ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧನುಷ್ ಕ್ಷಿಪಣಿ ಪರೀಕ್ಷಾರ್ಥ ಉಡ್ಡಯನ ಯಶಸ್ವಿ

Last Updated 5 ಅಕ್ಟೋಬರ್ 2012, 6:25 IST
ಅಕ್ಷರ ಗಾತ್ರ

ಬಾಲಾಸೋರ್ (ಒಡಿಶಾ) (ಪಿಟಿಐ): ಇಲ್ಲಿನ ಒಡಿಶಾ ಕಡಲ ತೀರದ ಯುದ್ಧನೌಕೆಯೊಂದರಿಂದ ಶುಕ್ರವಾರ ಉಡಾಯಿಸಲಾದ ಕಡಿಮೆ ವ್ಯಾಪ್ತಿಯ ಪೃಥ್ವಿ ಕ್ಷಿಪಣಿಯ ನೌಕಾ ಆವೃತ್ತಿಯಾದ ಧನುಷ್ ಕ್ಷಿಪಣಿಯ ಪರೀಕ್ಷಾರ್ಥ ಉಡ್ಡಯನವು ಯಶಸ್ವಿಯಾಗಿದೆ.
 
`ಒಡಿಶಾ ಕಡಲ ತೀರದ ಯುದ್ದನೌಕೆಯೊಂದರಿಂದ ಬೆಳಿಗ್ಗೆ 11.25ರ ಸುಮಾರಿಗೆ ನಡೆಸಲಾದ ಧನುಷ್ ಕ್ಷಿಪಣಿಯ ಪರೀಕ್ಷಾರ್ಥ ಉಡ್ಡಯನ ಯಶಸ್ವಿಯಾಗಿದೆ~ ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿರುವ ಸಾರ್ವಜನಿಕ ಸಂಪರ್ಕ ನಿರ್ದೇಶನಾಲಯದ ನಿರ್ದೇಶಕ ರವಿ ಕುಮಾರ್ ಗುಪ್ತಾ ತಿಳಿಸಿದರು.

`ಸುಮಾರು 500 ಕೆ.ಜಿ. ಭಾರದ ಅಣ್ವಸ್ತ್ರ ಸಿಡಿತಲೆಗಳನ್ನು ಹೊತ್ತು ಸುಮಾರು 350 ಕಿ.ಮೀ ದೂರ ಕ್ರಮಿಸಬಲ್ಲ ಸ್ವದೇಶಿ ನಿರ್ಮಿತ ಧನುಷ್ ಕ್ಷಿಪಣಿಯ ಉಡಾವಣೆ ಎಲ್ಲ ಉದ್ದೇಶಗಳನ್ನು ಯಶಸ್ವಿಯಾಗಿ ಪೂರೈಸಿದೆ~ ಎಂದು ರವಿ ಕುಮಾರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT