ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಠಾಣ್, ಸೈಮಂಡ್ಸ್ ದಾಖಲೆ ಪತನ

Last Updated 23 ಏಪ್ರಿಲ್ 2013, 19:41 IST
ಅಕ್ಷರ ಗಾತ್ರ

ಬೆಂಗಳೂರು: ಕೇವಲ ಮೂವತ್ತು ಎಸೆತಗಳಲ್ಲಿ ಶತಕ ಪೂರೈಸಲು ಸಾಧ್ಯ ಎಂಬುದನ್ನು ಇತ್ತೀಚಿನವರೆಗೆ ಯಾರೂ ಊಹಿಸಿಯೂ ಇರಲಿಲ್ಲ. ಆದರೆ ಕ್ರಿಕೆಟ್‌ನಲ್ಲಿ ಟ್ವೆಂಟಿ-20 ಪಂದ್ಯದ ಆಗಮನದ ಬಳಿಕ ಬ್ಯಾಟಿಂಗ್‌ನ ದಿಕ್ಕೇ ಬದಲಾಗಿದೆ.

ಪ್ರಥಮ ದರ್ಜೆ ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಲ್ಲಿ ಯಾರೂ ಇದುವರೆಗೆ 30 ಎಸೆತಗಳಲ್ಲಿ ಶತಕ ಗಳಿಸಿಲ್ಲ. ಗೇಲ್ ಸಾಧನೆ ಅಂತರರಾಷ್ಟ್ರೀಯ ಪಂದ್ಯದಲ್ಲಿ ಮೂಡಿಬಂದಿಲ್ಲ ನಿಜ. ಆದರೆ ಅವರ ಇನಿಂಗ್ಸ್‌ನ್ನು ಸುಲಭದಲ್ಲಿ ಮರೆಯಲು ಸಾಧ್ಯವಿಲ್ಲ.

ಐಪಿಎಲ್‌ನಲ್ಲಿ ಅತಿವೇಗದ ಶತಕ ಗಳಿಸಿದ ದಾಖಲೆ ಯೂಸುಫ್ ಪಠಾಣ್ ಹೆಸರಿನಲ್ಲಿತ್ತು. ರಾಜಸ್ತಾನ ರಾಯಲ್ಸ್ ಪರ ಆಡುತ್ತಿದ್ದ ಸಂದರ್ಭ ಅವರು 37 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಟ್ವೆಂಟಿ-20 ಅಂತರರಾಷ್ಟ್ರೀಯ ಪಂದ್ಯದಲ್ಲಿ ವೇಗದ ಶತಕದ ದಾಖಲೆ ದಕ್ಷಿಣ ಆಫ್ರಿಕದ ರಿಚರ್ಡ್ ಲೆವಿ ಹೆಸರಿನಲ್ಲಿದೆ. 2011 ರಲ್ಲಿ ನ್ಯೂಜಿಲೆಂಡ್ ವಿರುದ್ಧ ಅವರು 45 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದರು.

ಟ್ವೆಂಟಿ-20 ಯಲ್ಲಿ (ಅಂತರರಾಷ್ಟ್ರೀಯ ಪಂದ್ಯ ಹೊರತುಪಡಿಸಿ) ವೇಗದ ಶತಕ ಗಳಿಸಿದ್ದ ದಾಖಲೆ ಆಸ್ಟ್ರೇಲಿಯಾದ ಆ್ಯಂಡ್ರ್ಯೂ ಸೈಮಂಡ್ಸ್ ಹೆಸರಿನಲ್ಲಿತ್ತು. ಕೌಂಟಿ ತಂಡ ಕೆಂಟ್ ಪರ ಅವರು 34 ಎಸೆತಗಳಲ್ಲಿ ಮೂರಂಕಿಯ ಗಡಿ ದಾಟಿದ್ದರು. ಇದೀಗ ಆ ದಾಖಲೆಯನ್ನೂ ಗೇಲ್ ಮುರಿದಿದ್ದಾರೆ.

ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಅತಿವೇಗದ ಶತಕದ ದಾಖಲೆ ಪಾಕಿಸ್ತಾನದ ಶಾಹಿದ್ ಅಫ್ರಿದಿ (37 ಎಸೆತ) ಹೆಸರಿಲ್ಲಿದ್ದರೆ, ಟೆಸ್ಟ್ ಕ್ರಿಕೆಟ್‌ನಲ್ಲಿ ಈ ಗೌರವ ವೆಸ್ಟ್ ಇಂಡೀಸ್‌ನ ವಿವಿಯನ್ ರಿಚರ್ಡ್ಸ್ (56 ಎಸೆತ) ಹೊಂದಿದ್ದಾರೆ.

`ಈ ಇನಿಂಗ್ಸ್‌ನಿಂದ ನನಗೆ ಉಂಟಾಗಿರುವ ಸಂತಸವನ್ನು ವರ್ಣಿಸಲು ಪದಗಳೇ ಸಿಗುತ್ತಿಲ್ಲ. ಮುಖ್ಯವಾಗಿ ತಂಡಕ್ಕೆ ಗೆಲುವು ಲಭಿಸಿದ್ದು ಖುಷಿ ತಂದಿದೆ. ಈ ದಿನ ಎಲ್ಲವೂ ನನ್ನ ಲೆಕ್ಕಾಚಾರದಂತೆ ನಡೆಯಿತು' ಎಂದು ಗೇಲ್ ನುಡಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT