ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರು ಶುದ್ಧೀಕರಿಸುವ ಉಪಕರಣ;ವೈರಸ್ ತಡೆ ತಂತ್ರಜ್ಞಾನ ಕಡ್ಡಾಯ

Last Updated 3 ಜೂನ್ 2012, 19:30 IST
ಅಕ್ಷರ ಗಾತ್ರ

ಅಹಮದಾಬಾದ್(ಪಿಟಿಐ): ಗೃಹ ಬಳಕೆ ನೀರು ಶುದ್ಧೀಕರಿಸುವ ಉಪಕರಣಗಳು  ವೈರಸ್  ತಡೆ (ಸೋಸುವಿಕೆ) ತಂತ್ರಜ್ಞಾನ  ಹೊಂದಿರುವುದು ಕಡ್ಡಾಯ ಎಂದು `ನೀರಿನ ಗುಣಮಟ್ಟ ಸಂಸ್ಥೆ(ಡಬ್ಲ್ಯುಕ್ಯುಎ) ಸದಸ್ಯರೊಬ್ಬರು ಹೇಳಿದ್ದಾರೆ.

ದೇಶದ ನೀರು ಶುದ್ಧೀಕರಣ  ಉಪಕರಣಗಳ(ಅಸಂಘಟಿತ ವಲಯ) ವಾರ್ಷಿಕ ವಹಿವಾಟು ಅಂದಾಜುರೂ1,500 ಕೋಟಿಯಷ್ಟಿದೆ. ಹಲವು ಸಂಸ್ಥೆಗಳು `ಡಬ್ಲ್ಯುಕ್ಯುಎ~ ಮಾನದಂಡ ಅನುಸರಿಸುತ್ತಿಲ್ಲ. ಈಗ ಮಾರುಕಟ್ಟೆಯಲ್ಲಿರುವ ಉಪಕರಣಗಳು ಕೇವಲ ಬ್ಯಾಕ್ಟೀರಿಯ ತಡೆ ತಂತ್ರಜ್ಞಾನ ಮಾತ್ರ ಹೊಂದಿವೆ.
 
ಇವು ವೈರಸ್ ಸೋಸುವಿಕೆ ತಂತ್ರಜ್ಞಾನ ಅಳವಡಿಸಿಕೊಳ್ಳುವುದು ಕಡ್ಡಾಯ. ಭಾರತೀಯ ಗುಣಮಟ್ಟ ಮಾನಕ ಮಂಡಳಿ(ಬಿಐಎಸ್) ಈ ವಿಷಯ ಪರಿಶೀಲಿಸುತ್ತಿದ್ದು, ಅದು ಅಂತಿಮ ಹಂತದಲ್ಲಿದೆ. ವರ್ಷಾಂತ್ಯಕ್ಕೆ ಅಧಿಕೃತ ಪ್ರಕಟಣೆ ಹೊರಬೀಳಲಿದೆ ಎಂದಿದ್ದಾರೆ. ದೇಶದ ಸಂಘಟಿತ ವಲಯದ ನೀರು ಶುದ್ಧೀಕರಣ ಉಪಕರಣಗಳ ಮಾರುಕಟ್ಟೆರೂ700 ಕೋಟಿಯಷ್ಟಿದೆ. ಇವರಲ್ಲಿ ಅನೇಕ ಸಂಸ್ಥೆಗಳು ಈ ತಂತ್ರಜ್ಞಾನ ಅಳವಡಿಸಿಕೊಂಡಿವೆ.

ರಾಷ್ಟ್ರೀಯ ಸೂಕ್ಷ್ಮ ರೋಗಾಣುಗಳ ಅಧ್ಯಯನ ಸಂಸ್ಥೆ (ಎನ್‌ಐವಿ) 2009ರಲ್ಲಿ ಪ್ರಕಟಿಸಿದ ವರದಿಯಂತೆ, ದೇಶದ ಗೃಹ ಬಳಕೆ ನೀರು ಶುದ್ಧೀಕರಣ ಉಪಕರಣಗಳಲ್ಲಿ (ಅಸಂಘಟಿತ ವಲಯದ) ಹೆಚ್ಚಿನವು ಕಳಪೆ ಗುಣಮಟ್ಟದ್ದಾಗಿವೆ. ಬ್ಯಾಕ್ಟೀರಿಯ ಮತ್ತು ಸೂಕ್ಷ್ಮಾಣು ತಡೆಯುವ ಸಾಮರ್ಥ್ಯ ಇವಕ್ಕಿಲ್ಲ. ಈಗಾಗಲೇ ನಿಗದಿಪಡಿಸಿರುವ ಮಾನದಂಡವನ್ನೂ ಇವು ಪಾಲಿಸುತ್ತಿಲ್ಲ ಎಂದು ಹೇಳಿತ್ತು.`ಐಎಸ್ 10500~ ಭಾರತೀಯ ಕುಡಿಯುವ ನೀರಿನ ಮಾನದಂಡದಡಿ ವೈರಸ್ ತಡೆ ತಂತ್ರಜ್ಞಾನ ಸೇರಿಸಲಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT