ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ನಕ್ಸಲರಿಂದ ಮಕ್ಕಳಿಗೆ ಬಾಂಬ್ ಹುದುಗಿಸಿಡುವ ತರಬೇತಿ'

Last Updated 19 ಸೆಪ್ಟೆಂಬರ್ 2013, 11:55 IST
ಅಕ್ಷರ ಗಾತ್ರ

ರಾಂಚಿ (ಐಎಎನ್‌ಎಸ್): ಜಾರ್ಖಂಡ್‌ನಲ್ಲಿ ಮಕ್ಕಳಿಗೆ ನಕ್ಸಲರು  ಬಾಂಬ್‌ಗಳನ್ನು ಅಳವಡಿಸುವ ಬಗ್ಗೆ ತರಬೇತಿ ನೀಡುತ್ತಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ಬಾಂಬ್ ಇಡುವುದನ್ನು ಕಲಿಯುತ್ತಿದ್ದ ವೇಳೆ ಲತೆಹಾರ್ ಜಿಲ್ಲೆಯಲ್ಲಿ 10 ವರ್ಷದ ಪರದೇಶಿ ಲೊಹ್ರಾ ಎಂಬ ಬಾಲಕ ಮಂಗಳವಾರ ಸಾವನ್ನಪ್ಪಿದ ಬೆನ್ನಲ್ಲೆ ಪೊಲೀಸರು ಈ ಹೇಳಿಕೆ ನೀಡಿದ್ದಾರೆ.
  ಬಾಂಬ್ ಇಡುವ ತರಬೇತಿ ನೀಡಲು ನಕ್ಸಲರು ಅಪಹರಿಸಿದ್ದ ಎಂಟು ಮಕ್ಕಳ ಗುಂಪಿನಲ್ಲಿ ಈ ಬಾಲಕನೂ ಇದ್ದ ಎಂದೂ ಪೊಲೀಸರು ತಿಳಿಸಿದ್ದಾರೆ. ಅದೃಷ್ಟವಶಾತ್ ಕೆಲ ಮಕ್ಕಳು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಜಾರ್ಖಂಡ್‌ನಲ್ಲಿ `ಮಕ್ಕಳ ಸೇನೆ' ಹೆಚ್ಚಿಸುವ ಸಂಗತಿ ನಕ್ಸಲರಿಗೆ  ಹೊಸದೇನಲ್ಲ ಎಂದು ನಕ್ಸಲ್ ವಿರೋಧಿ ಕಾರ್ಯಚರಣೆಯಲ್ಲಿ ತೊಡಗಿರುವ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

`ಈ ಮೊದಲು ಪೊಲೀಸರ ಚಲನವಲನಗಳ ಬಗ್ಗೆ ಮಾಹಿತಿ ಪಡೆಯಲು ನಕ್ಸಲರು ಮಕ್ಕಳನ್ನು ಬಳಸುತ್ತಿದ್ದರು. ಇದೀಗ ಅವರು ತಮ್ಮ ತಂತ್ರ ಬದಲಿಸಿದ್ದಾರೆ. ಹಳ್ಳಿಗಳಿಂದ ಮಕ್ಕಳನ್ನು ಅಪಹರಿಸಿ ಅವರಿಗೆ ಬಾಂಬ್  ಹುದುಗಿಸಿಡುವ ತರಬೇತಿ ನೀಡುತ್ತಿದ್ದಾರೆ' ಎಂದು ಅಧಿಕಾರಿ ತಿಳಿಸಿದ್ದಾರೆ.

ಅಲ್ಲದೇ, ನಕ್ಸಲರ ಅಪಹರಣದ ಭಯದಿಂದಾಗಿ ಕೆಲವು ಜಿಲ್ಲೆಗಳಲ್ಲಿ ಮಕ್ಕಳು ಶಾಲೆಗೆ ಹೋಗುವುದನ್ನೇ ನಿಲ್ಲಿಸಿರುವ ಬಗ್ಗೆ ವರದಿಯಾಗಿದೆ ಎಂದೂ ಅವರು ತಿಳಿಸಿದ್ದಾರೆ.

  ಜಾರ್ಖಂಡ್‌ನ 24 ಜಿಲ್ಲೆಗಳ ಪೈಕಿ 18 ಜಿಲ್ಲೆಗಳಲ್ಲಿ ನಕ್ಸಲರು ಕ್ರೀಯಾಶೀಲರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT