ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆಯಿಂದ ದುರಸ್ತಿ: ಹಲವು ರೈಲು ರದ್ದು

Last Updated 13 ಸೆಪ್ಟೆಂಬರ್ 2011, 17:45 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಮೈಸೂರು ರೈಲು ನಿಲ್ದಾಣದ ವ್ಯಾಪ್ತಿಯಲ್ಲಿ ದುರಸ್ತಿ ಕಾರ್ಯದ  ಕಾರಣ ಇದೇ 15ರಿಂದ 18ರವರೆಗೆ ರೈಲುಗಳ ಸಂಚಾರವನ್ನು ಪೂರ್ಣ ಇಲ್ಲವೆ ಭಾಗಶಃ ರದ್ದುಪಡಿಸಲು ನೈರುತ್ಯ ರೈಲ್ವೆ ವಲಯ ತೀರ್ಮಾನಿಸಿದೆ.

ಮೈಸೂರು-ಚಾಮರಾಜನಗರ ಪ್ಯಾಸೆಂಜರ್ (56210) ರೈಲು ಸಂಚಾರವನ್ನು 15ರಿಂದ 18ರವರೆಗೆ ಸಂಪೂರ್ಣ ರದ್ದುಗೊಳಿಸಲಾಗಿದೆ. ಬೆಂಗಳೂರು-ಮೈಸೂರು-ಬೆಂಗಳೂರು ಪ್ಯಾಸೆಂಜರ್ ರೈಲು (ನಂ. 56232/ 56237) ನಾಗನಹಳ್ಳಿವರೆಗೆ ಮಾತ್ರ ಸಂಚರಿಸುತ್ತದೆ.  ನಾಗನಹಳ್ಳಿಯಿಂದ ಮೈಸೂರು ವರೆಗಿನ ಇದರ ಸಂಚಾರವನ್ನು ಈ ನಾಲ್ಕು ದಿನಗಳ ಅವಧಿಯಲ್ಲಿ ತಡೆಹಿಡಿಯಲಾಗಿದೆ.

ಬೆಂಗಳೂರು-ಮೈಸೂರು-ಯಶವಂತಪುರ (ನಂ. 16558/ 16559) ಎಕ್ಸ್‌ಪ್ರೆಸ್ ರೈಲು ಈ ನಾಲ್ಕು ದಿನಗಳ ಅವಧಿಯಲ್ಲಿ ಪಾಂಡವಪುರದವರೆಗೆ ಮಾತ್ರ ಸಂಚರಿಸಲಿದೆ. 
 
ಯಶವಂತಪುರ-ಮೈಸೂರು -ಬೆಂಗಳೂರು (ನಂ. 16560/ 16557) ಎಕ್ಸ್‌ಪ್ರೆಸ್ ರೈಲು ನಾಗನಹಳ್ಳಿವರೆಗೆ ಓಡಲಿದೆ.

ಅರಸೀಕೆರೆ -ಮೈಸೂರು-ಶಿವಮೊಗ್ಗ ಟೌನ್ ಪ್ಯಾಸೆಂಜರ್ (56267/56270) ಮೈಸೂರು ಬದಲು ಬೆಳಗೊಳದಿಂದ ಹೊರಡಲಿದೆ. ಶಿವಮೊಗ್ಗ ಟೌನ್-ಮೈಸೂರು-ಅರಸೀಕೆರೆ ಪ್ಯಾಸೆಂಜರ್ (ನಂ. 56269/ 56268) ಬೆಳಗೊಳದವರೆಗೆ ಮಾತ್ರ ಸಂಚರಿಸಲಿದೆ. ಚಾಮರಾಜನಗರ-ತಿರುಪತಿ ಪ್ಯಾಸೆಂಜರ್ ರೈಲು (ನಂ. 56213) ಚಾಮರಾಜನಗರ ಹಾಗೂ ಮೈಸೂರು ನಿಲ್ದಾಣಗಳ ಮಧ್ಯೆ ಸಂಚರಿಸುವುದಿಲ್ಲ.

ಚಾಮರಾಜನಗರ-ಮೈಸೂರು ಪ್ಯಾಸೆಂಜರ್ (ನಂ. 56203), ಮೈಸೂರು-ನಂಜನಗೂಡು ಟೌನ್ ಪ್ಯಾಸೆಂಜರ್ (ನಂ. 06215) ಮತ್ತು ಚಾಮರಾಜನಗರ-ಮೈಸೂರು ಪ್ಯಾಸೆಂಜರ್ (ನಂ. 56209) ರೈಲುಗಳು ಅಶೋಕಪುರ ನಿಲ್ದಾಣದವರೆಗೆ ಮಾತ್ರ ಸಂಚರಿಸಲಿವೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT