ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೈತಿಕ ಶಿಕ್ಷಣದಿಂದ ಭ್ರಷ್ಟಾಚಾರಕ್ಕೆ ಕಡಿವಾಣ

Last Updated 10 ಜೂನ್ 2011, 9:05 IST
ಅಕ್ಷರ ಗಾತ್ರ

ಬೆಳಗಾವಿ: `ರಾಷ್ಟ್ರೀಯ ಸ್ವಯಂ ಸೇವಾ ಸಂಘವು ಜನವರಿ 17ರಿಂದ ಮೂರು ದಿನಗಳ ಕಾಲ ಉತ್ತರ ಕರ್ನಾಟಕ ಮಟ್ಟದ `ಹಿಂದೂ ಶಕ್ತಿ ಸಂಗಮ~ ಸಮಾವೇಶ ಹಮ್ಮಿಕೊಳ್ಳಲಿದೆ~ ಎಂದು ಆರ್‌ಎಸ್‌ಎಸ್ ದಕ್ಷಿಣ ಮಧ್ಯ ಕ್ಷೇತ್ರ ಪ್ರಚಾರಕ ಮಂಗೇಶ ಭೇಂಡೆ ತಿಳಿಸಿದರು.

ಜನಶಕ್ತಿ ಕಲ್ಯಾಣ ಟ್ರಸ್ಟ್‌ನ `ಸಂಘ ಸದನ~ ವಿಸ್ತ್ರತ ಕಟ್ಟಡದ ವಾಸ್ತುಶಾಂತಿ ಮತ್ತು ಸ್ನೇಹ ಮಿಲನ ಸಮ್ಮೇಳನದಲ್ಲಿ ಮಾತನಾಡಿದ ಅವರು, ಮೂರು ದಿನಗಳ ಕಾಲ ನಡೆಯುವ ಸಭೆಯಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತರು ದೇಶದ ಪ್ರಮುಖ ಪ್ರಸ್ತುತ ಸಮಸ್ಯೆಗಳ ಬಗ್ಗೆ ಚರ್ಚಿಸಲಿದ್ದಾರೆ. ಈ ಸಂದರ್ಭದಲ್ಲಿ ನೈತಿಕ ಶೈಕ್ಷಣಕ್ಕೆ ಒತ್ತು ನೀಡಲಾ ಗುವುದು~ ಎಂದು ತಿಳಿಸಿದರು.

`ಮನೆ ಹಾಗೂ ಸಮಾಜದಲ್ಲಿ ನೈತಿಕ ಶಿಕ್ಷಣದ ಕೊರತೆಯಿಂದಾಗಿ ಭ್ರಷ್ಟಾಚಾರ ದಂತಹ ಹಲವು ಸಾಮಾಜಿಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದೆ. ಮನೆಯಲ್ಲಿ ನೈತಿಕ ಶಿಕ್ಷಣ ನೀಡುವುದರಿಂದ ದೇಶಭಕ್ತರನ್ನು ರೂಪಿಸಬಹುದು. ಅವರು ದೇಶದ ಗತಿಯನ್ನೇ ಬದಲಿಸಬಲ್ಲರು~ ಎಂದು ಅಭಿಪ್ರಾಯಪಟ್ಟರು. 

`ದೇಶದಲ್ಲಿ ಭ್ರಷ್ಟಾಚಾರ ಬಹು ದೊಡ್ಡ ಸಮಸ್ಯೆಯಾಗಿ ಬೆಳೆಯುತ್ತಿದೆ. ಹೀಗಾಗಿಯೇ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಪ್ರತಿಭಟನೆ- ಧರಣಿ ಸತ್ಯಾಗ್ರಹಗಳು ನಡೆಯುತ್ತಿವೆ. ಭ್ರಷ್ಟಾಚಾರವು ಕಾಂಗ್ರೆಸ್  ದೇಶಕ್ಕೆ ನೀಡಿದ ಕೊಡುಗೆಯಾಗಿದೆ~ ಎಂದು ಆರೋಪಿಸಿದರು.

`1949ರಲ್ಲಿ ಉತ್ತರ ಪ್ರದೇಶದಲ್ಲಿ ಮೊದಲ ಬಾರಿಗೆ 69 ಕೋಟಿ ರೂಪಾಯಿ ಸಕ್ಕರೆ ಹಗರಣ ನಡೆದಾಗ ಅಂದಿನ ಗೃಹ ಸಚಿವ ಸರ್ದಾರ ವಲ್ಲಭಭಾಯಿ ಪಟೇಲ್ ಅವರ ವಿರೋಧದ ನಡುವೆಯೂ ಪ್ರಧಾನಿ ಜವಾಹರಲಾಲ್ ನೆಹರೂ ಇದನ್ನು ಮುಚ್ಚಿ ಹಾಕಿದರು~ ಎಂದು ದೂರಿದರು.

`ಭ್ರಷ್ಟಾಚಾರದ ವಿರುದ್ಧ ಆರ್‌ಎಸ್‌ಎಸ್ ಕೈಗೊಂಡಿರುವ ಜಾಗೃತಿ ಕಾರ್ಯಕ್ರಮದಿಂದ ಜನರಲ್ಲಿ ಜಾಗೃತಿ ಮೂಡಿದೆ. ಆದರೆ, ಇದರಿಂದ ಭ್ರಷ್ಟಾಚಾರವನ್ನು ಸಂಪೂರ್ಣವಾಗಿ ತೊಲಗಿಸಲು ಸಾಧ್ಯವಿಲ್ಲ. ಜನರೇ ನೈತಿಕವಾಗಿ ಭ್ರಷ್ಟಾಚಾರದಲ್ಲಿ ತೊಡಗಿಕೊಳ್ಳದಿದ್ದಾಗ ಮಾತ್ರ ಇದರ ನಿರ್ಮೂಲನೆ ಸಾಧ್ಯ~ ಎದರು.

ಜನಕಲ್ಯಾಣ ಟ್ರಸ್ಟ್‌ನ ಟ್ರಸ್ಟಿ ಪರಮೇಶ್ವರ ಹೆಗಡೆ ಸ್ವಾಗತಿಸಿದರು. ಆರ್‌ಎಸ್‌ಎಸ್ ನಗರ ಘಟಕದ ಅಧ್ಯಕ್ಷ ಬಾಳಣ್ಣ ಕಗ್ಗಣಗಿ, ಜನಕಲ್ಯಾಣ ಟ್ರಸ್ಟ್ ಅಧ್ಯಕ್ಷ ಮೋಹನರಾವ್ ದಾತೆ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT