ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ವೇಷ ಮನುಷ್ಯನಿಗೆ ಅಪಾಯಕಾರಿ

Last Updated 18 ಜನವರಿ 2012, 4:30 IST
ಅಕ್ಷರ ಗಾತ್ರ

ಔರಾದ್:  ದ್ವೇಷ ಅಸೂಯೆ ಮನುಷ್ಯನಿಗೆ ಅಪಾಯಕಾರಿ ಎಂದು ಸರ್ಕಲ್ ಇನ್ಸ್‌ಪೆಕ್ಟರ್ ವಿನೋದಕುಮಾರ ಹೇಳಿದರು.

ಲಿಂಗಾಯತ ಯುವ ಸಮಾಜದ ಆಶ್ರಯದಲ್ಲಿ ಇಲ್ಲಿಯ ಉಪ ಕಾರಾಗೃಹದಲ್ಲಿ ಭಾನುವಾರ ಕೈದಿಗಳಿಗಾಗಿ ಹಮ್ಮಿಕೊಳ್ಳಲಾದ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೆಲ ವೇಳೆ ತಿಳಿದು ತಿಳಿಯದೋ ತಪ್ಪುಗಳಾಗುತ್ತವೆ.

ಇಂಥ ಸಮಯದಲ್ಲಿ ಸಂಯಮ ಕಾಪಾಡಬೇಕಾಗುತ್ತದೆ. ದ್ವೇಷ ಅಸೂಯೆಯಿಂದ ಏನೋ ಮಾಡಲು ಹೋಗಿ ಇಲ್ಲದ ಸಮಸ್ಯೆ ಸೃಷ್ಟಿಯಾಗುತ್ತವೆ ಎಂದು ತಿಳಿಸಿದರು.

ಕೈದಿಗಳಾದವರು ಅಪಾರಾಧಿಗಳೆಂದು ಮನಸ್ಸಿನಲ್ಲಿ ಕೊರಗಬಾರದು. ಆಗಿರುವ ತಪ್ಪಿನಿಂದ ಆತ್ಮಾವಲೋಕನ ಮಾಡಿಕೊಂಡರೆ ಮುಂದೆ ಸಮಾಜದಲ್ಲಿ ಅತ್ಯುತ್ತಮ ನಾಗರಿಕನಾಗಿ ಬಾಳಬಹುದಾಗಿದೆ ಎಂದು ತಿಳಿಸಿದರು.

ಅತಿಥಿಯಾಗಿ ಪಾಲ್ಗೊಂಡ ಹಿರಿಯ ಶಿಕ್ಷಕ ಧನರಾಜ ನಿಟ್ಟೂರೆ, ಲಿಂಗಾಯತ ಯುವ ಒಕ್ಕೂಟದ ಯುವಕರು ಅನೇಕ ಸಮಾಜಮುಖಿ ಕಾರ್ಯಕ್ರಮ ನಡೆಸುವ ಮೂಲಕ ಮಾದರಿಯಾಗಿದ್ದಾರೆ. ಇಂಥ ಕಾರ್ಯಕ್ರಮಗಳಿಗೆ ಸಮಾಜ ಬೆನ್ನುತಟ್ಟಿ ಹುರಿದುಂಬಿಸಬೇಕು ಎಂದು ಸಲಹೆ ನೀಡಿದರು. ಲಿಂಗಾಯತ ಯುವ ಸಮಾಜದ ಅಧ್ಯಕ್ಷ ವಿರೇಶ ಅಲ್ಮಾಜೆ ಸ್ವಾಗತಿಸಿದರು. ಶಿವಾಜಿರಾವ ವಂದಿಸಿದರು. ಜಗನ್ನಾಥ ಮೂಲಗೆ ನಿರೂಪಿಸಿದರು. 

ಶರಣಬಸವ ಸಾವಳೆ, ಪ್ರವೀಣ ಬುಟ್ಟೆ, ಬಾಲಾಜಿ ಪಟ್ನೆ, ಮಹೇಶ ನಿಸ್ಪತೆ, ಶಿವಾ ಯಡವೆ, ಆನಂದ, ಮಹೇಶ, ಪಿಂಟು ಫುಲಾರಿ, ಸಂಗಮೇಶ ಉಪಸ್ಥಿತರಿದ್ದರು.

ಸಂಗೀತ: ಇದೇ ವೇಳೆ ಕಲಾವಿದ ಮನೋಹರ ಕಾಡೋದೆ, ಚೆಂದಾರೆಡ್ಡಿ ಬೆಲ್ದಾಳ, ಮಾಣಿಕ ಗುಡುರೆ, ಎಂ.ಜೆ. ನದಾಫ್ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಎಂ. ಆನಂದಕುಮಾರ ಕವನ ವಾಚನ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT