ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಧಾರ್ಮಿಕ ಮೌಲ್ಯಗಳ ಉಳಿವಿಗೆ ಶ್ರಮಿಸಿ'

Last Updated 3 ಏಪ್ರಿಲ್ 2013, 6:29 IST
ಅಕ್ಷರ ಗಾತ್ರ

ಗಜೇಂದ್ರಗಡ: ಆಧುನಿಕ ಅಬ್ಬರಕ್ಕೆ ಸಿಲುಕಿ ತತ್ತರಿಸಿ ಹೋಗಿರುವ ಮನುಷ್ಯ ನೆಮ್ಮದಿ ಬದುಕು ಸಾಗಿಸ ಬೇಕಾದರೆ ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿ ಕೊಳ್ಳಬೇಕು. ಅಂದಾಗ ಮಾತ್ರಮನುಷ್ಯ ಆರೋಗ್ಯ ಯುತ ನೆಮ್ಮದಿಯ ಬದುಕು ಸಾಗಿಸಲು ಸಾಧ್ಯ ಎಂದು ವೀರಶೈವ ಸಮಾಜದ ಉಪಾಧ್ಯಕ್ಷ ಪ್ರಭು ಚವಡಿ ಅಭಿಪ್ರಾಯಪಟ್ಟರು.

ಗಜೇಂದ್ರಗಡ-ಉಣಚಗೇರಿ ವೀರಶೈವ ಸಮಾಜದ ವತಿಯಿಂದ ಆಯೋಜಿಸಲಾಗಿದ್ದ `ರೇಣುಕಾಚಾರ್ಯ ಜಯಂತಿ' ಪ್ರಯುಕ್ತ ಆಯೋಜಿಸಲಾಗಿದ್ದ ರೇಣುಕಾ ಚಾರ್ಯರ ಭಾವಚಿತ್ರ ಮೆರವಣಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಧಾರ್ಮಿಕ ಕ್ಷೇತ್ರದ ಬಗೆಗೆ ಜನತೆಯ ಆಸಕ್ತಿ ಕ್ಷೀಣಿಸುತ್ತಿದೆ. ಇದರಿಂದಾಗಿ ಸಮಾಜದಲ್ಲಿ ಅನೈತಿಕತೆ ಹೆಚ್ಚುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಭಾರತೀಯ ಧಾರ್ಮಿಕ ಮೌಲ್ಯಗಳಿಗೆ ವಿಶ್ವ ಮಾನ್ಯತೆ ಇದೆ. ರಾಷ್ಟ್ರದ ಧಾರ್ಮಿಕ ಕ್ಷೇತ್ರ ಹಾಗೂ ಧಾರ್ಮಿಕ ಮೌಲ್ಯಗಳ ಕುರಿತು ವಿದೇಶಿಗರು ಅಪಾರ ನಂಬಿಕೆ ಹೊಂದಿದ್ದಾರೆ. ಆದರೆ, ಭಾರತೀಯರು ಮಾತ್ರ ಧಾರ್ಮಿಕ ಮೌಲ್ಯ ಗಳನ್ನು ಕಡೆಗಣಿ ಸುತ್ತಿದ್ದಾರೆ. ಇಂಥ ಬೆಳವಣಿಗೆಯಿಂದ ಸ್ವದೇಶಿ ಯರಿಂದಲೇ ಧಾರ್ಮಿಕ ಮೌಲ್ಯಗಳಿಗೆ ಧಕ್ಕೆ ಉಂಟಾಗುತ್ತಿದೆ. ಆದ್ದರಿಂದ ಧಾರ್ಮಿಕ ಮೌಲ್ಯಗಳ ಉಳಿವಿಗೆ ನಾಗರಿಕರು ಶ್ರಮಿಸಬೇಕು ಎಂದು ಕರೆ ನೀಡಿದರು.

ಮನುಷ್ಯ ತನ್ನ ಸ್ವಾರ್ಥ ಸಾಧನೆಗಾಗಿ ಧಾರ್ಮಿಕ ಕ್ಷೇತ್ರದಿಂದ ದೂರ ಸರಿಯುತ್ತಿದ್ದಾನೆ. ಹೀಗಾಗಿ ಮನುಷ್ಯ ಸಂಕುಚಿತ ಮನೋಭಾವದಿಂದ ಜೀವಿಸು ವಂತಾಗಿದೆ. ಆದ್ದರಿಂದ ಧಾರ್ಮಿಕ ವಿಧಿ- ವಿಧಾನಗಳ  ಬಗ್ಗೆ ನಂಬಿಕೆಗಳನ್ನಿಟ್ಟುಕೊಂಡು ಅವು ಗಳನ್ನು ಪೂಜ್ಯ ಮನೋಭಾವದಿಂದ ಗೌರವಿ ಸಬೇಕು.

ಅಂದಾಗ ಮಾತ್ರ ಧಾರ್ಮಿಕ ಕ್ಷೇತ್ರದ ಹಿರಿಮೆ ಉಳಿಯಲು ಸಾಧ್ಯ ಎಂದರು.ನಗರದ ಕಟ್ಟಿಸವೇಶ್ವರ ರಂಗಮಂದಿರದಿಂದ ಆರಂಭಗೊಂಡ ಶ್ರೀ ರೇಣುಕಾಚಾರ್ಯರ ಭಾವಚಿತ್ರ ಮೆರವಣಿಗೆ ಸಕಲ ಮಂಗಳ ವಾದ್ಯಗಳೊಂದಿಗೆ ನಗರದ ಪ್ರಮುಖ ಬೀದಿ-ಬೀದಿಗಳಲ್ಲಿ ಸಂಚರಿಸಿತು.ಸುಮಂಗಲೆಯರು ಆರತಿಗಳನ್ನು ಹಿಡಿದು ಮೆರವಣಿಗೆಯಲ್ಲಿ ಸಾಗಿದ್ದು ವಿಶೇಷವಾಗಿತ್ತು.  ಎಸ್. ಬಿ.ಹಿರೇಮಠ, ಚಂಬಣ್ಣ ಚವಡಿ, ಪುಟ್ಟಣ್ಣ ವಸ್ತ್ರದ, ಅಮರಯ್ಯ ಗೌರಿಮಠ, ವೀರೇಶ ಚನ್ನಯ್ಯನಮಠ, ಕಳಕಯ್ಯ ಸಾಲಿಮಠ, ಕೊಟ್ರೇಶ ಹಿರೇಮಠ  ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT