ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಮಾಣು ತ್ಯಾಜ್ಯ ಸಂಗ್ರಹಕ್ಕೆ ನೆಲಮಾಳಿಗೆ

Last Updated 14 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಪರಮಾಣು ತ್ಯಾಜ್ಯ ಸಂಗ್ರಹಣೆಗಾಗಿ ದೇಶವು ಆಳವಾದ ನೆಲಮಾಳಿಗೆ ಪ್ರದೇಶಗಳ ಅನ್ವೇಷಣೆಯಲ್ಲಿ ತೊಡಗಿದೆ.

ಪರಮಾಣು ಇಂಧನ ಇಲಾಖೆಯು ತನ್ನ ಯುರೇನಿಯಂ ಗಣಿಯೊಂದಲ್ಲಿ ನೆಲಮಾಳಿಗೆ ಪ್ರಯೋಗಾಲಯ ನಿರ್ಮಿಸಲಿದ್ದು, ಪರಮಾಣು ತ್ಯಾಜ್ಯ ಸಂಗ್ರಹಣೆಗಾಗಿ ಗಣಿಯ ತಳದ ಬಂಡೆಗಳ ಗುಣಮಟ್ಟವನ್ನು ಪರಿಶೀಲಿಸಲಿದೆ.

`ಸ್ಥಿರವಾಗಿರುವ, ಬಿರುಕಿಲ್ಲದ ಅಭೇದ್ಯ ಶಿಲಾ ರಚನೆಗಾಗಿ ನಾವು ಅನ್ವೇಷಣೆ ಮಾಡುತ್ತಿದ್ದೇವೆ~ ಎಂದು ಪರಮಾಣು ಇಂಧನ ಆಯೋಗದ ಅಧ್ಯಕ್ಷ  ಶ್ರೀಕುಮಾರ್ ಬ್ಯಾನರ್ಜಿ ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು. ಪ್ರಸ್ತುತ ಮುಂಬೈ ಬಳಿಯ ತಾರಾಪುರದಲ್ಲಿರುವ ಘನ ತ್ಯಾಜ್ಯ ಸಂಗ್ರಹ ವ್ಯವಸ್ಥೆಯನ್ನು ಇದಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT