್ಧವಾಗುತ್ತಿದೆ.

ಅವರ ಚಿತ್ರಕ್ಕೆ ಶುಭಹಾರೈಸಲು ನಟ ಸುದೀಪ್ ಮತ್ತು ನಟಿ ಪ್ರಿಯಾಮಣಿ

ಧ್ರುವ ಶರ್ಮಾ

ಆಗಮಿಸಿದ್ದರು. `ಸ್ನೇಹಾಂಜಲಿ~, `ನೀನಂದ್ರೆ ಇಷ್ಟ~ ಮುಂತಾದ ಚಿತ್ರಗಳಲ್ಲಿ ನಟಿಸಿರುವ ಧ್ರುವ ಶರ್ಮಾ ಕೂಡ ಬಾಲ ಜೊತೆಯಲ್ಲಿ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

`ಹಿಟ್‌ಲಿಸ್ಟ್~ ಮೂಲಕ ಅವರು ಮಲಯಾಳಂ ಚಿತ್ರರಂಗಕ್ಕೂ ಪ್ರವೇಶ ಪಡೆದಂತಾಗಿದೆ. ವ್ಯಕ್ತಿಯೊಬ್ಬನ ಮನಸ್ಸಿನಲ್ಲಾಗುವ ಬದಲಾವಣೆಯ ಪರಿಣಾಮವು ಏಳು ಕೊಲೆಗಳಿಗೆ ಪ್ರೇರಣೆ ನೀಡುವುದು `ಹಿಟ್‌ಲಿಸ್ಟ್~ನ ತಿರುಳು. ವಾಕ್ ಮತ್ತು ಶ್ರವಣ ಸಮಸ್ಯೆ ಹೊಂದಿದ್ದರೂ ನಟ ಧ್ರುವ ಉತ್ತರ ಭಾರತದ ನಟರಿಗಿಂತ ಸಲೀಸಾಗಿ ನಟಿಸುತ್ತಾರೆ ಎಂದು ಬಾಲ ಮೆಚ್ಚುಗೆ ವ್ಯಕ್ತಪಡಿಸಿದರು.

ಮಲಯಾಳಂ ತುಂಬಾ ಕಷ್ಟಕರ ಭಾಷೆ ಎನ್ನುವುದು ಸುದೀಪ್ ಅನುಭವದ ಮಾತು. `ಈಗ~ ಚಿತ್ರಕ್ಕೆ ತೆಲುಗು, ತಮಿಳು ಹಾಗೂ ಹಿಂದಿಯಲ್ಲಿ ಸ್ವತಃ ಡಬ್ಬಿಂಗ್ ಮಾಡಿದ್ದ ಸುದೀಪ್‌ಗೆ ಮಲಯಾಳಂನಲ್ಲಿ ಡಬ್ಬಿಂಗ್ ಮಾಡಲು ನಾಲಗೆ ಹೊರಳುತ್ತಿರಲಿಲ್ಲವಂತೆ. ಈ ಚಿತ್ರದ ಪ್ರಧಾನ ಸನ್ನಿವೇಶಕ್ಕೆ ಸುದೀಪ್ ಹಿನ್ನೆಲೆ ದನಿ ನೀಡಿದ್ದಾರೆ.

ಮಲಯಾಳಂನಲ್ಲಿ ಮೋಹನ್‌ಲಾಲ್ ದನಿ ನೀಡಿದ್ದಾರೆ. ಮಲಯಾಳಂ ಚಿತ್ರದಲ್ಲಿ ನಟಿಸಿದ ಮಾತ್ರಕ್ಕೆ ಧ್ರುವ ಶರ್ಮಾರನ್ನು ಸಿಸಿಎಲ್ ಕ್ರಿಕೆಟ್‌ನಲ್ಲಿ ಕೇರಳ ತಂಡಕ್ಕೆ ಬಿಟ್ಟುಕೊಡುವುದಿಲ್ಲ ಎಂದು ಸುದೀಪ್ ಚಟಾಕಿ ಹಾರಿಸಿದರು. ಚಿತ್ರದ ಟ್ರೇಲರ್‌ಗಳನ್ನು ಸುದೀಪ್ ಬಿಡುಗಡೆ ಮಾಡಿದರು.

ಬಾಲ ಜೊತೆಯಲ್ಲಿ ಪ್ರಿಯಾಮಣಿ `ಪುದಿಯಾ ಮುಗಂ~ ಎಂಬ ಯಶಸ್ವಿ ಚಿತ್ರದಲ್ಲಿ ನಟಿಸಿದ್ದರು. ಗೆಳೆತನದ ಸಂಕೇತವಾಗಿ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ಅವರು ಚಿತ್ರಕ್ಕೆ ಶುಭ ಹಾರೈಸಿದರು.

ರೂಬಿ ಸಿನಿಮಾಸ್‌ನ ಡಾ. ಶರ್ಮಾ `ಹಿಟ್‌ಲಿಸ್ಟ್~ಗೆ ಬಂಡವಾಳ ಹೂಡಿದ್ದಾರೆ. ಕಾದಲ್ ಸಂಧ್ಯಾ ಮತ್ತು ಐಶ್ವರ್ಯಾ ದೇವನ್ ಚಿತ್ರದ ನಾಯಕಿಯರು. ಕನ್ನಡದಲ್ಲಿ `ಯಾರೇ ಕೂಗಾಡಲಿ~ ನಿರ್ದೇಶಿಸುತ್ತಿರುವ ತಮಿಳು ನಿರ್ದೇಶಕ ಸಮುದ್ರ ಖಣಿ ಸಹ ನಟಿಸಿದ್ದಾರೆ. ಅಲ್ಫೋನ್ಸ್ ದೇವರಾಜ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಕೇರಳ, ಮಡಿಕೇರಿ ಹಾಗೂ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT