ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರಶನ:ರಾಮಲೀಲಾ ಸಜ್ಜು

Last Updated 2 ಜೂನ್ 2011, 19:55 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಭ್ರಷ್ಟಾಚಾರದ ವಿರುದ್ಧ ಶನಿವಾರದಿಂದ ಆಮರಣಾಂತ ಉಪವಾಸ ಕೈಗೊಳ್ಳಲು ಉದ್ದೇಶಿಸಿರುವ ಯೋಗ ಗುರು ಬಾಬಾ ರಾಮದೇವ್ ಅವರ ಲಕ್ಷಾಂತರ ಮಂದಿ ಬೆಂಬಲಿಗರಿ ಗಾಗಿ ಇಲ್ಲಿನ ರಾಮಲೀಲಾ ಮೈದಾನದಲ್ಲಿ 2.5 ಲಕ್ಷ ಚದರ ಅಡಿಯ ಬೃಹತ್  ಪೆಂಡಾಲ್ ನಿರ್ಮಿಸಲಾಗಿದೆ.

 ಒಂದು ತಿಂಗಳ ಯೋಗ ಶಿಬಿರಕ್ಕೆಂದು ಕಾಯ್ದಿರಿಸಿದ ಈ ಮೈದಾನದಲ್ಲಿ ಈಗ ಕುಡಿಯುವ ನೀರು ಸೌಕರ್ಯ, ಶೌಚಾಲಯ ಮತ್ತು ಸ್ನಾನಗೃಹಗಳ ಸೌಕರ್ಯಗಳನ್ನೂ ಕಲ್ಪಿಸಲಾಗಿದೆ.

ಸುಮಾರು ಐದು ಸಾವಿರಕ್ಕೂ ಹೆಚ್ಚು ಫ್ಯಾನ್‌ಗಳು ಮತ್ತು ಕೂಲರ್‌ಗಳನ್ನು ಅಳವಡಿಸಲಾಗಿದೆ ಅಲ್ಲದೆ 1,300 ಶೌಚಾಲಯಗಳು ಮತ್ತು ಸ್ನಾನಗೃಹ ಗಳನ್ನು ನಿರ್ಮಿಸಲಾಗಿದೆ. ಶನಿವಾರ ಬೆಳಿಗ್ಗೆ 5ರ ನಂತರ ಆರಂಭವಾಗುವ ನಿರ ಶನದ ಅವಧಿಯಲ್ಲಿ ಯೋಗ ಗುರುವಿನ ಬೆಂಬಲಿಗರು ಯಾವುದೇ ತೊಂದರೆಗೆ ಒಳಗಾಗದಂತೆ ವ್ಯವಸ್ಥೆ ಮಾಡಲಾಗಿದೆ.

ಯೋಗ ಗುರುವಿಗಾಗಿ ಎಂಟು ಅಡಿ ಉದ್ದದ ವೇದಿಕೆ ಸಜ್ಜಾಗಿದೆ. ವೇದಿಕೆಯ ಸುತ್ತಮುತ್ತ ದೊಡ್ಡ ಪರದೆಗಳನ್ನೂ ಅಳವಡಿಸಲಾಗಿದೆ.

ವೇದಿಕೆ ಬಳಿಯ ಜಾಗವನ್ನು- ಒಂದು ದಿನ ನಿರಶನ ನಡೆಸುವವರಿಗೆ- ಬಾಬಾ ಜತೆ ಇಡೀ ಅವಧಿಗೆ ಪಾಲ್ಗೊಳ್ಳುವವರಿಗೆ ಹಾಗೂ ಪ್ರತಿದಿನ ಭೇಟಿ ನೀಡುವವರಿಗೆ ಎಂದು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ. ಸತ್ಯಾಗ್ರಹದಲ್ಲಿ ಪಾಲ್ಗೊಳ್ಳುವವರಿಗೆ ಕುಡಿಯುವ ನೀರು ಮತ್ತು ವೈದ್ಯಕೀಯ ಸೌಲಭ್ಯವೂ ಲಭ್ಯವಿರುತ್ತದೆ.

`ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇದ್ದು 650 ನಲ್ಲಿಗಳನ್ನು ಕೂಡ ಅಳ ವಡಿಸಲಾಗಿದೆ~ ಎಂದು ದೆಹಲಿಯ ಭಾರತ್ ಸ್ವಾಭಿಮಾನ್ ಟ್ರಸ್ಟ್‌ನ ಅಧ್ಯಕ್ಷ ವೀರೇಂದ್ರ ವಿಕ್ರಮ್ ಹೇಳಿದ್ದಾರೆ. `ಇಡೀ ದಿನ ಸುಮಾರು 50-60 ವೈದ್ಯರು ಚಿಕಿತ್ಸೆ ನೀಡಲು ಸಿದ್ಧರಿರುತ್ತಾರೆ~ ಎಂದೂ ತಿಳಿಸಿದ್ದಾರೆ.ದೆಹಲಿ ಪೊಲೀಸರಲ್ಲದೆ ಭಾರತ್ ಸ್ವಾಭಿಮಾನ್ ಟ್ರಸ್ಟ್‌ನ ಸ್ವಯಂ ಸೇವ ಕರೂ ರಕ್ಷಣೆಯ ಜವಾಬ್ದಾರಿ ಹೊರಲಿದ್ದಾರೆ.

`ನಮ್ಮದು ಶಾಂತಿಯುತ ಪ್ರತಿ ಭಟನೆ ಆಗಿದ್ದು ಯಾವುದೇ ಹಿಂಸಾಚಾರ ಸಂಭವಿಸುವುದು ಎಂದು ನಾವು ನಿರೀಕ್ಷಿಸುವುದಿಲ್ಲ. ಸುಮಾರು 2 ಲಕ್ಷ ಬೆಂಬಲಿಗರು ಈ ಪ್ರತಿಭಟನೆಯಲ್ಲಿ ಭಾಗವಹಿಸ ಲಿದ್ದಾರೆ  ಎಂದು ನಿರೀಕ್ಷಿಸಲಾಗಿದೆ~ ಎಂದು ಅವರು ಹೇಳಿದ್ದಾರೆ.

ಮುಖ್ಯ ಮೈದಾನ, ಪ್ರವೇಶದ ಸ್ಥಳ ಮತ್ತು ಹೊರಗೆ ತೆರಳುವ ಸ್ಥಳಗಳಲ್ಲಿ ಸುಮಾರು 30-40 ಕ್ಲೋಸ್ ಸರ್ಕ್ಯುಟ್ ಕ್ಯಾಮೆರಾಗಳನ್ನೂ ಅಳವಡಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಾಷ್ಟ್ರದ ವಿವಿಧೆಡೆಯಿಂದ ಅಪಾರ ಸಂಖ್ಯೆಯಲ್ಲಿ ಆಗಮಿಸಲಿರುವ ಯುವ ಜನರು ಮತ್ತು ಮಹಿಳಾ ಸ್ವಯಂ ಸೇವ ಕರೂ ಬಾಬಾಗೆ ಬೆಂಬಲ ನೀಡಲು ಮೈದಾನದಲ್ಲಿ ಸೇರಲಿದ್ದಾರೆ ಎನ್ನಲಾಗಿದೆ.

ಬಿಜೆಪಿ ಬೆಂಬಲ
ಲಖನೌ (ಪಿಟಿಐ):
ಕಪ್ಪು ಹಣ ಮತ್ತು ಭ್ರಷ್ಟಾಚಾರದ ವಿರುದ್ಧ ಬಾಬಾ ರಾಮ ದೇವ್ ಅವರು ನಡೆಸಲಿರುವ ನಿರಶನಕ್ಕೆ ಬಿಜೆಪಿ ಗುರುವಾರ ಬೆಂಬಲ ಸೂಚಿಸಿದೆ.

`ವಿದೇಶಿ ಬ್ಯಾಂಕುಗಳಲ್ಲಿ ಕಪ್ಪು ಹಣ ಹೂಡಿರುವವರ ಹೆಸರುಗಳನ್ನು ಬಹಿ ರಂಗ ಪಡಿಸಬೇಕು ಎಂದು ನಾವು ಈಗಾ ಗಲೇ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಪತ್ರ ಬರೆದಿದ್ದೇವೆ. ಈ ದಿಸೆಯಲ್ಲಿ ರಾಮದೇವ್ ಅವರ ಆಂದೋಲನಕ್ಕೂ ಬೆಂಬಲ ನೀಡುತ್ತೇವೆ~ ಎಂದು ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT