ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆ ಬ್ರಯಾನ್ ರಾಕ್

Last Updated 11 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಎವರಿಥಿಂಗ್ ಐ ಡು ಐ ಡು ಇಟ್ ಫಾರ್ ಯು..., ಡು ಐ ಹ್ಯಾವ್ ಟು ಸೆ ವರ್ಡ್ಸ್..? ಬೆಂಗಳೂರಿನ ಪಾಪ್/ ರಾಕ್ ಪ್ರೇಮಿಗಳ ಮನ ಹುಚ್ಚೆದ್ದು ಕುಣಿಯುತ್ತಿದೆ. ಭಾನುವಾರದ ಆ ಸಂಜೆಗಾಗಿ ಕಾತುರದಿಂದ ಕಾಯುತ್ತಿದೆ. ವಿಶ್ವವಿಖ್ಯಾತ ರಾಕ್ ಗಾಯಕ ಬ್ರಿಯಾನ್ ಆಡಮ್ಸ್ ಐದು ವರುಷಗಳ ನಂತರ ನಗರಕ್ಕೆ ಬರುತ್ತಿದ್ದಾರೆ.

ಕೆನಡಾ ಮೂಲದ ಬ್ರಿಯಾನ್ ಜೀವನ್ಮುಖಿ. ಸಂಗೀತದ ಜತೆ ಸಾಹಿತ್ಯಕ್ಕೂ ಹೆಸರಾದವರು. ಅಬ್ಬರದ ಜಾಸ್, ರಾಕ್ ವಾದ್ಯಗಳ ನಡುವೆಯೂ ಅವರ ಸಂಗೀತದಲ್ಲಿ ಯುವಪ್ರೇಮಿಗಳ ಹೃದಯ ರಾಗದ ಹೊನಲು. ಬತ್ತದ ಉತ್ಸಾಹವೇ 51 ವರ್ಷದ ಈ  ಗಾಯಕನ ಬಂಡವಾಳ. ‘18 ಟಿಲ್ ಐ ಡೈ’ ಎಂಬ ಹಾಡು ಬದುಕಿನ ಎಲ್ಲ ಮುಖಗಳ ಕುರಿತು ಅವರ ಉತ್ಕಟತೆ ಎಂಥದ್ದು ಎಂಬುದನ್ನು ಹೇಳುತ್ತದೆ. ಬ್ರಯಾನ್ ಶೋಗಾಗಿ ಕಾಲೇಜು ಯುವಕರಷ್ಟೇ ಕಾಯುತ್ತಿಲ್ಲ. ಅವರ ರಾಕ್ ಮ್ಯೂಸಿಕ್ ಕಿವಿಯಲ್ಲಿ ತುಂಬಿಕೊಂಡೇ ಬೆಳೆದ ಮಧ್ಯವಯಸ್ಕರು ಈ ಸಂಜೆಗಾಗಿ ಕಾಯುತ್ತಿದ್ದಾರೆ.

ಆಸ್ಕರ್, ಗೋಲ್ಡನ್ ಗ್ಲೋಬ್ ಪ್ರಶಸ್ತಿಗಾಗಿ ಹಲವು ಸಲ ನಾಮಕರಣಗೊಂಡಿರುವ ಬ್ರಯಾನ್ ಆಡಮ್ಸ್, 15 ಸಲ ಗ್ರಾಮಿ ಪ್ರಶಸ್ತಿಗೆ ನಾಮಕರಣಗೊಂಡಿರುವ ಖ್ಯಾತಿ ಹೊಂದಿದ್ದಾರೆ. ಜಗತ್ತಿನಾದ್ಯಂತ ಅವರ ಏಳು ಕೋಟಿ ಸಂಗೀತ ಅಲ್ಬಂಗಳು ಮಾರಾಟವಾಗಿವೆ. ‘ನೆಟ್‌ಸರ್ಫ್ ಎಂಟರ್‌ಟೈನ್‌ಮೆಂಟ್’ ಆಯೋಜಿಸಿದ ಆಡಮ್ಸ್ ಶೋಗಾಗಿ ಟಿಕೆಟ್ ಬೆಲೆ ರೂ. 3,500 ಮತ್ತು ರೂ. 2,000. ಲ್ಯಾಂಡ್‌ಮಾರ್ಕ್ ಸ್ಟೋರ್ಸ್‌, ಪ್ಲಾನೆಟ್ ಎಂ, ಭಾರತ್ ಪೆಟ್ರೋಲಿಯಂ, ಫರ್ಟಾಡೋಸ್ ಮ್ಯೂಸಿಕ್ ಸ್ಟೋರ್‌ಗಳಲ್ಲಿ ಟಿಕೆಟ್ ಲಭ್ಯ. ಆನ್‌ಲೈನ್‌ಬುಕಿಂಗ್‌ಗೆ  entertainment.netsurf.co.in ಮತ್ತು ಅಂಗವಿಕಲ ವ್ಯಕ್ತಿಗಳಿಗಾಗಿ ವಿಶೇಷ ವ್ಯವಸ್ಥೆ ಇದ್ದು ವೀಲ್‌ಚೇರ್ ಕೊಂಡೊಯ್ಯಲು ಅವಕಾಶವಿದೆ. ಸ್ಥಳ: ಗಾಯತ್ರಿ ವಿಹಾರ, ಅರಮನೆ ಮೈದಾನ., ಬಳ್ಳಾರಿ ರಸ್ತೆ. ಸಂಜೆ 5.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT