ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ಇಂದು ಜನವರಿ 11, ಬುಧವಾರ

Last Updated 10 ಜನವರಿ 2012, 19:30 IST
ಅಕ್ಷರ ಗಾತ್ರ

ರಾಜ್ಯ ಮದ್ಯಪಾನ ಸಂಯಮ ಮಂಡಳಿ: ಗಾಂಧಿ ಭವನ, ಕುಮಾರ ಪಾರ್ಕ್ ಪೂರ್ವ, `ಮದ್ಯಪಾನದ ವಿರುದ್ಧ ಧರ್ಮಾಧಿಕಾರಿಗಳ ದುಂಡು ಮೇಜಿನ ಪರಿಷತ್ತು~, ಉದ್ಘಾಟನೆ- ತುಮಕೂರು ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ, ಅಧ್ಯಕ್ಷತೆ- ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, `ಮದ್ಯಪಾನ ಏಕೆ ಬೇಡ~ ಪುಸ್ತಕ ಬಿಡುಗಡೆ-  ಕಾನೂನು ಸಚಿವ ಸುರೇಶ್ ಕುಮಾರ್, ಅತಿಥಿಗಳು- ಸಂಸತ್ ಸದಸ್ಯ ಪಿ.ಸಿ.ಮೋಹನ್, ಬೆಳಿಗ್ಗೆ 10.

ಗೋಷ್ಠಿ-1: ಗುಂಪು ಗೋಷ್ಠಿಗಳು, ಗುಂಪು-1: ಮದ್ಯವರ್ಜನ ಶಿಬಿರಗಳು, ಆಲ್ಕೋಹಾಲಿಕ್ಸ್ ಅನಾನಿಮಸ್ ಮಾದರಿ: ನಿವೃತ್ತ ಪೊಲೀಸ್ ಮಹಾನಿರ್ದೇಶಕ ಡಾ.ಎಸ್.ಟಿ.ರಮೇಶ್, ನಿಮ್ಹಾನ್ಸ್ ಮಾದರಿ: ಮನೋವೈದ್ಯ ಡಾ.ಪ್ರತಿಮಾ ಮೂರ್ತಿ, ಧರ್ಮಸ್ಥಳ ಮಾದರಿ: ಜನಜಾಗೃತಿ ವೇದಿಕೆ ನಿರ್ದೇಶಕ ವಿವೇಕ ವಿನ್ಸೆಂಟ್ ಪಾಯ್ಸ, ಗುಂಪು-2: ಅರಿವು ಮೂಡಿಸುವ ಕಾರ್ಯಕ್ರಮಗಳು.

ಗೋಷ್ಠಿ-2: ವಿಶೇಷ ಉಪನ್ಯಾಸ, ಡಾ.ಪಿ.ವಿ.ಭಂಡಾರಿ, ಮಧ್ಯಾಹ್ನ 3.
ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ, ರಾಜ್ಯ ಮಹಿಳಾ ಉದ್ಯಮಿಗಳ ಸಂಸ್ಥೆ: ಅವೆಕ್ ಸಂಸ್ಥೆ, ಕೆಎಸ್‌ಎಸ್‌ಐಡಿಸಿ ಕೈಗಾರಿಕಾ ವಸಾಹತು, ರಾಜಾಜಿನಗರ, `ಸಂಕ್ರಾಂತಿ ಮೇಳ~ (ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ), ಉದ್ಘಾಟನೆ- ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಸರೋಜಿನಿ ನಾಯ್ಡು, ಅಧ್ಯಕ್ಷತೆ-ಶಾಸಕ ಪ್ರಿಯಕೃಷ್ಣ, ಅತಿಥಿ- ನಗರಸಭಾ ಸದಸ್ಯ ಗಂಗ ಭೈರಯ್ಯ, ಬೆಳಿಗ್ಗೆ 12.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ: ನಯನ ಮಂದಿರ, ಕನ್ನಡ ಭವನ, ಯುವ ಸೌರಭ, ಆರಾಧನಾ ನೃತ್ಯ ಶಾಲೆ ಯಿಂದ ಸಮೂಹ ಭರತನಾಟ್ಯ, ಸಂಜೆ 6.30.

ಎಲೆಕ್ಟ್ರಾನಿಕ್ ಸಿಟಿ ಇಂಡಸ್ಟ್ರೀಸ್ ಅಸೋಸಿಯೇಶನ್: ಎಲೆಕ್ಟ್ರಾನಿಕ್ ಸಿಟಿ, ವೆಸ್ಟ್ ಪಾಸ್, ಹೊಸೂರು ರಸ್ತೆ, `ಎಲ್‌ಸಿಯ ಎಕ್ಸ್‌ಪೊ -2012~ ಉದ್ಘಾಟನೆ, ಅತಿಥಿಗಳು- ನಗರಾಭಿವೃದ್ಧಿ ಹಾಗೂ ಕಾನೂನು ಸಚಿವ ಸುರೇಶ್ ಕುಮಾರ್, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್. ವಿ.ರಂಗನಾಥ್, ಬೆಳಿಗ್ಗೆ 9.

ಅಸೋಸಿಯೇಶನ್ ಆಫ್ ದ ಡೆಫ್: ಎಡಿಎ ರಂಗಮಂದಿರ ಸಭಾಂಗಣ, ರವೀಂದ್ರ ಕಲಾಕ್ಷೇತ್ರದ ಎದುರು, ಸುವರ್ಣ ಮಹೋತ್ಸವ ಸಮಾರಂಭ, ಅತಿಥಿಗಳು-ಕಾರ್ಮಿಕ ಸಚಿವ ಬಿ.ಎನ್.ಬಚ್ಚೇಗೌಡ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಸಿ.ಸಿ.ಪಾಟೀಲ್, ಕೈಗಾರಿಕೋದ್ಯಮ ಸಚಿವ ಮುರುಗೇಶ್ ಆರ್ ನಿರಾಣಿ, ಬೆಳಗ್ಗೆ 10.

ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ: ಪ್ರೊ.ಸತೀಶ್ ಧವನ್ ಸಭಾಂಗಣ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್, ರಾಷ್ಟ್ರಮಟ್ಟದ ವಿಚಾರ ಸಂಕಿರಣ, ವಿಷಯ- `ಲೆವೆಂತ್ ಆ್ಯನುವಲ್ ಮೀಟ್ ಆಫ್ ನ್ಯಾಷನಲ್ ಸ್ಪೆಶಲ್ ಡಾಟಾ ಇನ್‌ಫ್ರಾಸ್ಟ್ರಕ್ಚರ್~, ಅತಿಥಿಗಳು- ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಆನಂದ್ ಆಸ್ನೋಟಿಕರ್, ಬೆಳಿಗ್ಗೆ 9.30.

ಸಾಂಸ್ಕೃತಿಕ ಕಾರ್ಯಕ್ರಮಗಳು...
ಶ್ರೀ ಶಂಕರ ಜಯಂತಿ ಮಂಡಳಿ:
ಸ್ವರೂಪಶರ್ಮಾ ಅವರಿಂದ ಮುಂಡಕೋಪನಿಷತ್ ಕುರಿತ ಪ್ರವಚನ. ಸ್ಥಳ: ಶ್ರೀ ಶಂಕರಕೃಪಾ, ನಂ. 45, ಶ್ರೀ ಶಂಕರಕೃಪಾ ರಸ್ತೆ, 16ನೇ ಅಡ್ಡರಸ್ತೆ, 3ನೇ ಬಡಾವಣೆ, ಜಯನಗರ. ಸಂಜೆ 6.30ರಿಂದ.

ಗೀತಾ ಜ್ಞಾನ ಯಜ್ಞ: ಅಭಯಚೈತನ್ಯ ಅವರಿಂದ  ಶ್ರೀಮದ್ ಭಗವದ್ಗೀತಾ ಭಕ್ತಿಯೋಗ 12ನೇ ಅಧ್ಯಾಯದ ಬಗ್ಗೆ ಪ್ರವಚನ.  ಸ್ಥಳ: ಶ್ರೀ ರಾಮ ಸೇವಾ ಮಂಡಳಿ 10ನೇ ಅಡ್ಡರಸ್ತೆ, ಹೊಂಬೇಗೌಡನಗರ, ವಿಲ್ಸನ್ ಗಾರ್ಡನ್. ಸಂಜೆ 6.30ರಿಂದ.

ತಿರುಮಲ ತಿರುಪತಿ ದೇವಸ್ಥಾನ: ಗೋಷ್ಠಿಗಾಯನ:  ಮಾಲತಿ ಮಾಧವಾಚಾರ್ಯ ಮತ್ತು ನಂದಿನಿ ವಿಠ್ಠಲ್ ಅವರಿಂದ. `ದಾಸರೆಂದರೆ ಪುರಂದರದಾಸರಯ್ಯ~ ಸೀಡಿ ಹಾಗೂ ಪುಸ್ತಕ ಬಿಡುಗಡೆ. ಸ್ಥಳ: ಶ್ರೀ ಸತ್ಯಪ್ರಮೋದ ಕಲ್ಯಾಣ ಮಂಟಪ, ಪಂಪಮಹಾಕವಿ ರೋಡ್, ಬಸವನಗುಡಿ. ಮಧ್ಯಾಹ್ನ 1ರಿಂದ.

ದೇವರಿ ಶ್ರೀ ಗುರು ಸೇವಾ ಸಮಿತಿ: ಬಾಕೃಷ್ಣ ಮತ್ತು ಸಂಗಡಿಗರಿಂದ ಸಂಗೀತ. ಸ್ಥಳ: ಬನಶಂಕರಿ 2ನೇ ಹಂತ, ರಾಘವೇಂದ್ರ ಮಠ. ಸಂಜೆ 6.30.

ಕೆ.ಎಸ್.ಮುದ್ದಪ್ಪ ಸ್ಮಾರಕ ಟ್ರಸ್ಟ್- ಕೃಷ್ಣಾಪುರದೊಡ್ಡಿ ಸಾರ್ವಜನಿಕ ಗ್ರಂಥಾಲಯ ಇಲಾಖೆ: ಓದಿನರಮನೆಯಲ್ಲಿ ತಿಂಗಳ ಒನಪು-69ರಲ್ಲಿ ಜನಪದರು ತಂಡದಿಂದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರರ ಸಾಂಬಶಿವ ಪ್ರಹಸನ. (ನಿ: ರಾಮಕೃಷ್ಣ ಬೆಳಶ್ರ್ತಿೂರ್). ಸ್ಥಳ: ಗ್ರಂಥಾಂಗಣ, ನಗರ ಕೇಂದ್ರ ಗ್ರಂಥಾಲಯ, ಪಶ್ಚಿಮ ವಲಯ, ಹಂಪಿನಗರ. ಸಂಜೆ 6.30.

ಗೋಷ್ಠಿ ಗಾಯನ
ತ್ರಿವೇಣಿ ಕಲಾ ಸಂಘ: ಗಮಕ ಕಾರ್ಯಕ್ರಮದಲ್ಲಿ ಆರ್.ಕೆ.ಪದ್ಮನಾಭ ಮತ್ತು ಶಿಷ್ಯರಿಂದ ಗೋಷ್ಠಿ ಗಾಯನ. ಸ್ಥಳ: ತ್ರಿವೇಣಿ ಕಲಾ ಸಂಘ, ನಂ.98, 1ನೇ ಮಹಡಿ, ರತ್ನವಿಲಾಸ ರಸ್ತೆ, ಬಸವನಗುಡಿ. ಬೆಳಿಗ್ಗೆ 11.30.

ನಾಡಪ್ರಭು ಕೆಂಪೇಗೌಡ ಐತಿಹಾಸಿಕ ನಾಟಕ ಪ್ರದರ್ಶನ. ಸ್ಥಳ: ವಾಣಿಜ್ಯ ತೆರಿಗೆ ಇಲಾಖೆ ಭವನ, 7ನೇ ಮುಖ್ಯ ರಸ್ತೆ, ನಾಗರಭಾವಿ 2ನೇ ಹಂತ.ಸಂಜೆ 6.
ರಂಗ ನಿರಂತರ ತಂಡವು ಸಿಜಿಕೆ ನೆನಪಿಗಾಗಿ ಎರಡು ದಿನಗಳ ನಾಟಕೋತ್ಸವವನ್ನು ಆಯೋಜಿಸಿದೆ.  ಬುಧವಾರ ಸಂಜೆ 6.30ಕ್ಕೆ ಕನ್ನಡ ಪುಸ್ತಕ ಪ್ರಾಧಿಕಾರ ಅಧ್ಯಕ್ಷ ಡಾ.ಸಿದ್ಧಲಿಂಗಯ್ಯ ಅವರು ಉದ್ಘಾಟಿಸಲಿದ್ದಾರೆ.

ಮಂಗಳಜ್ಯೋತಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಅಶೋಕ್ ಕುಮಾರ್ ಅವರು ಬರೆದಿರುವ `ವಿಶೇಷ ಸಾಮರ್ಥ್ಯದ ಮಕ್ಕಳು~ ಕೃತಿ ಲೋಕಾರ್ಪಣೆ. ಡಾ.ಜಿ.ಟಿ. ಸುಭಾಷ್. ಅತಿಥಿಗಳು: ಡಾ.ಡಿ.ಕೆ.ಚೌಟ, ಎಲ್. ಎನ್.ಮುಕುಂದರಾಜ್.

ಇದೇ ತಂಡದಿಂದ ಡಾ.ಅಮರೇಶ ನುಗಡೋಣಿ ಅವರ ಸಣ್ಣ ಕಥೆ ಆಧಾರಿತ `ನೀರು ತಂದವರು~ (ರಂಗರೂಪ: ಶಶಿಧರ್ ಭಾರಿಘಾಟ್. ನಿರ್ದೇಶನ: ಎಂ.ರವಿ).
ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ.

ದಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್: ಎಚ್. ಎ.ಜಯಸಿಂಹ ಅವರಿಂದ ` ಮೈಂಡ್ ಅಂಡ್ ಅಟಿಟ್ಯೂಡ್ ಕುರಿತು ಉಪನ್ಯಾಸ.
 ಸ್ಥಳ: ಬಿ.ಪಿ.ವಾಡಿಯಾ ರಸ್ತೆ, ಬಸವನಗುಡಿ. ಸಂಜೆ 6.15.

ನಾಟಕ ಸ್ಪರ್ಧೆ
ಬಸವನಗುಡಿಯ ನ್ಯಾಷನಲ್ ಹೈಯರ್ ಪ್ರೈಮರಿ ಸ್ಕೂಲ್ ಇಂದಿನಿಂದ 13ರವರೆಗೆ 5,6 ಮತ್ತು 7ನೇ ತರಗತಿಯ ಮಕ್ಕಳಿಗೆ  ಅಂತರ ವರ್ಗೀಯ ನಾಟಕ ಸ್ಪರ್ಧೆಗಳನ್ನು ಏರ್ಪಡಿಸಿದೆ.

ಬುಧವಾರ ಮಧ್ಯಾಹ್ನ 1ಕ್ಕೆ `ವಿಠಲ ಬಂದಾ ಬಂದಾ~ (ರಚನೆ: ಪದ್ದಣ್ಣ, ನಿರ್ದೇಶನ: ಎಸ್.ಕೆ.ಮಾಧವರಾವ್). ನಾಟಕ ಪ್ರದರ್ಶನ.

ಇದೇ 13ರಂದು ಸಂಜೆ 4 ಗಂಟೆಗೆ ನಾಟಕೋತ್ಸವದ ಬಹುಮಾನ ವಿತರಣಾ ಸಮಾರಂಭವನ್ನೂ ಏರ್ಪಡಿಸಲಾಗಿದೆ. ಕಾರ್ಯಕ್ರಮಕ್ಕೆ ಕಲಾ ಶಿಕ್ಷಕರಾದ ಶಶಿಧರ್ ಭಾರಿಘಾಟ್ ಅವರು ಆಗಮಿಸಲಿದ್ದಾರೆ. ಎನ್.ಇ.ಎಸ್ ಕಾರ್ಯದರ್ಶಿ ಡಾ.ಪಿ.ಸದಾನಂದಮಯ್ಯ, ಪ್ರೊ.ಎಸ್.ಎನ್. ನಾಗರಾಜ ರೆಡ್ಡಿ ಮತ್ತು ಶಾಲಾ  ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಆರ್. ರಾಜಕುಮಾರ್ ಉಪಸ್ಥಿತರಿರುವರು. 

ಸ್ಥಳ: ಸದಾಶಿವಯ್ಯ ರಂಗಮಂದಿರ, ನ್ಯಾಷನಲ್ ಹೈಯರ್ ಪ್ರೈಮರಿ ಸ್ಕೂಲ್. ಬಸವನಗುಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT