ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇತ್ರ ಪರೀಕ್ಷೆಗೆ ವಿಷನ್ ಚೆಕ್

Last Updated 11 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಟೈಟನ್ ಇಂಡಸ್ಟ್ರೀಸ್ ಲಿ.(ಟಿಐಎಲ್)ನ ಅಂಗಸಂಸ್ಥೆ `ಟೈಟನ್ ಐ ಪ್ಲಸ್~, ಅಂತರ್ಜಾಲ ಮೂಲಕ ಜನರೇ ಸ್ವತಃ ದೃಷ್ಟಿದೋಷ ತಪಾಸಣೆ ಮಾಡಿಕೊಳ್ಳುವಂಥ `ವಿಷನ್ ಚೆಕ್~ ಸೇವೆ ಆರಂಭಿಸಿದೆ.

`ಟಿಐಎಲ್~ ವ್ಯವಸ್ಥಾಪಕ ನಿರ್ದೇಶಕ ಭಾಸ್ಕರ್ ಭಟ್ ಗುರುವಾರ ನಗರದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಈ ಉಚಿತ ಸೇವೆಗೆ ಚಾಲನೆ ನೀಡಿದರು.

ನಂತರ ಮಾತನಾಡಿದ `ಟೈಟನ್ ಐ ಪ್ಲಸ್~ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವಿಕಾಂತ್, `ಪ್ರತಿ ಅಕ್ಟೋಬರ್‌ನ 2ನೇ ಗುರುವಾರ ವಿಶ್ವ ದೃಷ್ಟಿ ದಿನ ಆಚರಿಸಲಾಗುತ್ತದೆ. ಹಾಗಾಗಿ ಈ ಅಂತರ್ಜಾಲ ಸೇವೆ ಇಂದು ಆರಂಭಿಸುತ್ತಿದ್ದೇವೆ~ ಎಂದರು.

ವಿಶ್ವದಲ್ಲಿ ಸದ್ಯ 330 ಕೋಟಿ ಮಂದಿ ವಿವಿಧ ಬಗೆಯ ನೇತ್ರ ಸಮಸ್ಯೆ ಹೊಂದಿದ್ದಾರೆ. ಸೂಕ್ತ ಚಿಕಿತ್ಸೆ ನೀಡಿದರೆ 67 ಕೋಟಿ ಮಂದಿಗೆ ದೃಷ್ಟಿದೋಷ ಸರಿಹೋಗಬಲ್ಲದು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಭಾರತದಲ್ಲಿಯೂ 45.60 ಕೋಟಿ ಜನರು ಹಲವು ಬಗೆಯ ಕಣ್ಣಿನ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಶೇ 25-30 ಮಂದಿ ಮಾತ್ರ ನೇತ್ರ ವೈದ್ಯರಲ್ಲಿ ಅಗತ್ಯ ಚಿಕಿತ್ಸೆ ಪಡೆಯುತ್ತಾರೆ.

ಆದರೆ, ಬಹಳಷ್ಟು ಮಂದಿಗೆ ತಮಗಿರುವ ಕಣ್ಣಿನ ಸಮಸ್ಯೆಯ ಅರಿವೇ ಇಲ್ಲ. ಕೆಲವರು ತಿಳಿದಿದ್ದೂ ನಿರ್ಲಕ್ಷಿಸುತ್ತಾರೆ. ಇದರಿಂದ ದೃಷ್ಟಿದೋಷ ಹೆಚ್ಚಿ ಅವರು ಭಾರಿ ಸಮ ಸ್ಯೆಗೊಳಗಾಗಬೇಕಾಗುತ್ತದೆ ಎಂದರು.

`ವಿಷನ್ ಚೆಕ್~ ಸೇವೆ ಬಹಳ ಸರಳ.  ಮನೆ/ಕಚೇರಿಯಲ್ಲಿದ್ದಾಗಲೂ ಐದೇ ನಿಮಿಷಗಳಲ್ಲಿ ಸ್ವತಃ ಪ್ರಾಥಮಿಕ ನೇತ್ರ ತಪಾಸಣೆ ಮಾಡಿಕೊಳ್ಳಬಹುದು. www.titaneyeplus.com ವೆಬ್‌ಸೈಟ್‌ನಲ್ಲಿನ ಸೂಚನೆಗಳನ್ನು ಅನುಸರಿಸಿದರೆ ತಕ್ಷಣ ಮೊಬೈಲ್ ಮತ್ತು ಇ-ಮೇಲ್ ಮೂಲಕ ಫಲಿತಾಂಶ ಲಭ್ಯ. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರೆ ಟೈಟನ್ ಐ ಪ್ಲಸ್ ಸಿಬ್ಬಂದಿಯೇ ಕರೆ ಮಾಡಿ ವೈದ್ಯರ ಶುಶ್ರೂಷೆಗೆ ನೆರವಾಗುತ್ತಾರೆ ಎಂದರು.

`ವಿಷನ್ ಚೆಕ್~ ಸದ್ಯ  ಆಂಗ್ಲಭಾಷೆಯಲ್ಲಿದ್ದು, ಶೀಘ್ರವೇ ಪ್ರಾದೇಶಿಕ ಭಾಷೆಗಳನ್ನು ಅಳವಡಿಸಲಾಗುವುದು. ದೃಷ್ಟಿ ತಪಾಸಣೆ ವೇಳೆ ಕಂಪ್ಯೂಟರ್ ಮಾನಿಟರ್‌ನಿಂದ 3 ಅಡಿ ಅಂತರ ಕಾಯ್ದುಕೊಳ್ಳಬೇಕು. ವೆಬ್‌ಕ್ಯಾಮೆರಾ ಅಗತ್ಯವೇನೂ ಇಲ್ಲ ಎಂದು ಪ್ರಶ್ನೆಗಳಿಗೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT