ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧ್ವನಿಸಿದ ಕಾವೇರಿ ತಾಲ್ಲೂಕು ಹೋರಾಟ

Last Updated 1 ಜನವರಿ 2014, 8:17 IST
ಅಕ್ಷರ ಗಾತ್ರ

ಕುಶಾಲನಗರ: ಕುಶಾಲನಗರವನ್ನು ಕೇಂದ್ರವಾಗಿರಿಸಿಕೊಂಡು ಕಾವೇರಿ ತಾಲ್ಲೂಕು ರಚನೆ ಮಾಡುವಂತೆ ಒತ್ತಾಯಿಸಿ ಹೋರಾಟಗಳು ಆರಂಭವಾಗಿ ಎರಡು ದಶಕಗಳೇ ಪೂರೈಸಿವೆ.

ಸುಂಟಿಕೊಪ್ಪ ಮತ್ತು ಕುಶಾಲನಗರ ಎರಡು ಹೋಬಳಿಗಳನ್ನು ಒಳಗೊಂಡಂತೆ ಕಾವೇರಿ ತಾಲ್ಲೂಕಿಗಾಗಿ ಒತ್ತಾಯಿಸಿ ಕಳೆದೆರಡು ದಶಕಗಳ ಹಿಂದೆ ಆರಂಭಿಸಿರುವ ಹೋರಾಟವು ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಸಾಕಷ್ಟು ಕಾವು ಪಡೆದುಕೊಂಡಿತ್ತು.
ಚುನಾವಣೆಯಲ್ಲಿ ಬಹುಮತ ಪಡೆದು ಅಧಿಕಾರ ಹಿಡಿದರೆ ಆ ಸಂದರ್ಭಕ್ಕೆ ಸರ್ಕಾರದ ಗಮನ ಸೆಳೆಯಲು ಅನುಕೂಲವಾಗುತ್ತದೆ ಎಂಬುದು ದೃಷ್ಟಿಯಿಂದ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಿದ್ದು ಸುಳ್ಳಲ್ಲ.

ಸುಂಟಿಕೊಪ್ಪ ಮತ್ತು ಕುಶಾಲನಗರ ಎರಡು ಹೋಬಳಿಗಳು ಸೇರಿ ಒಟ್ಟು 1.46 ಲಕ್ಷ ಜನಸಂಖ್ಯೆ ಹೊಂದಿದ್ದು ಜನತೆಯ ಅನುಕೂಲಕ್ಕಾಗಿ ಕಾವೇರಿ ತಾಲ್ಲೂಕು ರಚನೆಗೆ ಒತ್ತಾಯಿಸಿ 1992 ರಲ್ಲೇ ಹೋರಾಟ ಆರಂಭವಾಯಿತು. ಅಂದಿನಿಂದ ಇದುವರೆಗೂ ನೂರಾರು ಹೋರಾಟಗಳು ನಡೆದಿದ್ದರೂ ಇದುವರೆಗೆ ಆಡಳಿತ ನಡೆಸಿದ ಯಾವುದೇ ಸರ್ಕಾರಗಳು ಗಮನ ಹರಿಸದೇ ಇರುವುದು ಮಾತ್ರ ವಿಪರ್ಯಾಸ.

ಮತ್ತೊಂದೆಡೆ ಕುಶಾಲನಗರವನ್ನು ಪಟ್ಟಣ ಪಂಚಾಯಿತಿಯಿಂದ ಪುರಸಭೆಯನ್ನಾಗಿ ಮೇಲ್ದರ್ಜೆಗೆ ಏರಿಸುವಂತೆಯೂ ಸಾಕಷ್ಟು ಮನವಿಗಳು ಕಂದಾಯ ಸಚಿವರಿಗೆ ತಲುಪಿ ಹಾಗೇ ಉಳಿದಿವೆ. ಕುಶಾಲನಗರ, ಗುಡ್ಡೆಹೊಸೂರು, ಮುಳ್ಳುಸೋಗೆ ಸೇರಿದಂತೆ ಒಟ್ಟು 38 ಸಾವಿರ ಜನಸಂಖ್ಯೆ ಇದೆ.

ಕಾವೇರಿ ತಾಲ್ಲೂಕು ಹೋರಾಟ ಸಮಿತಿ ಅಧ್ಯಕ್ಷ  ವಿ.ಪಿ. ಶಶಿಧರ್ ಅವರ ನೇತೃತ್ವದಲ್ಲಿ ಕುಶಾಲನಗರ ಹೋಬಳಿಯ ನೆಲ್ಯಹುದಿಕೇರಿ, ಚೆಟ್ಟಳ್ಳಿಗಳನ್ನು ಕಾವೇರಿ ತಾಲ್ಲೂಕು ವ್ಯಾಪ್ತಿಗೆ ಸೇರಿಸಿಕೊಳ್ಳಲು ನಿರ್ಧರಿಸಿ ಆ ವ್ಯಾಪ್ತಿಯ ಜನರ ವಿಶಾ್ವಸದೊಂದಿಗೆ ಹೋರಾಟ ಆರಂಭಿಸಲಾಗಿತ್ತು. ಆದರೆ ಸೋಮವಾರ ಪೇಟೆಗಿಂತ ಮಡಿಕೇರಿಯೇ ತಮಗೆ ಹತ್ತಿರವೆಂಬ ದೃಷ್ಟಿಯಿಂದ ಇಂದು ಮಡಿಕೇರಿ ತಾಲ್ಲೂಕಿಗೆ ತಮ್ಮನ್ನು ಸೇರಿಸುವಂತೆ ಅಲ್ಲಿನ ಜನ ಒತ್ತಾಯಿಸುತ್ತಿದ್ದಾರೆ.

ಕಾವೇರಿ ತಾಲ್ಲೂಕು ರಚನೆಗೆ ಸ್ಥಳೀಯ ರಾಜಕೀಯ ನಾಯಕರೇ ಆಸಕ್ತಿ ತೋರಿಸುತ್ತಿಲ್ಲ ಎಂಬ ಅಂಶ ಗದ್ದೀಗೌಡ್ರು ಮತ್ತು ಹುಂಡೇಗೌಡ್ರು ವರದಿಗಳಲ್ಲಿ ಪ್ರಸ್ತಾಪವಾಗಿರುವುದು ಬೆಳಕಿಗೆ ಬಂದಿದೆ. ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಮಡಿಕೇರಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಪರಿಶೀಲಿಸುವುದಾಗಿ ಹೇಳಿದ್ದು ಬಿಟ್ಟರೆ ಅದನ್ನು ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ.

ಇನ್ನು ಬಿಜೆಪಿ ಸರ್ಕಾರದ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿದ್ದ ಡಿ.ವಿ. ಸದಾನಂದಗೌಡ್ರು ಸಮೀಪದ ಗುಡ್ಡೆಹೊಸೂರಿಗೆ ಖಾಸಗೀ ಕಾರ್ಯಕ್ರಮಕ್ಕೆ ಬಂದಾಗಲೂ ಈ ಕುರಿತು ಮನವಿ ಮಾಡಲಾಗಿದೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ.

ತಹಶೀಲ್ದಾರ್, ಮತ್ತು ಉಪನೋಂದಣಾಧಿಕಾರಿಗಳ ಕಚೇರಿ ಹೊರತ್ತು ಪಡಿಸಿದರೆ ಪೊಲೀಸ್ ಉಪಅಧೀಕ್ಷಕರ ಕಚೇರಿ, ನ್ಯಾಯಾಲಯ, ಉಪಖಜಾನೆ ಹೀಗೆ ಒಂದು ತಾಲ್ಲೂಕು ಕೇಂದ್ರದಲ್ಲಿರಬೇಕಾದ ಇಲ್ಲ ಸೌಲಭ್ಯಗಳು ಇದ್ದರೂ ಕಾವೇರಿ ತಾಲ್ಲೂಕು ರಚನೆಗೆ ಸರ್ಕಾರಗಳು ಮೀನಮೀಷ ಎಣಿಸುತ್ತಿವೆ.

ಒಟ್ಟಾರೆ ಕಳೆದ 21 ವರ್ಷಗಳ ಹಿಂದೆ ಆರಂಭವಾದ ಹೋರಾಟಕ್ಕೆ ಇಂದಲ್ಲಾ ನಾಳೆ ಯಶಸ್ಸು ಸಿಗಬಹುದೆಂಬ ಆಶಯದಲ್ಲೇ ಕಾವೇರಿ ಹೋರಾಟ ಸಮಿತಿ ಕಳೆದ ಒಂದು ವರ್ಷದಲ್ಲಿ ಸಾಕಷ್ಟು ಬಾರಿ ತನ್ನ ಹೋರಾಟವನ್ನು ನಡೆಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT