ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ಇಂದು: ಅಕ್ಟೋಬರ್ 12, ಬುಧವಾರ

Last Updated 11 ಅಕ್ಟೋಬರ್ 2011, 19:45 IST
ಅಕ್ಷರ ಗಾತ್ರ

ರೇಷ್ಮೆ ಇಲಾಖೆ: ಗಾಯತ್ರಿ ವಿಹಾರ, ಅರಮನೆ ಮೈದಾನ. `ಸಿಲ್ಕ್ ಉತ್ಸವ- 2011~. ಉದ್ಘಾಟನೆ- ಸಚಿವ ಬಿ.ಎನ್.ಬಚ್ಚೇಗೌಡ. ಅತಿಥಿಗಳು- ಸಚಿವ ಸಿ.ಪಿ.ಯೋಗೀಶ್ವರ್, ಶಾಸಕ ಬಿ.ಎನ್.ವಿಜಯಕುಮಾರ್, ನಟಿ ಭಾರತಿ ವಿಷ್ಣುವರ್ಧನ್. ಅಧ್ಯಕ್ಷತೆ- ಸಚಿವ ವರ್ತೂರು ಪ್ರಕಾಶ್. ಬೆಳಿಗ್ಗೆ 11.

ಖನಿಜ ಭವನ: 3ನೇ ಮಹಡಿ, ರೇಸ್‌ಕೋರ್ಸ್ ರಸ್ತೆ. ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಆರ್.ವಿಶ್ವನಾಥ್‌ಗೆ ಅಭಿನಂದನಾ ಸಮಾರಂಭ. ಅತಿಥಿಗಳು- ಸಚಿವರಾದ ವಿ.ಸೋಮಣ್ಣ, ಮುರುಗೇಶ್ ಆರ್.ನಿರಾಣಿ, ರಾಜೂಗೌಡ. ಮಧ್ಯಾಹ್ನ 12.30.

ರೇವಾ ಶಿಕ್ಷಣ ಸಂಸ್ಥೆಗಳು: ಕಟ್ಟಿಗೇನಹಳ್ಳಿ, ಯಲಹಂಕ. ಕೇಂದ್ರ ಗ್ರಂಥಾಲಯ ಮತ್ತು ಸ್ನಾತಕೋತ್ತರ ಪದವಿ ತರಗತಿಗಳ ಉದ್ಘಾಟನಾ ಸಮಾರಂಭ. ಅತಿಥಿ- ಕೇಂದ್ರ ಸಚಿವೆ ಡಾ.ಡಿ.ಪುರಂದೇಶ್ವರಿ. ಅಧ್ಯಕ್ಷತೆ- ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಪಿ.ಶ್ಯಾಮರಾಜು. ಬೆಳಿಗ್ಗೆ 9.

ವಕೀಲರ ಸಂಘ: ವಕೀಲರ ಭವನ, ಸಿಟಿ ಸಿವಿಲ್ ಕೋರ್ಟ್ ಆವರಣ. ವಕೀಲ ಕೆ.ಎನ್. ಕುಮಾರ್ ಅವರ `ಆಧುನಿಕ ಶ್ರೀಮತ್ ಭಗವತ್ ಗೀತಾ~, `ಆಧುನಿಕ ಶ್ರೀ ಸತ್ಯನಾರಾಯಣ ಕಥಾ~, `ಆಧುನಿಕ ಶ್ರೀ ಶ್ರೀ ಶಿವ ಮಹಾಪುರಾಣ~ ಪುಸ್ತಕಗಳ ಲೋಕಾರ್ಪಣೆ. ಅತಿಥಿಗಳು- ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಆರ್.ಕೆ.ನಲ್ಲೂರು ಪ್ರಸಾದ್. ಅಧ್ಯಕ್ಷತೆ- ಸಂಘದ ಅಧ್ಯಕ್ಷ ಕೆ.ಎನ್. ಪುಟ್ಟೇಗೌಡ. ಮಧ್ಯಾಹ್ನ 2.

ಬೆಂಗಳೂರು ವಿಶ್ವವಿದ್ಯಾಲಯ ಮತ್ತು ಕಂದಾಯ ಇಲಾಖೆ: ಸಿವಿಲ್ ಎಂಜಿನಿಯರ್ ವಿಭಾಗ, ಯುವಿಸಿಇ, ಜ್ಞಾನಭಾರತಿ, ಬೆಂಗಳೂರು ವಿಶ್ವವಿದ್ಯಾಲಯ. `ಕಟ್ಟಡಗಳ ನಿರ್ಮಾಣದಲ್ಲಿ ಸಾಮರ್ಥ್ಯ, ವಾಸ್ತುಶಿಲ್ಪ ಮತ್ತು ಭೂಕಂಪ ಅನಾಹುತ ತಡೆಯುವಲ್ಲಿ ಎಂಜಿನಿಯರ್‌ಗಳ ಪಾತ್ರ~ ಕುರಿತ ಕಾರ್ಯಕ್ರಮ. ಅತಿಥಿಗಳು- ಕಂದಾಯ ಇಲಾಖೆ ಕಾರ್ಯದರ್ಶಿ ಕೆ.ಎಸ್.ಪ್ರಭಾಕರ್, ಕುಲಪತಿ ಡಾ.ಎನ್.ಪ್ರಭುದೇವ್, ಯುವಿಸಿಇ ಪ್ರಾಂಶುಪಾಲ ಡಾ.ಕೆ.ಆರ್.ವೇಣುಗೋಪಾಲ್. ಬೆಳಿಗ್ಗೆ 10.30.

ಎಲಿಕಾ ಸ್ಟುಡಿಯೊ: 17ನೇ ಅಡ್ಡರಸ್ತೆ, ಸಂಪಿಗೆ ರಸ್ತೆ, ಮಲ್ಲೇಶ್ವರ. ಸ್ಟುಡಿಯೊ ಉದ್ಘಾಟನೆ- ಪೇಜಾವರ ಮಠದ ವಿಶ್ವೇಶತೀರ್ಥಸ್ವಾಮೀಜಿ. ಸಂಜೆ 7.30.

ಪುಪಾ: ವೆಂಕಟಪ್ಪ ಆರ್ಟ್ ಗ್ಯಾಲರಿ, ಕಸ್ತೂರಬಾ ರಸ್ತೆ. ಕಲಾವಿದರಾದ ಆರ್. ಅಮೃತಾ, ಬ್ರಹ್ಮನಾಥ್ ಎ.ಪಾಟೀಲ್, ಎ.ಸ್ವಾಮಿ, ಚಂದ್ರಕಾಂತ ಅವರ ಚಿತ್ರಕಲಾ ಪ್ರದರ್ಶನ. ಸಂಜೆ 4.30.

ಅಲಯನ್ಸ್ ಫ್ರಾಂಚೈಸ್: ತಿಮ್ಮಯ್ಯರಸ್ತೆ. ಬಾಲನ್ ನಂಬಿಯಾರ್ ವಿದ್ಯಾರ್ಥಿಗಳಿಂದ ಚಿತ್ರಕಲಾ ಪ್ರದರ್ಶನ. ಉದ್ಘಾಟನೆ- ಶಿಲ್ಪಿ ರವಿ ಷಾ. ಸಂಜೆ 6.

ಆರ್.ವಿ.ಶಿಕ್ಷಕರ ಕಾಲೇಜು: ಜಯನಗರ. 44ನೇ ಲೋಹಿಯಾ ಸಂಸ್ಮರಣಾ ದಿನಾಚರಣೆ. ಅತಿಥಿಗಳು- ಖಾದ್ರಿ ಅಚ್ಯುತ, ಎಂ.ಎಸ್.ರಂಗನಾಥ್, ರವೀಂದ್ರ ರೇಷ್ಮೆ. ಅಧ್ಯಕ್ಷತೆ- ಪ್ರಾಂಶುಪಾಲರಾದ ಡಾ.ಎಸ್. ವಿಜಯಲಕ್ಷ್ಮಿ. ಮಧ್ಯಾಹ್ನ 3.30.

ಮಾನಸಿಕ ಚಿಕಿತ್ಸಾ ಮತ್ತು ಸಂಶೋಧನಾ ಕೇಂದ್ರ: ಕಾಮಾಕ್ಯ ಚಿತ್ರಮಂದಿರ ಬಳಿ, 3ನೇ ಹಂತ, ಬನಶಂಕರಿ. ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ. ಸಂಜೆ 5.30.

ರಂಗ ಪ್ರವೇಶ: ರವೀಂದ್ರ ಕಲಾಕ್ಷೇತ್ರ. ಚಾರುಮತಿ ಆರ್.ತಿರುಮಲೆ ಒಡಿಸ್ಸಿ ರಂಗ ಪ್ರವೇಶ. ಅತಿಥಿಗಳು- ಲೇಖಕಿ ಡಾ.ವಿಜಯಾ, ಗೀತ ರಚನೆಕಾರ ಜಯಂತ್ ಕಾಯ್ಕಿಣಿ.    ಸಂಜೆ 6.30.

ರಂಗದರ್ಶಿ
ಮದಕರಿ ನಾಯಕ ಸಾಂಸ್ಕೃತಿಕ ಕೇಂದ್ರ:
ಎ.ವಿ.ವರದಾಚಾರ್ ಸ್ಮಾರಕ ಸಭಾಂಗಣ, ನಟರಾಜ ಚಿತ್ರ ಮಂದಿರ ಹಿಂಭಾಗ, ಶೇಷಾದ್ರಿಪುರ. `ಏಕಲವ್ಯ~ ನಾಟಕ ಪ್ರದರ್ಶನ- ಚಿತ್ರದುರ್ಗದ ಮದಕರಿ ನಾಯಕ ತಂಡದಿಂದ. ಸಂಜೆ 6.

ಧಾರ್ಮಿಕ ಕಾರ್ಯಕ್ರಮ
ರಾಗಿಗುಡ್ಡ ಪ್ರಸನ್ನ ಆಂಜನೇಯಸ್ವಾಮಿ ಭಕ್ತ ಮಂಡಳಿ ಟ್ರಸ್ಟ್: 9ನೇ ಬಡಾವಣೆ, ಜಯನಗರ. `ಮಹಾಭಾರತದಲ್ಲಿ ವಿಧುರನ ನೀತಿ~ ಪ್ರವಚನ- ಪವಮಾನಾಚಾರ್ ಕಲ್ಲಾಪುರ. ಸಂಜೆ 6.

ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ: ಬಸವನಗುಡಿರಸ್ತೆ, ನರಸಿಂಹರಾಜ ಕಾಲೋನಿ. `ಕಾಳಿದಾಸನ ರಘುವಂಶ~ ಕುರಿತು ಉಪನ್ಯಾಸ- ಡಾ.ರಾ.ಗಣೇಶ್. ಸಂಜೆ 6.

ವೇದಾಂತ ಸತ್ಸಂಗ: ಅಧ್ಯಾತ್ಮ ಮಂದಿರ, ವಿಶ್ವೇಶ್ವರಪುರ. `ಅಧ್ಯಾಸ ಭಾಷ್ಯಂ~ ಪ್ರವಚನ- ಕೆ.ಜಿ.ಸುಬ್ರಾಯ ಶರ್ಮ ಅವರಿಂದ.      ಬೆಳಿಗ್ಗೆ 7.45.

ರಾಮಕೃಷ್ಣ ವಿವೇಕಾನಂದ ಸಾಧನಾ ಕೇಂದ್ರ: ವೀರಾಂಜನೇಯಸ್ವಾಮಿ ದೇವಸ್ಥಾನ, ನಾರಾಯಣಪ್ಪ ಉದ್ಯಾನ, ಎಚ್‌ಎನ್‌ಎಸ್‌ರಸ್ತೆ, ವೈಟ್‌ಫೀಲ್ಡ್. `ಶ್ರೀಮದ್ ರಾಮಾಯಣ ಕಥಾಮೃತ~ ಕುರಿತು ಪ್ರವಚನ- ಸಂಜೆ 6.

ವಿಜಯನಗರ ಮಧ್ವಸೇವಾ ಟ್ರಸ್ಟ್: ಗಂಗಾಧರ ಬಡಾವಣೆ, 8ನೇ ಮುಖ್ಯರಸ್ತೆ, ಎಂ.ಸಿ.ಬಡಾವಣೆ, ವಿಜಯನಗರ. `ಭೀಷ್ಮ ಪರ್ವ- ದ್ರೋಣ ಪರ್ವ~ ಕುರಿತು ಪ್ರವಚನ- ಜಯತೀರ್ಥಾಚಾರ್ಯ ಮಳಗಿ. ಸಂಜೆ 6.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT