ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವೆಂಬರ್‌ನಿಂದ ಮಕ್ಕಳಿಗೆ ಉಚಿತ ಔಷಧಿ

Last Updated 6 ಅಕ್ಟೋಬರ್ 2012, 10:25 IST
ಅಕ್ಷರ ಗಾತ್ರ

ನವಜಾತ ಶಿಶುಗಳಲ್ಲಿ ಹಿಬ್ ರೋಗ ಹರಡುವಿಕೆ
ತುಮಕೂರು
: ನವಜಾತ ಶಿಶುಗಳು ಮತ್ತು ಮಕ್ಕಳನ್ನು ಕಾಡುತ್ತಿರುವ ಹಿಬ್ ರೋಗಕ್ಕೆ ಪೆಂಟಾವಲೆಂಟ್ ವ್ಯಾಕ್ಸಿನ್ ಎಂಬ ಔಷಧಿಯನ್ನು ಆರೋಗ್ಯ ಇಲಾಖೆಯಿಂದ ಉಚಿತವಾಗಿ ವಿತರಣೆ ಮಾಡಲಾಗುವುದು ಎಂದು ಜಿಲ್ಲಾ ಲಸಿಕಾ ಅಧಿಕಾರಿ ಮತ್ತು ಮಕ್ಕಳ ತಜ್ಞೆ ಡಾ.ರಜನಿ ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಗರದಲ್ಲಿ ಶುಕ್ರವಾರ ಏರ್ಪಡಿಸಿದ್ದ ಪೆಂಟಾವಲೆಂಟ್ ವ್ಯಾಕ್ಸಿನ್ ಕುರಿತ ಕಾರ್ಯಾಗಾರ ಮತ್ತು ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಔಷಧಿಗೆ ಖಾಸಗಿ ಅಂಗಡಿಗಳಲ್ಲಿ ರೂ. 500 ಬೆಲೆ ಆಗುತ್ತದೆ. ಆದರೆ ಬಡವರಿಗೆ ಔಷಧಿ ಕೊಳ್ಳುವ ಶಕ್ತಿ ಇಲ್ಲದ ಕಾರಣಕ್ಕೆ ಉಚಿತವಾಗಿ ನೀಡಲು ತೀರ್ಮಾನ ಮಾಡಲಾಗಿದೆ ಎಂದು ಹೇಳಿದರು.

ಹಿಬ್ ರೋಗ ಹಿಮೊಫಿಲಿಸ್ ಇನ್‌ಫ್ಲೂಯೆಂಜಾ ಬಿ ರೋಗಾಣುವಿನಿಂದ ಬರುತ್ತದೆ. ನವಜಾತ ಶಿಶುವಿನಿಂದ 2 ವರ್ಷದ ಒಳಗಿನ ಮಕ್ಕಳಿಗೆ ಹೆಚ್ಚಾಗಿ ಕಾಡುತ್ತದೆ. ರೋಗವು ನ್ಯೂಮೋನಿಯಾ, ತೀವ್ರ ಸೋಂಕು, ಮೆದುಳು ಜ್ವರ ಮುಂತಾದ ವಿಧದಲ್ಲಿ ಕಾಣಿಸಿಕೊಳ್ಳುತ್ತದೆ. ರೋಗದಿಂದ 5 ವರ್ಷದ ಒಳಗಿನ ಶೇ 4ರಷ್ಟು ಮಕ್ಕಳು ಸಾವಿಗೀಡಾಗುತ್ತಿದ್ದಾರೆ.
 
ಈ ಬಗ್ಗೆ ಪೋಷಕರು ಮುಂಜಾಗ್ರತೆ ವಹಿಸಬೇಕು ಎಂದು ಅವರು ಸಲಹೆ ನೀಡಿದರು.
ನವಜಾತ ಶಿಶುಗಳು ಮತ್ತು ಮಕ್ಕಳ ಮೂಗು ಮತ್ತು ಬಾಯಿಯಲ್ಲಿ ರೋಗಾಣುಗಳು ಇರುತ್ತವೆ. ಮಕ್ಕಳ ಜೊಲ್ಲು ರಸದ ಮೂಲಕ ಮತ್ತು ಆಟಿಕೆಗಳನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ರೋಗ ಹರಡುತ್ತದೆ. ಇದಕ್ಕಾಗಿ ಪರಿಣಾಮಕಾರಿ ಚುಚ್ಚುಮದ್ದನ್ನು ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.


ಜಿಲ್ಲೆಯಲ್ಲಿ ಇದೇ ನವೆಂಬರ್ 1ರಿಂದ ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಪ್ರಾಥಮಿಕ ಹಂತದಲ್ಲೆಯೇ ಒಂದೂವರೆ ತಿಂಗಳ ಮಗುವಿಗೆ ಸಹ ಚುಚ್ಚುಮದ್ದು ನೀಡಲಾಗುವುದು. ನಂತರ ಎರಡೂವರೆ ತಿಂಗಳು, ಮೂರೂವರೆ ತಿಂಗಳಿಗೆ 3 ಹಂತದಲ್ಲಿ ವ್ಯಾಕ್ಸಿನ್ ನೀಡಲಾಗುವುದು ಎಂದು ವಿವರಿಸಿದರು.

ಈ ಬಗ್ಗೆ ಅರಿವು ಮೂಡಿಸುವ ದೃಷ್ಟಿಯಿಂದ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರಿಗೆ ಮಾಹಿತಿ ಮತ್ತು ತರಬೇತಿ ನೀಡಲಾಗುತ್ತಿದೆ. ಮಕ್ಕಳನ್ನು ಕಾಪಾಡುವ ದೃಷ್ಟಿಯಿಂದ ಎಲ್ಲ ತಾಯಂದಿರು ಮತ್ತು ಪೋಷಕರು ಈ ನಿಟ್ಟಿನಲ್ಲಿ ಸಮೀಪದ ಆಸ್ಪತ್ರೆಯಿಂದ ಮಾಹಿತಿ ಪಡೆದು ಮುಂಜಾಗ್ರತೆ ವಹಿಸಬೇಕೆಂದು ಅವರು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಮಾಧವರಾವ್ ಪಾಟೀಲ್, ಎಸ್‌ಎಂಒ ಡಾ.ನಾಗರಾಜು, ಡಾ.ರಾಜು ಮುಂತಾದವರು ಭಾಗವಹಿಸಿದ್ದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT