ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇತ್ರ ಸಂರಕ್ಷಣೆಗೆ ಕರೆ

Last Updated 8 ಜೂನ್ 2011, 6:20 IST
ಅಕ್ಷರ ಗಾತ್ರ

ಪರಶುರಾಂಪುರ: ಮಾನವನ ಅತೀ ಸೂಕ್ಷ್ಮ ಅಂಗವಾದ `ಕಣ್ಣಿನ ರಕ್ಷಣೆ~ಯನ್ನು ನಾವೆಲ್ಲರೂ ಜಾಗರೂಕತೆಯಿಂದ ವಬೇಕು ಎಂದು ನೇತ್ರತಜ್ಞ ಕೊಂಡ್ಲಹಳ್ಳಿ ಡಾ.ನಾಗರಾಜ್ ಮಂಗಳವಾರ ತಿಳಿಸಿದರು.

ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೊಂಡ್ಲಹಳ್ಳಿಯ ಎಂ.ಆರ್.ಟಿ ಗ್ರಾಮಾಂತರ ಆಸ್ಪತ್ರೆ, ಜಿಲ್ಲಾ ಅಂಧತ್ವ ನಿವಾರಣಾ ಸಮಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಂಚಾರಿ ನೇತ್ರ ಚಿಕಿತ್ಸಾ ಘಟಕದ ವತಿಯಿಂದ ಹಮ್ಮಿಕೊಂಡಿದ್ದ `ಉಚಿತ ನೇತ್ರ ಚಿಕಿತ್ಸಾ ಶಿಬಿರ~ ಕಾರ್ಯಕ್ರಮದಲ್ಲಿ ಮಾತನಾಡಿದರು.

ಗ್ರಾಮೀಣ ಜನರು ಇಂತಹ ಶಿಬಿರಗಳ ಉಪಯೋಗವನ್ನು ಮಾಡಿಕೊಂಡು ದೃಷ್ಟಿದೋಷವನ್ನು ನಿವಾರಿಸಿ ಕೊಳ್ಳುಬೇಕು. ಜತೆಗೆ ವೈದ್ಯರು ನೀಡುವ ಸಲಹೆಗಳನ್ನು ಪಾಲಿಸಿ, ಅಂಧತ್ವ ನಿವಾರಣೆಗೆ ಸಹಕರಿಸಬೇಕು ಎಂದರು.

ಶಿಬಿರದಲ್ಲಿ 380 ಮಂದಿ ಕಣ್ಣಿನ ಪರೀಕ್ಷೆ ನಡೆಸಿ,95 ಜನರನ್ನು ಶಸ್ತ್ರ ಚಿಕಿತ್ಸೆಗೆ ಒಳಪಡಿಸಲಾಯಿತು.
ಡಾ.ಅಭಿನವ, ಡಾ. ವಿಜಯ ನಾಗರಾಜ್, ಡಾ. ರಮೇಶ್, ಪಂಚಾಕ್ಷರಿ, ಕಂಬಯ್ಯ, ಮಂಜುನಾಥ, ಬಸವರಾಜ್, ರಾಮಲಿಂಗಪ್ಪ, ಪಾಂಚಜನ್ಯ ಇತರರು ಹಾಜರಿದ್ದರು.  
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT