ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧೂಮಪಾನ ಬಿಡಿಸದ ಇ–ಸಿಗರೇಟ್‌

Last Updated 25 ಮಾರ್ಚ್ 2014, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್‌(ಪಿಟಿಐ): ಎಲೆಕ್ಟ್ರಾನಿಕ್‌ ಸಿಗರೇಟ್‌ ಬಳಸು­ವುದರಿಂದ ಧೂಮ­ಪಾನ ಚಟ­ಬಿಡಬಹುದು ಎಂಬ ಕಲ್ಪನೆ ಸುಳ್ಳು ಎಂದು ಹೊಸ ಅಧ್ಯಯನವೊಂದು ತಿಳಿಸಿದೆ.

ಎಲೆಕ್ಟ್ರಾನಿಕ್‌ ಸಿಗರೇಟ್‌ ಬಳಸುವು­ದರಿಂದ ಧೂಮಪಾನ ಬಿಡಬಹುದು ಎಂದು ಹೇಳಲಾಗಿತ್ತು. ಆದರೆ, ಈ ಕುರಿತು ಸಂಶೋಧನೆ ನಡೆಸಿದಾಗ ಧೂಮಪಾನ ತ್ಯಜಿಸಲು ಇ–ಸಿಗರೇಟ್‌ ಯಾವುದೇ ಮಹತ್ವದ ಪಾತ್ರ ವಹಿಸಿಲ್ಲ. ಇ–ಸಿಗರೇಟ್‌ ಬಳಸುವವರು ಸಿಗರೇಟ್‌ ಸೇವನೆ ತ್ಯಜಿಸಿಯೂ ಇಲ್ಲ ಮತ್ತು ಧೂಮಪಾನಿಗಳ ಸಂಖ್ಯೆ ಕಡಿಮೆ­ಯೂ ಆಗಿಲ್ಲ ಎನ್ನುತ್ತಾರೆ ಸಂಶೋಧಕ ರಾಕೆಲ್‌ ಎ ಗ್ರಾನಾ.

949 ಧೂಮ­ಪಾನಿಗಳಿಗೆ ‘ಇ–ಸಿಗರೇಟ್‌ ಬಳಸುವುದರಿಂದ ಧೂಮ­ಪಾನ ತ್ಯಜಿಸಿದ್ದೀರಾ ಅಥವಾ ಕಡಿಮೆ­ ಮಾಡಿದ್ದೀರಾ’ ಎಂಬ ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ಪ್ರತಿಯಾಗಿ ‘ಇ–ಸಿಗರೇಟನ್ನು ಒಂದು ವರ್ಷದಿಂದ ಬಳಸಿದ ನಂತರವೂ ನಮ್ಮ ಧೂಮಪಾನ ಚಟದಲ್ಲಿ ಯಾವುದೇ ಬದಲಾವಣೆಯಾಗಿಲ್ಲ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT