ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀತಿ ಸಮಿತಿಗೆ ಅಡ್ವಾಣಿ ಅಧ್ಯಕ್ಷ

Last Updated 17 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಲೋಕ­­ಸಭೆಯ ಪ್ರತಿಷ್ಠಿತ ನೀತಿ ಸಂಹಿತೆ ಸಮಿ­ತಿಯ ಅಧ್ಯಕ್ಷ­ರಾಗಿ ಬಿಜೆಪಿಯ ಹಿರಿಯ ನಾಯಕ ಎಲ್‌. ಕೆ. ಅಡ್ವಾಣಿ ಅವರನ್ನು ನೇಮಿಸಲಾಗಿದೆ.

ವಯಸ್ಸು 75 ದಾಟಿದವರನ್ನು ಸಂಪುಟಕ್ಕೆ ಸೇರಿಸುವುದಿಲ್ಲ ಎಂಬ ನಿರ್ಧಾರದಿಂದಾಗಿ ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ಹಿರಿಯ ಸಚಿವ­ರಾಗುವ ಅವಕಾಶ ಅಡ್ವಾಣಿ ಅವರಿಗೆ ಕೈ ತಪ್ಪಿತ್ತು. ಈಗ ಅವರನ್ನು ನೀತಿ ಸಂಹಿತೆ ಸಮಿತಿ ಅಧ್ಯಕ್ಷರಾಗಿ ಸ್ಪೀಕರ್‌ ಸುಮಿತ್ರಾ ಮಹಾಜನ್‌  ನೇಮಿಸಿದ್ದಾರೆ.

ಈ ಸಮಿತಿಯಲ್ಲಿ ಹುಬ್ಬಳ್ಳಿ ಸಂಸದ ಪ್ರಹ್ಲಾದ ಜೋಶಿ ಅವರೂ ಸದಸ್ಯ­ರಾಗಿ­ದ್ದಾರೆ. ಸಾರ್ವಜನಿಕ ಉದ್ಯ­ಮ­ಗಳ ಬಗೆಗಿನ ಸಮಿತಿ, ಮಾಹಿತಿ ತಂತ್ರಜ್ಞಾನ ಬಗೆಗಿನ ಸಮಿತಿ­ಗಳಲ್ಲಿ ಅಡ್ವಾಣಿ ಅವರು ಸದಸ್ಯ­ರಾಗಿದ್ದಾರೆ.

ಸಂಸದರು ಅನೈತಿಕವಾಗಿ ವರ್ತಿ­ಸಿದ ಬಗ್ಗೆ ನೀಡಲಾದ ದೂರು­ಗಳನ್ನು ನೀತಿ ಸಂಹಿತೆ ಸಮಿತಿಯು ಪರಿಶೀಲಿಸು­ತ್ತದೆ. ಸದಸ್ಯರ ಅನೈತಿಕ ನಡತೆ ಬಗ್ಗೆ ಸ್ವಯಂ ಪ್ರೇರಿತ ವಿಚಾರಣೆ ನಡೆಸುವ ಅಧಿಕಾರವೂ ಈ ಸಮಿತಿಗೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT