ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರು ತಂದವರು

Last Updated 27 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ರಂಗನಿರಂತರ ತಂಡದಿಂದ ಮಂಗಳವಾರ ಡಾ.ಅಮರೇಶ ನುಗಡೋಣಿ ಅವರ `ನೀರು ತಂದವರು~ ನಾಟಕ ಪ್ರದರ್ಶನ. ಶಶಿಧರ್ ಭಾರಿಘಾಟ್ ರಂಗರೂಪ ನೀಡಿದ್ದಾರೆ. ಎಂ.ರವಿ ನಿರ್ದೇಶಿಸಿರುವ ನಾಟಕದಲ್ಲಿ ನೀರು ಎನ್ನುವುದು ಜೀವ ದ್ರವ್ಯ. ಗಾಳಿ-ಬೆಳಕಿನ ಹಾಗೆ ಅದು ಯಾರೊಬ್ಬರ ಸ್ವತ್ತೂ ಅಲ್ಲ.
 
ಸಕಲ ಜೀವರಾಶಿಗಳಿಗೂ ಅವಶ್ಯಕ. ಒಂದು ಕಾಲದಲ್ಲಿ ಶೋಷಿತರು ಮೇಲ್ವರ್ಗದವರ ಕೇರಿಗಳ ಬಾವಿಗಳಲ್ಲಿ ನೀರನ್ನು ತರುವಂತಿರಲಿಲ್ಲ. ಇಂತಹ ನೀರು ಕೇವಲ ಮೇಲ್ವರ್ಗದವರ ಸ್ವತ್ತಲ್ಲ. ಅದು ಎಲ್ಲರಿಗೂ ಸೇರಿದ್ದು ಎಂಬುದು ಕಥೆಯ ವಸ್ತು. ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಕಾಣಬರುವ ಸಾಮಾಜಿಕ, ರಾಜಕೀಯ ವ್ಯವಸ್ಥೆಗಳ ಅಣಕವಾಗಿ `ನೀರು ತಂದವರು~ ರಂಗದ ಮೇಲೆ ಅನಾವರಣಗೊಳ್ಳಲಿದೆ.
ವೀಕ್ಷಕರನ್ನು ಹಿಡಿದಿಡಲು ನಡುನಡುವೆ ಹಾಸ್ಯ ಪ್ರಸಂಗಗಳಿವೆ.

ಸ್ಥಳ: ರಂಗಶಂಕರ, ಜೆ.ಪಿ.ನಗರ, 2ನೇ ಹಂತ. ಸಂಜೆ 7.30. ಮಾಹಿತಿಗೆ: 98865 43697

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT