ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇರಳೆಗೆ ತೊಗಟೆ ಕೊರಕ ಹುಳು ಬಾಧೆ

Last Updated 18 ಸೆಪ್ಟೆಂಬರ್ 2013, 5:29 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ತಾಲ್ಲೂಕಿನಲ್ಲಿ ಬೆಳೆಯ­ಲಾಗಿರುವ ಜಂಬು ನೇರಳೆ ಮರಗಳಿಗೆ ತೊಗಟೆ ಕೊರಕ ಹುಳುವಿನ ಬಾಧೆ ಉಂಟಾಗಿದೆ. ಕೆಲವು ಕಡೆ ಗುಂಪು ಗುಂಪಾಗಿ ಕೊಂಬೆಗಳನ್ನು ಮುತ್ತಿರುವ ಭಯಂಕರ ಹುಳುಗಳು ತೊಗಟೆಯನ್ನು ತಿಂದು ಮರಗಳ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತಿವೆ.

ಮೈಮೇಲೆ ಚುಕ್ಕೆ ಹಾಗೂ ಕೂದ­ಲನ್ನು ಹೊಂದಿರುವ ಹೆಬ್ಬೆರಳು ಗಾತ್ರದ ಹುಳುಗಳು, ಜಂಬು ನೇರಳೆ ಮರಗಳ ಕಾಂಡ ಹಾಗೂ ಕೊಂಬೆಗಳಲ್ಲಿ ಜಮಾ­ಯಿಸಿ ತೊಗಟೆಗೆ ಹಾನಿ ಉಂಟು­ಮಾಡುತ್ತಿವೆ. ರಾತ್ರಿ ಹೊತ್ತಿನಲ್ಲಿ ಸೊಪ್ಪನ್ನೂ ತಿಂದು ತೇಗುತ್ತಿವೆ ಎಂದು ಕರ್ನಾಟಕ ಪ್ರಾಂತ ರೈತ ಸಂಭದ ಜಿಲ್ಲಾಧ್ಯಕ್ಷ ಪಿ.ಆರ್‌.­ಸೂರ್ಯನಾರಾ­ಯಣ ಮಂಗಳವಾರ ‘ಪ್ರಜಾವಾಣಿ’ಗೆ ತಿಳಿಸಿದರು.

ಜಂಬು ನೇರಳೆ ಹಣ್ಣಿಗೆ ಬೇಡಿಕೆ ಮತ್ತು ಬೆಲೆ ಇರುವುದರಿಂದ ತಾಲ್ಲೂ­ಕಿನ ಕೆಲವು ರೈತರು ತಮ್ಮ ಜಮೀನಲ್ಲಿ ಜಂಬು ನೇರಳೆ ಮರಗಳನ್ನು ಬೆಳೆಸಿ­ದ್ದಾರೆ. ಸಾಮಾಜಿಕ ಅರಣ್ಯ ಇಲಾಖೆ ರಸ್ತೆ ಬದಿಗಳಲ್ಲಿ ಜಂಬು ನೇರಳೆ ಹಾಗೂ ನಾಯಿ ನೇರಳೆ ಮರಗಳನ್ನು ಬೆಳೆಸಿದೆ. ತೊಗಟೆ ಕೊರಕ ಹುಳುಗಳ ಉಪಟಳ ಹೆಚ್ಚಿದಲ್ಲಿ ಅವು ನಿರೀಕ್ಷಿತ ಪ್ರಮಾಣದಲ್ಲಿ ಬೆಳೆಯಲು ಸಾಧ್ಯ­ವಾಗು­ವುದಿಲ್ಲ ಎಂದು ಅಭಿಪ್ರಾಯ­ಪಟ್ಟರು. ಸಂಬಂಧಪಟ್ಟ ಇಲಾಖೆ ಅಧಿ­ಕಾರಿ­ಗಳು ಈ ಹುಳುವಿನ ಸಮಸ್ಯೆ ನಿವಾರಣೆಗೆ ಅಗತ್ಯ ಸಲಹೆ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ವಿಎಸ್‌ಎಸ್‌ಎನ್‌ಗೆ  ಆಯ್ಕೆ
ಮುಳಬಾಗಲು: ತಾಲ್ಲೂಕಿನ ಮೋತಕ­ಪಲ್ಲಿ  ವ್ಯವಸಾಯ ಸೇವಾಸಹಕಾರ ಸಂಘದ ಅಧ್ಯಕ್ಷರಾಗಿ ಸಿಪಿಎಂ ಬೆಂಬ­ಲಿಗ  ಮಡಿ­ವಾಳ ಪಾಪಣ್ಣ, ಉಪಾ­ಧ್ಯಕ್ಷ­ರಾಗಿ ಜೆಡಿಎಸ್‌ ಬೆಂಬಲಿಗ ನಾಗರ­ಹಳ್ಳಿ ಜೆ.­ಕೃಷ್ಣರೆಡ್ಡಿ ಸೋಮ­ವಾರ ಅವಿರೋಧ­ವಾಗಿ ಆಯ್ಕೆಯಾದರು.

ನಿರ್ದೇಶಕರಾಗಿ ಜೆಡಿಎಸ್‌ನ ಎಂ.ಸಿ. ರಘುನಾಥ್‌, ಚಿಕ್ಕಚನ್ನಪ್ಪ, ಶಿವಣ್ಣ, ವೆಂಕ­­ಟೇಶಪ್ಪ, ರಾಮಕ್ಕ, ಆಚಂಪಲ್ಲಿ ಆಮ­ರಪ್ಪ, ಎಂ.ಎನ್‌. ಬಾಬು, ಎಂ.ಎನ್‌.­ಶಾರದಾ ಆಯ್ಕೆಯಾಗಿ­ದ್ದಾರೆ. ಜೆಡಿಎಸ್‌ ತಾಲ್ಲೂಕು ಘಟಕದ ಅಧ್ಯಕ್ಷ ಆಲಂಗೂರು ಶಿವಣ್ಣ, ಟಿಎಪಿಸಿ­ಎಂಎಸ್‌ ಅಧ್ಯಕ್ಷ ತಾಯ­ಲೂರು ರಮೇಶ್‌, ಕೃಷ್ಣಮೂರ್ತಿ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT