ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಯಕತ್ವ ತ್ಯಜಿಸಿದ ಜಾಫರ್

Last Updated 2 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ವಾಸೀಮ್ ಜಾಫರ್ ಮುಂಬೈ ರಣಜಿ ಕ್ರಿಕೆಟ್ ತಂಡದ ನಾಯಕ ಸ್ಥಾನ ತ್ಯಜಿಸಿದ್ದಾರೆ. ಆದರೆ ಆಟಗಾರನಾಗಿ ಆಯ್ಕೆಗೆ ಲಭ್ಯವಿರುವುದಾಗಿ ತಿಳಿಸಿದ್ದಾರೆ.

ನಾಲ್ಕು ವರ್ಷಗಳಿಂದ ಅವರು ಈ ಹುದ್ದೆಯಲ್ಲಿದ್ದರು. ಕಳೆದ ಎರಡು ಋತುಗಳಲ್ಲಿ ಮುಂಬೈ ತಂಡ ರಣಜಿ ಟ್ರೋಫಿ ಗೆಲ್ಲುವಲ್ಲಿ ವಿಫಲವಾಗಿತ್ತು. ಈ ಕಾರಣ ಒತ್ತಡಕ್ಕೆ ಒಳಗಾಗಿದ್ದ ಜಾಫರ್ ನಾಯಕ ಸ್ಥಾನದಿಂದ ಕೆಳಗಿಳಿದಿದ್ದಾರೆ.

`ಕಳೆದ ನಾಲ್ಕು ವರ್ಷಗಳಿಂದ ಮುಂಬೈ ತಂಡದ ನಾಯಕರಾಗಿದ್ದ ಜಾಫರ್ ಹುದ್ದೆಯಿಂದ ಕೆಳಗಿಳಿದಿದ್ದಾರೆ. 2008-09 ಮತ್ತು 2009-10 ರಲ್ಲಿ ಇವರ ನಾಯಕತ್ವದಲ್ಲಿ ಮುಂಬೈ ರಣಜಿ ಟ್ರೋಫಿ ಜಯಿಸಿತ್ತು~ ಎಂದು ಮುಂಬೈ ಕ್ರಿಕೆಟ್ ಸಂಸ್ಥೆ ಜಂಟಿ ಕಾರ್ಯದರ್ಶಿ ನಿತಿನ್ ದಲಾಲ್ ತಿಳಿಸಿದರು.

`ಒಬ್ಬ ಆಟಗಾರನಾಗಿ ಅವರು ಆಯ್ಕೆಗೆ ಲಭ್ಯರಿದ್ದಾರೆ. ಆಯ್ಕೆ ಸಮಿತಿ ಸದ್ಯದಲ್ಲೇ ಹೊಸ ನಾಯಕನ ಹೆಸರನ್ನು ಪ್ರಕಟಿಸಲಿದೆ~ ಎಂದು ಅವರು ಹೇಳಿದರು. `ಜಾಫರ್ ಬ್ಯಾಟಿಂಗ್ ಮೇಲೆ ಹೆಚ್ಚಿನ ಗಮನ ಹರಿಸಲು ನಿರ್ಧರಿಸಿದ್ದಾರೆ. ನಾಯಕ ಸ್ಥಾನ ತೊರೆಯಲು ಇದು ಕಾರಣ~ ಎಂಬುದು ಮಂಡಳಿಯ ಅಧಿಕಾರಿಯೊಬ್ಬರ ಹೇಳಿಕೆ.

ಮುಂಬೈ ಈ ಬಾರಿ ರಣಜಿ ಸೆಮಿಫೈನಲ್‌ನಲ್ಲಿ ಸೋಲು ಅನುಭವಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT