ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ನನಗೆ ಒಪ್ಪಿಸಿದ ಕೆಲಸ ಮಾಡುವೆ'

ಅವಕಾಶ ಸದುಪಯೋಗಪಡಿಸಿಕೊಂಡ ಪೊಲಾರ್ಡ್
Last Updated 7 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಚೆನ್ನೈ (ಪಿಟಿಐ): ಕೀರನ್ ಪೊಲಾರ್ಡ್ ಅವರಿಗೆ ಮೇಲಿನ ಕ್ರಮಾಂಕದಲ್ಲಿ ಆಡಲು ಅವಕಾಶ ನೀಡದ ಕಾರಣ ಮುಂಬೈ ಇಂಡಿಯನ್ಸ್ ತಂಡ ಹಲವರ ಟೀಕೆಗೆ ಗುರಿಯಾಗಿತ್ತು. ಆರು ಹಾಗೂ ಅದಕ್ಕಿಂತ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಆಗಮಿಸುವ ವೆಸ್ಟ್‌ಇಂಡೀಸ್‌ನ ಈ ಆಟಗಾರನಿಗೆ ನೈಜ ಪ್ರದರ್ಶನ ನೀಡಲು ಸಾಕಷ್ಟು ಎಸೆತಗಳು ಲಭಿಸುತ್ತಿರಲಿಲ್ಲ.

ಆದರೆ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಇಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಅವರಿಗೆ ಹೆಚ್ಚಿನ ಎಸೆತಗಳನ್ನು ಎದುರಿಸುವ ಅವಕಾಶ ಲಭಿಸಿತ್ತು. ಈ ಅವಕಾಶವನ್ನು ಅವರು ಸದುಪಯೋಗಪಡಿಸಿಕೊಂಡಿದ್ದಾರೆ.

ತಂಡದ ಆಡಳಿತ ಅಗ್ರ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಅವಕಾಶ ನೀಡಬೇಕೆಂದು ಭಾವಿಸುತ್ತೀರಾ ಎಂಬ ಪ್ರಶ್ನೆಗೆ ಪೊಲಾರ್ಡ್, `ಕೆಲವೊಮ್ಮೆ ನನಗೂ ಹಾಗನಿಸುತ್ತದೆ. ಆದರೆ, ಇತರ ಆಟಗಾರರ ಅಭಿಪ್ರಾಯದ ಬಗ್ಗೆ ನನಗೆ ಗೊತ್ತಿಲ್ಲ. ತಂಡದ ಸದಸ್ಯನಾಗಿ ನನಗೆ ಒಪ್ಪಿಸಿರುವ ಕೆಲಸ ಮಾಡುತ್ತೇನೆ. ತಂಡದ ಆಡಳಿತವು ಸನ್ನಿವೇಶಕ್ಕೆ ತಕ್ಕಂತೆ ಆಟಗಾರರನ್ನು ಆಯ್ಕೆ ಮಾಡುತ್ತದೆ' ಎಂದರು.

ಈ ಪಂದ್ಯದಲ್ಲಿ ಮುಂಬೈ 9 ರನ್‌ಗಳ ಜಯ ಸಾಧಿಸಿತ್ತು. ಮೊದಲು ಬ್ಯಾಟಿಂಗ್ ಮಾಡಿದ್ದ ಮುಂಬೈ ಒಂಬತ್ತನೇ ಓವರ್ ಆಗುವಷ್ಟರಲ್ಲೇ ನಾಲ್ವರು ಬ್ಯಾಟ್ಸ್‌ಮನ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಕ್ರೀಸ್‌ಗೆ ಬಂದ ಪೊಲಾರ್ಡ್ 38 ಎಸೆತಗಳಲ್ಲಿ 57 ರನ್ ಸಿಡಿಸಿದ್ದರು. ಗೆಲುವಿಗೆ 149 ರನ್‌ಗಳ ಗುರಿ ಬೆನ್ನಟ್ಟಿದ್ದ ಚೆನ್ನೈ ಸೂಪರ್ ಕಿಂಗ್ಸ್, 20 ಓವರ್‌ಗಳಲ್ಲಿ ಒಂಬತ್ತು ವಿಕೆಟ್ ಕಳೆದುಕೊಂಡು 139 ರನ್ ಗಳಿಸಲಷ್ಟೇ ಶಕ್ತವಾಗಿತ್ತು.

ಬ್ಯಾಟಿಂಗ್ ವೈಫಲ್ಯದಿಂದ ಸೋಲು ಎದುರಾಯಿತು: ಬ್ಯಾಟ್ಸ್‌ಮನ್‌ಗಳ ವೈಫಲ್ಯವೇ ತಂಡದ ಸೋಲಿಗೆ ಕಾರಣ ಎಂದು ಚೆನ್ನೈ ಸೂಪರ್ ಕಿಂಗ್ಸ್‌ನ ಕೋಚ್ ಸ್ಟೀಫನ್ ಫ್ಲೆಮಿಂಗ್ ಹೇಳಿದ್ದಾರೆ. `ಬ್ಯಾಟ್ಸ್‌ಮನ್‌ಗಳು ತಮ್ಮ ಅನುಭವಕ್ಕೆ ತಕ್ಕಂತೆ ಆಡಲಿಲ್ಲ. ಪಿಚ್ ಬ್ಯಾಟಿಂಗ್‌ಗೆ ಅನುಕೂಲವಾಗಿತ್ತು. ಆದರೆ ಎಲ್ಲರೂ ಜವಾಬ್ದಾರಿ ಮರೆತರು' ಎಂದರು.

ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೋಲಿನ ಸುಳಿಯಿಂದ ಪಾರು ಮಾಡಲು ನಾಯಕ ದೋನಿ ಸಾಕಷ್ಟು ಹೋರಾಡಿದ್ದರು. ಕೇವಲ 26 ಎಸೆತಗಳಿಂದ 51 ರನ್ ಗಳಿಸಿದರೂ ಅವರ ಶ್ರಮಕ್ಕೆ ಫಲ ಸಿಗಲಿಲ್ಲ.

ಸ್ಕೋರ್ ವಿವರ:
ಮುಂಬೈ ಇಂಡಿಯನ್ಸ್: 20 ಓವರ್‌ಗಳಲ್ಲಿ 6 ವಿಕೆಟ್‌ಗೆ 148

ಚೆನ್ನೈ ಸೂಪರ್ ಕಿಂಗ್ಸ್ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 139
ಮೈಕ್ ಹಸ್ಸಿ ಬಿ ಹರಭಜನ್ ಸಿಂಗ್  20
ಮುರಳಿ ವಿಜಯ್ ಬಿ ಮುನಾಫ್ ಪಟೇಲ್  05
ಸುರೇಶ್ ರೈನಾ ಸಿ ಪಾಂಟಿಂಗ್ ಬಿ ಜಾನ್ಸನ್  10
ಡ್ವೇನ್ ಬ್ರಾವೊ ಸಿ ಕಾರ್ತಿಕ್ ಬಿ ಪ್ರಗ್ಯಾನ್ ಓಜಾ  10
ಎಸ್. ಬದರೀನಾಥ್ ಎಲ್‌ಬಿಡಬ್ಲ್ಯು ಪ್ರಗ್ಯಾನ್ ಓಜಾ  16
ಮಹೇಂದ್ರ ಸಿಂಗ್ ದೋನಿ ಸಿ ಕೀರನ್ ಪೊಲಾರ್ಡ್ ಬಿ ಮುನಾಫ್ ಪಟೇಲ್  51
ರವೀಂದ್ರ ಜಡೇಜಾ ಬಿ ಮುನಾಫ್ ಪಟೇಲ್  16
ಆರ್. ಅಶ್ವಿನ್ ಸಿ ಪೊಲಾರ್ಡ್ ಬಿ ಹರಭಜನ್ ಸಿಂಗ್  02
ಬೆನ್ ಲುಗ್‌ಲಿನ್ ಬಿ ಪೊಲಾರ್ಡ್  00
ಅಂಕಿತ್ ರಜಪೂತ್ ಔಟಾಗದೆ   02
ಡಿರ್ಕ್ ನ್ಯಾನಸ್ ಔಟಾಗದೆ  00
ಇತರೆ: (ಲೆಗ್ ಬೈ-1, ವೈಡ್-6)  07
ವಿಕೆಟ್ ಪತನ: 1-10 (ವಿಜಯ್; 1.6), 2-30 (ರೈನಾ; 4.3), 3-42 (ಹಸ್ಸಿ; 7.4), 4-58 (ಬ್ರಾವೊ; 10.2), 5-66 (ಬದರೀನಾಥ್; 12.1), 6-97 (ಜಡೇಜಾ; 15.2), 7-108 (ಅಶ್ವಿನ್; 16.5), 8-126 (ಲುಗ್‌ಲಿನ್; 17.5), 9-137 (ದೋನಿ; 19.1)
ಬೌಲಿಂಗ್: ಮಿಷೆಲ್ ಜಾನ್ಸನ್ 4-0-22-1, ಮುನಾಫ್ ಪಟೇಲ್ 4-0- 29-3, ಹರಭಜನ್ ಸಿಂಗ್ 4-0-31-2, ಪ್ರಗ್ಯಾನ್ ಓಜಾ 4-0-16-2, ಕೀರನ್ ಪೊಲಾರ್ಡ್ 4-0-16-1,
ಫಲಿತಾಂಶ: ಮುಂಬೈ ಇಂಡಿಯನ್ಸ್‌ಗೆ 9 ರನ್ ಗೆಲುವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT