ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿವೇಶನದ ಭರವಸೆ: ಭೂ ಆಕ್ರಮಣ ಹಿಂದಕ್ಕೆ

Last Updated 9 ಜನವರಿ 2013, 9:55 IST
ಅಕ್ಷರ ಗಾತ್ರ

ಕಳಸ: ಇಲ್ಲಿಗೆ ಸಮೀಪದ ಹಿನಾರಿ ಗುಡ್ಡದಲ್ಲಿ ನೂರಕ್ಕೂ ಹೆಚ್ಚು ತಾತ್ಕಾಲಿಕ ಟೆಂಟ್ ನಿರ್ಮಿಸಿ ವಿನೂತನ ಧರಣಿ ನಡೆಸುತ್ತಿದ್ದ ಕುದುರೆಮುಖದ ನಿರಾಶ್ರಿತರು ಮಂಗಳವಾರ ತಹಶೀ ಲ್ದಾರ್ ಭರವಸೆಯ ನಂತರ ತಮ್ಮ ಧರಣಿ ಕೈ ಬಿಟ್ಟರು.

ಸ್ಥಳಕ್ಕೆ ಭೇಟಿ ನೀಡಿದ್ದ ತಹಶೀಲ್ದಾರ್ ಮಂಜುನಾಥ್, ತಾವು ಈಗಾಗಲೇ ಸರ್ವೆ ನಂಬರ್ 85ರಲ್ಲಿ 10 ಎಕರೆ ಪ್ರದೇಶವನ್ನು ಕುದುರೆಮುಖ ನಿರಾಶಿ ್ರತರ ನಿವೇಶನಕ್ಕೆಂದೇ ತಾಲ್ಲೂಕು ಪಂಚಾಯಿತಿಗೆ ಹಸ್ತಾಂತರಿಸಿದ್ದೇನೆ ಎಂದು ಪಹಣಿ ಪ್ರದರ್ಶಿಸಿದರು.

ತಾ.ಪಂ.ಯು ಈ ಪ್ರದೇಶದಲ್ಲಿ ನಿವೇಶನ ಗುರುತಿಸಿ ಅರ್ಹ ಫಲಾನುಭವಿಗಳಿಗೆ ಹಂಚಲಿದೆ. ಉದ್ದೇಶಿತ ಪ್ರದೇಶದಲ್ಲಿನ ಅಕೇಶಿಯಾ ಮರಗಳನ್ನು ಕಡಿಯುವಂತೆ ತಾ.ಪಂ. ಅರಣ್ಯ ಇಲಾಖೆಗೆ ಸೂಚನೆ ನೀಡಲಿದೆ. ಅತಿ ಶೀಘ್ರದಲ್ಲೇ ಈ ಪ್ರಕ್ರಿಯೆ ಮುಗಿ ಯಲಿದೆ ಎಂದೂ ತಹಸೀಲ್ದಾರ್ ವಿಶ್ವಾಸ ವ್ಯಕ್ತಪಡಿಸಿದರು.

ಸ್ಥಳಕ್ಕೆ ಭೇಟಿ ನೀಡಿದ್ದ ಕಳಸ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಫಕೀರಪ್ಪ ತಾವು ಕೂಡಲೇ ತಾ.ಪಂ. ಕಾರ್ಯ ವನಿರ್ವಹಣಾಧಿಕಾರಿಗಳೊಂದಿಗೆ ಚರ್ಚಿಸಿ ನಿವೇಶನ ಸಮಸ್ಯೆ ಬಗೆಹರಿಸ ಸಲು ಶ್ರಮ ವಹಿಸುತ್ತೇನೆ ಎಂದು ಆಶ್ವಾಸನೆ ನೀಡಿದರು.

ಕುದುರೆಮುಖ ನಿರಾಶ್ರಿತರ ಪರವಾಗಿ ಹಾಜರಿದ್ದ ಸಾತಿ ಸುಂದರೇಶ್, ಗೋಪಾಲ ಶೆಟ್ಟಿ, ಲಕ್ಷ್ಮಣಾಚಾರ್, ಪೆರಿಯಸ್ವಾಮಿ, ಅಣ್ಣಪ್ಪ ಮತ್ತಿತರರು ಶುಕ್ರವಾರದ ಒಳಗೆ ನಿವೇಶನದ ಬಗ್ಗೆ ಸ್ಪಷ್ಟ ಆದೇಶ ಹೊರಬೀಳದಿದ್ದಲ್ಲಿ ಮತ್ತೆ ಭೂ ಆಕ್ರಮಣ ಚಳವಳಿ ಮುಂದುವರೆಸಲಾ ಗುತ್ತದೆ ಎಂದು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT