ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಟ್ಯವೇದಂ ನೃತ್ಯಾರ್ಪಣಂ

Last Updated 21 ಮೇ 2012, 19:30 IST
ಅಕ್ಷರ ಗಾತ್ರ

ಕೂಚಿಪುಡಿ ನೃತ್ಯ ಕಲಾವಿದೆ ಮತ್ತು ಉದ್ಯಮಿ ದೀಪಾ ಶಶಿಧರನ್ ತಮ್ಮ ನೃತ್ಯಗುರು ಮಂಜು ಭಾರ್ಗವಿ ಅವರ ಗೌರವಾರ್ಥ ಇತ್ತೀಚೆಗೆ ಆಯೋಜಿಸಿದ್ದ ನಾಟ್ಯವೇದಂ ವಾರ್ಷಿಕ ನೃತ್ಯೋತ್ಸವ ಅಪರೂಪದ ಗಂಧರ್ವ ಲೋಕವನ್ನು ಸೃಷ್ಟಿಸಿತು.
 
ಶಾಸ್ತ್ರೀಯ ಮತ್ತು ಸಮಕಾಲೀನ ನೃತ್ಯ ಮಾದರಿಗಳ ಕಲಾವಿದರು ನೃತ್ಯ ಪ್ರದರ್ಶನಗಳ ಮೂಲಕ ನೃತ್ಯದ ಸಂಭ್ರಮವನ್ನು ಇಮ್ಮಡಿಗೊಳಿಸಿತು.

ದೀಪಾ ಶಶಿಧರನ್ ಅವರ ನೃತ್ಯ ಗುರು ಮಂಜು ಭಾರ್ಗವಿ ಅವರ ಗೌರವಾರ್ಥ ಚೌಡಯ್ಯ ಸ್ಮಾರಕ ಭವನದಲ್ಲಿ ನಾಟ್ಯವೇದಂ ನೃತ್ಯೋತ್ಸವ ಆಯೋಜಿಸಲಾಗಿತ್ತು. ಈ ಪ್ರದರ್ಶನದಲ್ಲಿ ಖ್ಯಾತ ಕಲಾವಿದರು ಶಾಸ್ತ್ರೀಯ ಮತ್ತು ಸಮಕಾಲೀನ ನೃತ್ಯ ಮಾದರಿಗಳನ್ನು ಪ್ರದರ್ಶನ ನೀಡಿದರು.

ನಾಟ್ಯವೇದಂ ವಾರ್ಷಿಕ ನೃತ್ಯೋತ್ಸವ ಕರ್ಮ ಕ್ರಿಯೇಟರ್ಸ್‌ ಸಂಸ್ಥಾಪಕರಾದ ದೀಪಾ ಶಶಿಧರನ್ ಅವರ ಕಲ್ಪನೆಯ ಕೂಸಾಗಿತ್ತು. ಇದು ಮಂಜು ಭಾರ್ಗವಿ ಅವರ ನೃತ್ಯಶಾಲೆಯ ಸಹಯೋಗದಿಂದ ನೆರವೇರಿತು. ದೀಪಾ ಕಳೆದ ಎರಡು ದಶಕಗಳಿಂದ ಕೂಚಿಪುಡಿ ನೃತ್ಯ ಕಲಾವಿದರಾಗಿದ್ದು, ಮಂಜು ಭಾರ್ಗವಿ ಅವರ ಹಿರಿಯ ಶಿಷ್ಯೆಯಾಗಿದ್ದಾರೆ.

`ಇದು ನನಗೆ ಬಹಳ ಹೆಮ್ಮೆಯ ಕ್ಷಣವಾಗಿದ್ದು, ನನ್ನ ಕನಸು ನನಸಾಗಿದೆ. 15 ವರ್ಷಗಳ ಹಿಂದೆ ನಾನು ಅವರ ಮೊದಲ ಶಿಷ್ಯೆಯಾಗಿ ಕೂಚಿಪುಡಿ ರಂಗಪ್ರವೇಶ ಮಾಡಿದೆ. ಇಂದು ನನ್ನ ನೃತ್ಯಗುರು ಮಂಜು ಭಾರ್ಗವಿ ಅವರನ್ನು ಗೌರವಿಸುವ ಅವಕಾಶ ಸಿಕ್ಕಿದೆ.
 
ಈ ಕಾರ್ಯಕ್ರಮದಲ್ಲಿ ಅತ್ಯುತ್ತಮ ನೃತ್ಯ ಕಲಾವಿದರನ್ನು ಸೇರಿಸಿ ಗುರು ಸಮರ್ಪಣಾ ನಡೆಸಿದ್ದೇನೆ. ಇಂತಹ ಅವಕಾಶ ಎಲ್ಲರಿಗೂ ಸಿಗುವುದಿಲ್ಲ~ ಎಂದು ದೀಪಾ ಶಶಿಧರನ್ ಹೇಳಿದರು.

ರಮಾ ವೈದ್ಯನಾಥನ್ ಅವರು ನೀಡಿದ ಭರತನಾಟ್ಯ ಪ್ರದರ್ಶನ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿತು. ನಂತರ ನಡೆದ ಮಂಜು ಭಾರ್ಗವಿ ಅವರ ಕೂಚಿಪುಡಿ ನೃತ್ಯ ಕಾರ್ಯಕ್ರಮ ಎಲ್ಲರನ್ನೂ ಮನಸೂರೆಗೊಂಡಿತು.

ಕಾರ್ಯಕ್ರಮದ ಮೊದಲ ದಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಾಜಿ ಸಚಿವೆ ರಾಣಿ ಸತೀಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಯುಕ್ತ ಡಾ.ಮನು ಬಳಿಗಾರ್, ನಾಟ್ಯ ಲಕ್ಷಣ ಅಕಾಡೆಮಿ ನಿರ್ದೇಶಕರಾದ ಉಷಾ ವೆಂಕಟೇಶ್ವರನ್ ಅತಿಥಿಗಳಾಗಿ ಪಾಲ್ಗೊಂಡಿದ್ದರು.
 
ಎರಡನೇ ದಿನ ತೆನ್ವಿಕ್‌ನ ಉಪಾಧ್ಯಕ್ಷ ಶ್ರಿ ಹರಿ ಅಯ್ಯರ್, ಅಂತರರಾಷ್ಟ್ರೀಯ ನೃತ್ಯಪಟು ರಮಾ ವೈದ್ಯನಾಥನ್, ದೂರದರ್ಶನ ಕೇಂದ್ರದ ಹಿರಿಯ ಉಪನಿರ್ದೇಶಕ ಡಾ.ಮಹೇಶ್ ಜೋಷಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT